;

ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ WWE ಸೂಪರ್ ಸ್ಟಾರ್ ಗಳು…!!!

ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ WWE ಸೂಪರ್ ಸ್ಟಾರ್ ಗಳು

ಮನರಂಜನಾ ಕುಸ್ತಿ ಸಂಸ್ಥೆ WWE ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ್ದು, ಜಾನ್ ಸಿನಾ, ಸ್ಟೆಫನಿ ಮೆಕ್ ಮಹೊನ್ ಸೇರಿದಂತೆ ಹಲವು ಸೂಪರ್ ಸ್ಟಾರ್ ಗಳು ಹಾಗೂ ಭಾರತದ ಕುಸ್ತಿ ಪಟುಗಳು ಕೂಡ ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರಿದ್ದಾರೆ.

WWE ಸಂಸ್ಥೆಯ ಅಧ್ಯಕ್ಷೆ ಸ್ಟೆಫನಿ ಮೆಕ್ ಮಹೊನ್, ಸೂಪರ್ ಸ್ಟಾರ್ ಜಾನ್ ಸೀನಾ ಸೇರಿದಂತೆ ಚಾರ್ಲೊಟ್ ಫ್ಲೇರ್, ನಿಕ್ಕಿ ಎ.ಎಸ್.ಎಚ್, ಡೇಮಿಯನ್ ಪ್ರೀಸ್ಟ್, ಬಾಬಿ ಲ್ಯಾಶ್ಲೆ, ಅಲೆಕ್ಸಾ ಬ್ಲಿಸ್, ಇವಾ ಮೇರಿ, ಕರಿಯೊ ಕ್ರಾಸ್, ಸೇಥ್ ಲಾರೆನ್ಸ್ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಇನ್ನೂ ಭಾರತೀಯ ಸೂಪರ್ ಸ್ಟಾರ್ ಗಳಾದ ಶ್ಯಾಂಕಿ, ವೀರ್ ಮತ್ತು ಜಿಂದರ್ ಮಹಲ್ ಹಾಗೂ ಗ್ರೇಟ್ ಖಾಲಿ ಬಳಗದ ಹಲವು ತಾರೆಗಳು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಹಾರೈಸಿದ್ದಾರೆ. WWE ಒಂದು ಮನರಂಜನೆಯ ಕುಸ್ತಿಯಾಗಿದ್ದು, ಧಾರವಾಹಿ ರೂಪದಲ್ಲಿ ಪ್ರಸಾರವಾಗುತ್ತಿರುತ್ತದೆ. ಈ ಶೋಗೆ ಭಾರತದಲ್ಲಿ ಅತೀ ಹೆಚ್ಚು ವೀಕ್ಷಕರಿದ್ದಾರೆ.

ಇತ್ತೀಚೆಗೆ ಭಾರತೀಯ ಕುಸ್ತಿಪಟುಗಳಿಗೆ WWE ಹೆಚ್ಚಿನ ಅವಕಾಶಗಳನ್ನು ನೀಡಿದೆ. ಗ್ರೇಟ್ ಖಲಿ ಶಿಷ್ಯರು ಇದೀಗ WWEಯಲ್ಲಿ ಅತ್ಯುತ್ತಮ ಪ್ರದರ್ಶನಗಳಿಗಾಗಿ ಸುದ್ದಿಯಲ್ಲಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;