;

ಕೂಡ್ಲಿಗಿಃ ೭೪ ಕೆರೆಗಳಿಗೆ ಶಾಶ್ವತ ನೀರುಣಿಸುವ ಯೋಜನೆಗೆ ಭೂಮಿಪೂಜೆ…!!!

ಕೂಡ್ಲಿಗಿಃ ೭೪ ಕೆರೆಗಳಿಗೆ ಶಾಶ್ವತ ನೀರುಣಿಸುವ ಯೋಜನೆಗೆ ಭೂಮಿಪೂಜೆ
ನಾನು ಚುನಾವಣೆಗೋಸ್ಕರ ರಾಜಕಾರಣ ಮಾಡಲ್ಲ- ಎನ್.ವೈ.ಗೋಪಾಲಕೃಷ್ಣ.
೧೮ ತಿಂಗಳಲ್ಲಿಯೇ ಕೆರೆಗಳಿಗೆ ನೀರುಣಿಸುವ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ

ಕೂಡ್ಲಿಗಿಃ ನಾನು ಚುನಾವಣೆಗೋಸ್ಕರ ರಾಜಕಾರಣ ಮಾಡುವುದಿಲ್ಲ,ಜನಪರ ಕಾಳಜಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತೇನೆ ಬಡರೈತರ, ಕೂಲಿಕಾರ್ಮಿಕರ ಪರಿಸ್ಥಿತಿ ಗೊತ್ತು ನನಗೂ ಹಸಿವನ ಬೆಲೆ ಗೊತ್ತಿದೆ ಈಗಾಗಿಯೇ ಇಂತಹ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲು ಸಾಧ್ಯವಾಗಿದೆ, ಸರ್ಕಾರ ನಿಗದಿ ಮಾಡಿರುವ ಅವಽಗೆ ಮುನ್ನವೇ ಕೆರೆಗಳಿಗೆ ನೀರುಣಿಸುವ ಕಾಮಗಾರಿಯನ್ನು ೧೮ ತಿಂಗಳುಗಳೊಳಗೆ  ಪೂರ್ಣಗೊಳಿಸುವ ಗುರಿ ಇದ್ದು ಇದಕ್ಕೆ ಸಾರ್ವಜನಿಕರ, ರೈತರ ಸಹಕಾರ ಮುಖ್ಯವಾಗಿದೆ  ಎಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಭಾವನಾತ್ಮಕವಾಗಿ ನುಡಿದರು.
ಅವರು ಬಾನುವಾರ ತಾಲೂಕಿನ ಪಾಲಯ್ಯನಕೋಟೆ ಗ್ರಾಮದ ಕೆರೆ ಆವರಣದಲ್ಲಿ ನಡೆದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ೭೪ ಕೆರೆಗಳಿಗೆ ೬೭೦ ಕೋಟಿ ವೆಚ್ಚದ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡುತ್ತಿದ್ದರು. ನಾನು ಮೊಳಕಾಲ್ಮೂರು ಕ್ಷೇತ್ರದ ಶಾಸಕನಾಗಿದ್ದಾಗ ನಾಲ್ಕಾಣೆ ಕೆಲಸ ಮಾಡಿದ್ದೇನೆ, ಬಳ್ಳಾರಿ ಗ್ರಾಮಾಂತರ ಶಾಸಕನಾಗಿದ್ದಾಗ ಐವತ್ತು ಪೈಸೆ ಕೆಲಸ ಮಾಡಿದ್ದೇನೆ, ಕೂಡ್ಲಿಗಿ ಕ್ಷೇತ್ರದ ಶಾಸಕನಾಗಿ ನಾನು ಒಂದು ರೂಪಾಯಿ ಪೂರ್ಣ ಕೆಲಸ ಮಾಡಿದ ತೃಪ್ತಿ ಇದೆ. ಮುಂದಿನ ಬಾರಿ ಶಾಸಕನಾದರೆ ೨ ರೂಪಾಯಿ ಕೆಲಸ ಮಾಡುವ ಉತ್ಸಾಹ ಇದೆ ಆ ೨ ರೂಪಾಯಿ ಕೆಲಸ ಕೂಡ್ಲಿಗಿ ಕ್ಷೇತ್ರದಲ್ಲಿ ನೋಡಬೇಕೋ ಅಥವಾ ಬೇರೆ ಕ್ಷೇತ್ರದಲ್ಲಿ ನೋಡಬೇಕೋ ಅದು ನಿಮಗೆ ಬಿಟ್ಟಿದ್ದು ಎಂದು ಕ್ಷೇತ್ರದ ಮತದಾರರಿಗೆ ಮಾರ್ಮಿಕವಾಗಿ ಉದಾಹರಣೆ ನೀಡುವುದರ ಮೂಲಕ ಶಾಸಕರು ಮುಕ್ತವಾಗಿ ತಮ್ಮ ರಾಜಕೀಯ ಜೀವನವನ್ನು ಸಭೆಯಲ್ಲಿ ವಿವರಿಸಿದರು. ಕೂಡ್ಲಿಗಿ ಬೇರೆ ಅಲ್ಲ, ಕೊಟ್ಟೂರು ಬೇರೆ ಅಲ್ಲ ಕೊಟ್ಟೂರು ಕೆರೆಗೆ ನೀರು ತುಂಬಿಸಲು ನನ್ನ ಸಹಕಾರ ಇದೆ. ಎಂ.ಎಂ.ಜೆ.ಹರ್ಷವರ್ಧನ್  ಸೇರಿದಂತೆ ಕೂಡ್ಲಿಗಿ ತಾಲೂಕಿನ ಮುಖಂಡರು ನನ್ನ ಗೆಲುವಿಗೆ ಹೆಗಲುಕೊಟ್ಟು ಶ್ರಮಿಸಿದ್ದಾರೆ ಅವರಿಗೆ ನಾನು ಚಿರಋಣಿಯಾಗಿರುವೆ ಈಗಾಗಿಯೇ ಕ್ಷೇತ್ರದ ಕೆಲಸ..

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;