ಸಿಂಧನೂರು : ಕಿಸಾನ್ ಸಮ್ಮಾನ್ ನಿಧಿ ಪ್ರಧಾನಿ ಮೋದಿ ಚಾಲನೆ .
ಇಂದು ಪ್ರಧಾನಿ ಶ್ರೀ ನರೇಂದ್ರಮೋದಿ ಯವರಿಂದ ಪಿಎಂ ಕಿಸಾನ್ ಸಮ್ಮಾನ ನೀದಿ ಯೋಜನೆ ಅಡಿ 9.5 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಇಂದು 19 ಸಾವಿರ ಕೋಟಿ ರೂಪಾಯಿ ಸಮ್ಮಾನ್ ನಿಧಿಗೆ ವರ್ಗಾವಣೆ ಮಾಡಿದರು.ಈ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮ ವನ್ನು ಸಿಂಧನೂರಿನ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜನೆ ಮಾಡಲಾಗಿತ್ತು. ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಿರಾಜ್ ಪಾಷಾ ಮಾತನಾಡಿ ಈವರೆಗೂ ಒಂಬತ್ತು ಕಂತುಗಳಲ್ಲಿ 11 ಕೋಟಿ ರೈತರಿಗೆ 1.37 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲಾಗಿದೆ. ಕಿಸಾನ್ ಸನ್ಮಾನ್ ನಿಧಿಯ 2.28 ಕೋಟಿ ಫಲಾನುಭವಿಗಳನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಕ್ಕೆ ಸಂಪರ್ಕಿಸಲಾಗಿದೆ. ಈವೆಗೂ 2.32 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದರು.ಈ ಕಾರ್ಯಕ್ರಮದಅಧ್ಯಕ್ಷತೆಯನ್ನು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲಗುಂದ, ನಗರ ಮಂಡಲ ಅಧ್ಯಕ್ಷರಾದ ಪ್ರೇಮ ಸಿದ್ಧಾಂತಿ ಮಠ, ಅಂಬಾಮಠ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ರಾಜಶೇಖರ್ ಹಿರೇಮಠ,ಗೊಬ್ಬರಕಲ್ ಲಿಂಗರಾಜ, ಹಲಗಿ ಟಿ. ಸುಬ್ಬರಾವ್ ವಹಿಸಿದ್ದರು. ಪ್ರಾಸ್ತಾವಿಕ ನುಡಿಯನ್ನು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಹರಸೂರು ಬಸವರಾಜ್ ಹಳೆಮನೆ ರವಿ ರಾಠೋಡ್ ಕೃಷ್ಣಪ್ಪ ಶಾರದಮ್ಮ ಮಂಗಮ್ಮ ನಾಗರಾಜ್ ಷಣ್ಮುಖ ಇನ್ನು ಮುಂತಾದವರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
