ಹೂಡೇಂ: ಸ.ಹಿ.ಪ್ರಾ ಶಾಲೆ ವಯೋ ನಿವೃತ್ತಿ ಬ.ಮು.ಗುರುಗಳು ಜಿ ಸೋಮಶೇಖರ್ ಬೀಳ್ಕೊಡುಗೆ.!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೧ ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಶಿಕ್ಷಕರಾದ ಜಿ ಸೋಮಶೇಖರ್ ಅವರನ್ನು ಶಿಕ್ಷಕರ ವೃಂದದವರು ಆತ್ಮೀಯವಾಗಿ ಬೀಳ್ಕೊಡುಗೆ ಸಮಾರಂಭವನ್ನು ಮಾಡಿದರು. ಹಿರೇಕುಂಬಳಗುಂಟೆ, ಗೊಲ್ಲರಹಟ್ಟಿ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಥಮ ಬಾರಿಗೆ ಶಿಕ್ಷಕರಾಗಿ ೭ ವರ್ಷಗಳು, ನಂತರ ಪೂಜಾರಹಳ್ಳಿ, ಕೆ.ಬಿ ಹಟ್ಟಿ ೧೮ ವರ್ಷಗಳು, ನಂತರ ಹೂಡೇಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲಿ ಬ.ಮು.ಗುರುಗಳು ಆಗಿ ೫ ವರ್ಷ ೯ ತಿಂಗಳು ವೃತ್ತಿಯನ್ನು ಮಾಡಿ 2021 ಜುಲೈ ತಿಂಗಳು ರಂದು ವಯೋ ನಿವೃತ್ತಿ ಹೊಂದಿದರು. ಈ ಸಂದರ್ಭದಲ್ಲಿ ಹೆಚ್.ನರಸಿಂಹರೆಡ್ಡಿ ಪ್ರ.ಮು ಗು, ಜಿ.ಎಂ.ಅನ್ನಪೂರ್ಣ ಶಿಕ್ಷಕಿ, ಜಿ.ಬಿ.ಮಚ್ಚೇಂದ್ರನಾಥ ಶಿಕ್ಷಕರು , ಬಿಆರ್.ಮಂಜುಳ ಶಿಕ್ಷಕಿ, ಶಿವಪ್ರಸಾದ ಎಸ್ ಆಂಗ್ಲ ಭಾಷೆ ಶಿಕ್ಷಕರು, ಗೋವಿಂದಪ್ಪ ಎ.ಕೆ ಗೌ.ಶಿಕ್ಷಕರು, ಎಸ್.ಡಿ.ಎಂ.ಸಿ.ಅದ್ಯಕ್ಷರು ಚಿನ್ನೋಬಯ್ಯನವರು, ಗ್ರಾ.ಪಂ ಅದ್ಯಕ್ಷರು ಕರಿಬಸಮ್ಮ ದುರ್ಗಪ್ಪನವರು, ಕಂಪಳರಂಗ ಪ್ರೌಢಶಾಲೆಯ ಮುಖೋಪದ್ಯಾಯರು ಬಿ.ಜೆ ಅಜ್ಜಯ್ಯನವರು, ಸ.ಹಿ.ಪ್ರಾ.ಶಾಲೆ ತಾಯಕನಹಳ್ಳಿ ಬ.ಮು.ಗುರುಗಳು ಡಿ ಪಾಲಯ್ಯನವರು, ಗ್ರಾ.ಪಂ ಸದಸ್ಯರುಗಳಾದ ಕುರಿಪಾಲಣ್ಣ, ಎಂ.ಟಿ ಯಲ್ಲಪ್ಪ, ಹೂಡೇಂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಬರುವ ಎಲ್ಲ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರುಗಳು ,ಕಂಪಳರಂಗ ಪ್ರೌಢಶಾಲೆಯ ಸಹ ಶಿಕ್ಷಕರುಗಳು ಆರೋಗ್ಯ ಇಲಾಖೆಯಿಂದ ಧನುಂಜಯನವರು ಭಾಗವಹಿಸಿದ್ದರು…

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend