ಹರಿಹರ ಮತ್ತು ಹರಪನಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಮೃತ್ಯು ಕೋಪವಾದ ತಗ್ಗು ಗುಂಡಿಗಳು..
ಹರಿಹರ ಮತ್ತು ಹರಪನಹಳ್ಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಯಮಧೂತರು ಕಾಯುತ್ತಿರುವ ಹಾಗೆ ತಗ್ಗು ಗುಂಡಿಗಳು ಸಾರ್ವಜನಿಕರಿಗೆ ಕಾಣುತ್ತಿದ್ದೂ.ಪಿಡಬ್ಲ್ಯಾಡಿ ಅಧಿಕಾರಿಗಳು ಮತ್ತು ಶಾಸಕರು ಕಣ್ಣು ಮುಚ್ಕೊಂಡು ಕೂತಿದ್ದಾರೆ.ಕರಲಹಳ್ಳಿ,ಕುರುಬರ ಹಳ್ಳಿ,ಸುಮಾರು 1ವರೆ ಕಿಲೋ ಮೀಟರ್ ರಸ್ತೆಯೂ ಸಂಪೂರ್ಣ ವಾಗಿ ಹಾಳಾಗಿದ್ದು ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಇದ್ದು ಅವರಿಸಿರುವ ಈ ರಸ್ತೆ ಯಾವುದು ಎಂಬುದು ಅರಿಯದಾಗಿದೆ ಕೆಲವಮ್ಮೆ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವರಾರು ಮುಗುಚಿ ಬಿದ್ದು ಕೆಲವರು ಆಸ್ಪತ್ರೆ ಸೇರಿದರೆ ಇನ್ನು ಕೆಲವರು ಪ್ರಾಣವನ್ನೇ ಕಳಿದು ಕೊಂಡಿದ್ದಾರೆ.
ಹರಪನಹಳ್ಳಿಯಿಂದ ಹರಿಹರಕ್ಕೆ ನಿತ್ಯ ಸಂಚಾರ ಮಾಡುವ ಈ ಮಾರ್ಗದಲ್ಲಿ ಬರುವಾಗ ಹೋಗುವಾಗ ನರಕಯಾತನೆ ಅನುಭವಿಸುವಂತಾಗಿದೆ ಹಡಗೆಟ್ಟ ರಸ್ತೆಯಲ್ಲಿ ಹೋಗುವ ವಾಹನಗಳ ಸಂಚಾರ ಕಂಡರೆ ಮೈಜುಮ್ಮೀನಿಸುತ್ತದೆ.ಇಂತಹ ಕೆಟ್ಟ ರಸ್ತೆಗಳು ಬಸ್ ಚಾಲಕರು ಗುಂಡಿಗಳನ್ನು ತಪ್ಪಿಸಲು ಹರ್ ಸಾಹಸ ಮಾಡಬೇಕು.

ಕೆಲವಮ್ಮೆ ಗುಂಡಿಗಳನ್ನು ತಪ್ಪಿಸಲು ಹೋಗಿ ಮುಂದೆ ಬರುವ ವಾಹನಗಳಿಗೆ ತೊಂದರೆ ಆಗಿರುವುದು ಉಂಟು,ಮತ್ತೊಂದೆಡೆ ಗರ್ಭಿಣಿ ಮಹಿಳೆಯರು ಸಾಗುವಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ,ದ್ವಿಚಕ್ರ ವಾಹನ ಸವರಾರು ನಿತ್ಯ ಸಂಚಿರಿಸುವ ಪ್ರಯಾಣಿಕರು,ಜನ ಪ್ರತಿನಿಧಿಗಳು ಸರ್ಕಾರಕ್ಕೆ ಹಾಗೂ ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾರೆ,ಈ ಕೊಡಲೇ ಜನ ಪ್ರತಿನಿದಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚರ ಗೊಂಡು ಈ ರಸ್ತೆಯ ಸಮಸ್ಯೆಯನ್ನು ನೀವಾರಿಸಲು ಮುಂದಾಗದಿದ್ದರೆ,ಸಾರ್ವಜನಿಕರು ಹಾಗೂ ವಾಹನಗಳ ಸಮೇತ ತಮ್ಮ ತಮ್ಮ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವು ಎಂದು ಸಾರ್ವಜನಿಕರು.ಅಗ್ರಹಿಸಿರುತ್ತಾರೆ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
