ಮಧುರಖಂಡಿ ಗ್ರಾಮ ಪಂಚಾಯತ್ ಸದ್ಯಸನ ಅಕ್ರಮ ಮರಳು ದಂದೆ ಜೋರು, ಕಣ್ಣ ಮುಚ್ಚಿ ಕುಳಿತ ಪೊಲೀಸ್ ಇಲಾಖೆ??
ಬಾಗಲಕೋಟ್ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಅಕ್ರಮ ಮರಳು ಮಾಫಿಯಾ ಅಡ್ಡೆಗಳ ಜೋರಾಗಿ ನಡೆಯುತ್ತಿದೆ. ಅರಣ್ಯ ಇಲಾಖೆಯ ಸರ್ವೇ ನಂಬರ 205 ರ ಹತ್ತಿರ ನಡೆಯುತ್ತಿದ್ದರು ಕಣ್ಣು ಮುಚ್ಚಿಕೊಂಡು ಕುಳಿತಿರುವ ಅಧಿಕಾರಿಗಳು.
ಮಧುರಖಂಡಿ ಗ್ರಾಮ ಪಂಚಾಯತ್ ಸದಸ್ಯರಾದ ದಸ್ತಗೀರಸಾಬ. ಅ. ಅರಬ ಮತ್ತು ಈತನ ತಮ್ಮನಾದ ರಾಜು ಅ ಅರಬ ಈ ವ್ಯಕ್ತಿಗಳು ಕಲೋಳ್ ಗ್ರಾಮದ ಅರಣ್ಯ ಪ್ರದೇಶ ಸ್ಥಳದಲ್ಲೇ ಸರ್ವೇ no 205 ರಲ್ಲಿ ಮಣ್ಣು ಶೇಖರಣೆ ಮಾಡಿ ಅದಕ್ಕೆ ಹೊಂದಿಕೊಂಡ ಪಕ್ಕದ ಜಮೀನಿನಲ್ಲಿ ಮಣ್ಣನು ತೊಳೆದು ಮಣ್ಣಿನಲಿರುವ ಮರಳನ್ನು ಬೇರೆ ಮಾಡಿ ಈ ಮರಳನ್ನು ರಾತ್ರಿ ಸಮಯದಲ್ಲಿ ಲಾರಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಕಳ್ಳ ದಾರಿಯಮೂಲಕ ಕಳಿಸುತ್ತಾರೆ.
ಜಮಖಂಡಿ ಮತ್ತು ಬನಹಟ್ಟಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಪ್ರದೇಶದಲಿಯೇ ಅನೇಕ ಅಕ್ರಮ ಮರಳು ಅಡ್ಡಗಳು ಮರಳು ಮಾಪಿಯ ನಡೆಸುತ್ತಿದ್ದರು ಪೊಲೀಸ್ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಕಣ್ಣು ಮುಚ್ಚಿಕೊಂಡಿರಾ ಎನ್ನುವ ಅನುಮಾನ??? ಇಂತಹ ಸುದ್ದಿಗಳನ್ನು ವರದಿ ಮಾಡಲು ಹೋದ ವರದಿಗಾರರ ಮೇಲೆ ಗುಂಡಾಗಿರಿ ಮಾಡುತ್ತಾರೆ 500-1000 ಸಾವಿರ ಕೊಡುತೇನೆ ತೆಗೆದುಕೋ ಇಲ್ಲವೇನoದರೆ ನಾವು ಕೆಟ್ಟ ಜನ ಏನಬೇಕಾದರೂ ಮಾಡಲು ಸಿದ್ದ ಎಂದು ಅವಾಜ್ ಹಾಕುತ್ತಾರೆ. ಜೀವ ಉಳಿಸಿಕೊಳುವ ಸಲುವಾಗಿ ಮರಳಿ ಬರಬೇಕು ಇನ್ನಾದರೂ ಇಂತಹ ಮರಳು ಮಾಫಿಯಗಳ ಮೇಲೆ ಕಾನೂನು ಕ್ರಮ ಕೈಗೊಳುತ್ತೀರಿ ಎಂದು ಪತ್ರಿಕೆಯ ಆಶಯ .
ವರದಿ :-ಮಹಾಲಿಂಗ ಹ ಗಗ್ಗರಿ
ಜಿಲ್ಲಾ ವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
