;

ಸ್ವಾತಂತ್ರ್ಯ ಪೂರ್ವದಿನ ರಾಷ್ಟ್ರಪಿತ ಮಹಾತ್ಮಗಾಂಧಿಜೀ ಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಎಂ,ಪಿ,ವೀಣಾಮಹಾಂತೇಶ್!!

ಸ್ವಾತಂತ್ರ್ಯ ಪೂರ್ವದಿನ ರಾಷ್ಟ್ರಪಿತ ಮಹಾತ್ಮಗಾಂಧಿಜೀ ಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಎಂ,ಪಿ,ವೀಣಾಮಹಾಂತೇಶ್!!

ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ 75 ನೇ ವರ್ಷದ ಸ್ವಾತಂತ್ರೋತ್ಸವದ ಸಂಭ್ರಮದ ಪ್ರಯುಕ್ತ ದಿನಾಂಕ:-14-08-2021 ರಂದು ಸ್ವಾತಂತ್ರ್ಯಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಕ್ಷೇತ್ರದ ಜನನಾಯಕಿ, *ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ,ಪಿ,ವೀಣಾ,ಮಹಾಂತೇಶ್ ಅವರು ವಿಶೇಷ ಹಾಗೂ ವಿಶಿಷ್ಟವಾಗಿ ಹಮ್ಮಿಕೊಂಡಿದ್ದರು.

ಅಂದು ಸ್ವಾತಂತ್ರ್ಯ ಪಡೆಯುವ ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ದೇಶದಾದ್ಯಂತ ಸಂಘಟನೆಯನ್ನು ಬಲಪಡಿಸುವ ಸಮಯದಲ್ಲಿ ಹೋರಾಟದ ಮುಂಚೂಣಿವಹಿಸಿದ ರಾಷ್ಟ್ರಪಿತ ಮಹಾತ್ಮಗಾಂಧಿಜೀ ಯವರು ತಂಗಿದ್ದ ಹರಪನಹಳ್ಳಿಯ ಜ್ಯೂನಿಯರ್ ಕಾಲೇಜಿನಲ್ಲಿ ಈ ಹಿಂದಿನ ಶಾಸಕರಾಗಿದ್ದ ಎಂ,ಪಿ,ರವೀಂದ್ರ ಅವರ ಕಾರ್ಯಕ್ಷಮತೆಯ ಕನ್ನಡಿಯಂತೆ ನಿರ್ಮಾಣಗೊಂಡ ಗಾಂಧಿಮೆಮೋರಿಯಲ್ಹಾಲ್ ನಲ್ಲಿ ಸಂಗೀತ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ನೆರವೇರಿಸಲಾಯಿತು. ಗಾಂಧೀಜಿಯವರ ಪ್ರಿಯವಾದ ಭಜನೆಗಳ ಗಾಯನವಾಯಿತು.

ಕೆಪಿಸಿಸಿಯ ಪ್ರತಿಯೊಂದು ಆದೇಶವನ್ನು ಚಾಚುತಪ್ಪದೇ ಪಾಲಿಸುತ್ತಾ ನಾಯಕರ ಪ್ರಶಂಸೆಗೆ ಪಾತ್ರರಾದ ಎಂಪಿ ವೀಣಾಕ್ಕ ಕ್ಷೇತ್ರದ ಜನರ ಪ್ರೀತಿಯ ಅಕ್ಕ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಎಡಿಬಿ ಕಾಲೇಜ್ ನಿವೃತ್ತ ಉಪನ್ಯಾಸಕರಾದ ಶ್ರೀ ರಾಜಪ್ಪ ಸರ್ ಅವರು ಭಾರತ ಸ್ವಾತಂತ್ರ್ಯ ಹೋರಾಟ ನಡೆದು ಬಂದ ದಾರಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಈ ಸಂದಭ೯ದಲ್ಲಿ ಹರಪ್ಪನಹಳ್ಳಿ ಪಟ್ಟಣದ ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀಮತಿ ಕವಿತಾ ವಾಗೀಶ್ ಮತ್ತು ಚಿಗಟೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ರೇಕಮ್ಮ ಹಾಗೂ ಬಳ್ಳಾರಿ ಜಿಲ್ಲಾ ಸೋನಿಯಾ ಗಾಂಧಿ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಗಾಯತ್ರಿದೇವಿ ಮತ್ತು ಶ್ರೀ ನಾಗರಾಜ್ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ ಮತ್ತು ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಸಿ ಹಾಗೂ ಕಾಂಗ್ರೆಸ್ ಯುವ ಕಾರ್ಯಕರ್ತರಾದ ದುರ್ಗೇಶ್ ಅಪ್ಪ ರಮೇಶ್ ರವಿಚಂದ್ರನ್ ಗುರುಬಸವರಾಜ್ ಪ್ರಜ್ವಲ್ ಕುಮಾರ್ ಅರುಣ್ ಕುಮಾರ್ ಮದನ್ ಸ್ವಾಮಿ ಸಾಗರ್ ಪಾಟೀಲ್ ರಮೇಶ್ ರೇಕಮ್ಮ ರತ್ನಮ್ಮ ನೇತ್ರಾವತಿ ಗಂಗಮ್ಮ ರೂಪ ಆಲಿಯಾ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend