ಪ್ಲಾಸ್ಟಿಕ್ ಧ್ವಜಕ್ಕೆ ಯಾಕಿಲ್ಲ ನಮ್ಮ ದೇಶದಲ್ಲಿ ನಿಷೇಧ.
ನಮ್ಮ ರಾಷ್ಟ್ರೀಯ ಹಬ್ಬ,74ನೇ ಸ್ವಾತಂತ್ರ್ಯದಿನಾಚರಣೆ ಸಮೀಪಿಸುತ್ತಿದ್ದಂತೆ, ನಮ್ಮ ರಾಷ್ಟ್ರದ ಧ್ವಜವನ್ನ ಪ್ಲಾಸ್ಟಿಕ್ನಲ್ಲಿ ತಯಾರಿಸಿ ಎಲ್ಲಾ ಬೀದಿಬೀದಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಇಂತಹ ರಾಷ್ಟ್ರಧ್ವಜವನ್ನು ಚಿಕ್ಕ ಮಕ್ಕಳು, ಯುವಕರು, ಎಲ್ಲರೂ ಬಳಸಿದ ನಂತರ, ಕಸದ ಗುಂಡಿ, ರಾಶಿಗೆ, ಸೇರುವುದು,ಎಲ್ಲರ ಕಾಲಿನ
ತುಳಿತಕ್ಕೆ ಸಿಕ್ಕುವುದು ಖಚಿತ.
ಇದರಿಂದ ನಮ್ಮ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿದಂತೆ ಯಾಗುತ್ತದೆ.
ಸರಕಾರ ಅಂಗಡಿಗಳಲ್ಲಿ, ಪ್ಲಾಸ್ಟಿಕ್ ಚೀಲ, ಮಾರಾಟ ಮಾಡುವುದನ್ನು ನಿಷೇಧಸಿದೆ,ಆದರೆ ನಮ್ಮ ರಾಷ್ಟ್ರಧ್ವಜ ಗಳನ್ನು, ಪ್ಲಾಸ್ಟಿಕ್ ನಲ್ಲಿ ತಯಾರುಮಾಡಿ,ಮಾರಾಟ ಮಾಡುತ್ತಿದ್ದರೂ, ನಮ್ಮ ಘನ ಸರಕಾರ ಯಾವುದೇ ಕ್ರಮತೆಗೆದುಕೊಳ್ಳದೆ, ಕುರುಡಾಗಿದೆ.
ಇಂತಹ ಪ್ಲಾಸ್ಟಿಕ್ ಧ್ವಜಗಳಿಂದ ನಮ್ಮದೇಶದಲ್ಲಿ ಪರಿಸರ ಮಾಲಿನ್ಯಉಂಟಾಗುವುದು ಖಂಡಿತ.,ನಮ್ಮರಾಷ್ಟ್ರಧ್ವಜಕ್ಕೆ, ಅವಮಾನ ಮಾಡಿದಂತೆ
ಆಗುವುದು.
ಸರಕಾರ, ಹಾಗು ಸಂಬಂಧಪಟ್ಟ ಅಧಿಕಾರಿಗಳು,ಪ್ಲಾಸ್ಟಿಕ್ ಧ್ವಜ ಗಳನ್ನು ರದ್ದು ಪಡಿಸಲು ಸೂಕ್ತಾ ಕ್ರಮ ತೆಗೆದುಕೊಳ್ಳಬೇಕು…

ಎಂ,ಎಲ್, ವೆಂಕಟೇಶ್.
ಎಚ್ಚರಿಕೆ ಕ್ರಾಂತಿಕಾರಿಪತ್ರಿಕೆ
ಉಪಸಂಪಾದಕರು.
ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
