ಸಿಂಧನೂರ್ : ರೈತ ವಿರೋಧಿ ಕೃಷಿ ಕಾಯ್ದೆ ಪಡೆಯಬೇಕು ಎಂದು ಪ್ರತಿಭಟನೆ.
ಆಗಸ್ಟ್- 9- 1942 ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ದೇಶವ್ಯಾಪಿ ಪ್ರತಿಭಟನೆ ದೇಶದ ರೈತರ ಕಾರ್ಮಿಕರ ಹಾಗೂ ಕೃಷಿಕೂಲಿಕಾರರ ಬೇಡಿಕೆ ಈಡೇರಿಸಲು ತಹಸೀಲ್ದಾರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
” ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ” ಎಂದು ಕೋಟ್ಯಾಂತರ ದೇಶ ಪ್ರೇಮಿಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದರು.ಅಂದು ಒಂದು “ಈಸ್ಟ್ ಇಂಡಿಯಾ ಕಂಪನಿ” ಭಾರತವನ್ನು ಲೂಟಿ ಮಾಡುತ್ತಿತ್ತು. ಆದರೆ ಇಂದು ಕೇಂದ್ರ ಸರ್ಕಾರ ಅಂತ ಹತ್ತಾರು ವಿದೇಶಿ ಕಂಪನಿಗಳಿಗೆ ದೇಶದ ಕೃಷಿ ಕೈಗಾರಿಕೆ ಮತ್ತು ದೇಶದ ಸರಕಾರಿ ಸಂಸ್ಥೆಗಳನ್ನು ಅವರ ವಶಕ್ಕೆ ನೀಡಿದೆ ಹಾಗೂ ದೇಸಿ ಕಂಪನಿಗಳಿಗೂ ಅವಕಾಶ ನೀಡಿದೆ ದೇಶದ ಜನರ ಸೇವೆ ಮಾಡಬೇಕಾಗಿದ್ದ ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಸೇವೆ ಮಾಡುತ್ತಿದೆ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ತ್ಯಾಗಮಯ ಹೋರಾಟ ನಿಲ್ಲುವುದಿಲ್ಲ ಒಂದು ಘೋಷಿಸಿದ್ದು, ಅವರ ಹೋರಾಟವನ್ನು ಬೆಂಬಲಿಸುವದರೊಂದಿಗೆ, ಕೇಂದ್ರ ಸರ್ಕಾರದ ಈ ದುರಾಡಳಿತದ ವಿರುದ್ಧ ಇಂದು ದೇಶಾದ್ಯಂತ CITU, AIKS, AIAWU, ಸಂಘಟನೆಗಳು ಜಂಟಿಯಾಗಿ ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಿದ್ದು, ಅದರ ಭಾಗವಾಗಿ ಇಂದು ಸಿಂಧನೂರಿನಲ್ಲಿರೈತರು,ಕೃಷಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು,ಬಿಸಿಊಟ ಕಾರ್ಮಿಕರು,ಕಟ್ಟಡಕಾರ್ಮಿಕರು,ದಿನಗೂಲಿ ಕಾರ್ಮಿಕರು, ದಲಿತ ಹಾಗೂ ದೇವದಾಸಿ ಮಹಿಳೆಯರು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು, ಗ್ರಾಮ ಪಂಚಾಯಿತಿ ನೌಕರರು ಬೆಂಬಲಿಸುವುದಾಗಿ ಪ್ರತಿಭಟನೆಕಾರರನ್ನು ಉದ್ದೇಶಿಸಿ ಶೇಕ್ಷಾಖಾದ್ರಿ ಮಾತನಾಡಿದರು.
ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರದಲ್ಲಿ 14 ಬೇಡಿಕೆಗಳಾದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಜನವಿರೋಧಿ ಕೃಷಿ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದಿಯನ್ನು ರದ್ದುಪಡಿಸಬೇಕು. ರೈತರ ಎಲ್ಲ ಬೆಳೆಗಳಿಗೆ ಖಾತರಿ ಖರೀದಿಯೊಂದಿಗೆ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ನೀಡುವ ಕಾಯ್ದೆ ಮಾಡಬೇಕು, ಋಣಮುಕ್ತ ಕಾಯ್ದೆಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು. ರಾಜ್ಯ ಭೂ ಸುಧಾರಣಾ ಕಾಯ್ದೆ ಎಪಿಎಂಸಿ ಕಾಯ್ದೆ ಜಾನುವಾರು ಹತ್ಯೆ ಕಾಯ್ದೆಗಳು ಜನವಿರೋಧಿ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನವನ್ನು ಹೆಚ್ಚಿಸಿ ದಿನಕ್ಕೆ ರೂ. 600 ನಂತೆ ಕನಿಷ್ಠ ಎರಡು 200 ದಿನಗಳ ಕೆಲಸ ಖಾತ್ರಿಪಡಿಸಬೇಕು, ಮತ್ತು ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ 10 ಸಾವಿರ ನಗದು ವರ್ಗಾವಣೆ ಮಾಡಬೇಕು.ಹೀಗೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶೇಕ್ಷ ಕಾದ್ರಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ, ರೇಣುಕಮ್ಮ ತಾಲೂಕು ಅಧ್ಯಕ್ಷರು, ಯಂಕಪ್ಪ ಕೆಂಗಲ್ ಕಾರ್ಯದರ್ಶಿ, ಹನುಮಂತಪ್ಪ ಮ್ಯಾಗಳಮನಿ ಉಪಾಧ್ಯಕ್ಷರು, ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ,ವೀರೇಶ್ ಸೋಮಲಾಪುರ ಕಾರ್ಯದರ್ಶಿ, ವೀರನಗೌಡ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ, ಗೆಸುದರಾಜ್ ಮಕಾನಧಾರ, ಗರಿಭಸಾಬ, ನರಸಿಂಹಪ್ಪ ಇನ್ನೂ ಅನೇಕ ಪದಾಧಿಕಾರಿಗಳು, ರೈತರು, ಕೂಲಿಕಾರ್ಮಿಕರು, ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
