;

ಬಣವಿಕಲ್ಲು :ದುರ್ಗಾಂಬಿಕಾ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ರೂಪಾಯಿ 2.00 ಲಕ್ಷ ದ ಡಿಡಿ ಯನ್ನು ಹಸ್ತಾಂತರಿಸಲಾಯಿತು…!!!

ಕೂಡ್ಲಿಗಿ ತಾಲೂಕು ಬಣವಿಕಲ್ಲು ಗ್ರಾಮದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ರೂಪಾಯಿ 2.00 ಲಕ್ಷ ದ ಡಿಡಿ ಯನ್ನು ಹಸ್ತಾಂತರಿಸಲಾಯಿತು. ವಿಜಯನಗರ ಜಿಲ್ಲೆಯ ನಿರ್ದೇಶಕರಾದ ಕೆ. ಚಿದಾನಂದ ಇವರು ದೇವಸ್ಥಾನದ ಕಮಿಟಿಯ ಮುಖ್ಯಸ್ಥರಿಗೆ ಸಿಡಿಯನ್ನು ಹಸ್ತಾಂತರಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಾಡಿನ ಸಾವಿರಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧನಸಹಾಯವನ್ನು ಒದಗಿಸಲಾಗುತ್ತಿದೆ. ದೇವಸ್ಥಾನಗಳು ಇಡೀ ಊರಿನ ಪ್ರತಿಬಿಂಬ ವಿದ್ದಂತೆ. ಒದಗಿಸಲಾದ ಮೊತ್ತವನ್ನು ಉತ್ತಮ ರೀತಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬೆಳೆಸಿಕೊಳ್ಳುವಂತೆ ಕೂಡ್ಲಿಗಿ ಯೋಜನಾಧಿಕಾರಿ ಮಂಜುನಾಥ್ ಬಿ ಅವರು ಮಾಹಿತಿ ನೀಡಿದರು. ದೇವಸ್ಥಾನದ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡು ಕೊನೆಯ ಹಂತದಲ್ಲಿ ಹಣದ ಅಭಾವವುಂಟಾದಾಗ ಶ್ರೀ ಕ್ಷೇತ್ರದಿಂದ ಒದಗಿಸಲಾದ ಸಂಪೂರ್ಣ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿದೆ ಎನ್ನುತ್ತಾ ದೇವಸ್ಥಾನ ಕಮಿಟಿಯ ಹಾಗೂ ಗ್ರಾಮಸ್ಥರ ಪರವಾಗಿ ಮಾನ್ಯ B M ಪ್ರಭುದೇವ್ ಊರಿನ ಮುಖ್ಯಸ್ಥರು ಇವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹಾಗೂ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸಮಿತಿಯ ಮುಖ್ಯಸ್ಥರಾದ ಶ್ರೀ BM ಪ್ರಶಾಂತ್ ಗೌಡ ರವರು ನಿರೂಪಿಸಿದರು . ಈ ಸಂದರ್ಭದಲ್ಲಿ ಕೊಟ್ಟೂರು ಯೋಜನಾಧಿಕಾರಿ ಶ್ರೀ ನವೀನ್ ಕುಮಾರ್
B M ಲಿಂಗನಗೌಡ ಊರಿನ ಮುಖ್ಯಸ್ಥರು,
B H ಬಸವರಾಜ್ ಊರಿನ ಮುಖ್ಯಸ್ಥರು, ಕೆ ವಿರೂಪಾಕ್ಷಿ ವರ್ತಕರು, B M ಮಂಜುನಾಥ್ ದೇವಸ್ಥಾನ ಕಮಿಟಿ ಅಧ್ಯಕ್ಷರು,
B S ಪ್ರಶಾಂತಗೌಡ ದೇವಸ್ಥಾನ ಕಮಿಟಿ ಕಾರ್ಯದರ್ಶಿ, ಪೂಜಾರ್ ಮಾರಣ್ಣ ಮಾಜಿ ಗ್ರಾ ಪಂ ಅಧ್ಯಕ್ಷರು, B H ದುರಗಪ್ಪ ಮಾಜಿ ಗ್ರಾ ಪಂ ಸದಸ್ಯರು, R ವೀರಣ್ಣ ಗ್ರಾ ಪಂ ಸದಸ್ಯರು, ಮೇಲ್ವಿಚಾರಕ ಸಹದೇವ್, ಸೇವಾಪ್ರತಿನಿಧಿಗಳಾದ ರೇಖಾ, ಗಣೇಶ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend