ಖಾಸಗಿಕರಣ ಮಾಡಹೊರಟಿರುವ ಕೇಂದ್ರ ಸರ್ಕಾರದ ಆಡಳಿತವನ್ನು ಖಂಡಿಸಿ ವಿದ್ಯುತ್ ನೌಕರರಿಂದ ತಿಭಟನೆ…!!!

ಆತ್ಮೀಯ ರೈತ ಬಂಧುಗಳೇ, ಇದು ಕೇವಲ ಇಂಧನ ಇಲಾಖೆಯಲ್ಲಿ ಕೆಲಸವನ್ನು ನಿರ್ವಹಿಸುವ ಅಧಿಕಾರಿ / ನೌಕರ/ ಗುತ್ತಿಗೆದಾರರ ಶೋಷಣೆಯಲ್ಲಾ ಸಮಗ್ರ ಭಾರತದ ಜನರ ಅಳಿವು ಉಳಿವಿನ ಪ್ರಶ್ನೆಯಾಗಿದೆ!!!! ಏಳಿ ಎದ್ದೇಳಿ ಖಾಸಗೀಕರಣ ಎಂಬ ಪೆಡಂಭೂತ ತೊಲಗುವವರೆಗೂ ಒಕ್ಕೊರಲಿನಿಂದ ವಿರೋಧಿಸಿ ದೇಶವನ್ನು ಕೆಲವೇ ಕೆಲವು ಮಂದಿ ಬಲಾಡ್ಯ ಬಂಡವಾಳಶಾಹಿಗಳ ಗುಲಾಮಗಿರಿಯಿಂದ ಬಿಡಿಸಲು ಪ್ರತಿಯೊಬ್ಬರೂ ಹೋರಾಡಲೇ ಬೇಕಾದ ಅನಿವಾರ್ಯ ಸಂದರ್ಭ ಬಂದೊದಗಿದೆ !!!!! ನಾಗರೀಕ ಸಮಾಜ ಬಂದುಗಳೇ ಎದ್ದೇಳಿ  ೧೯೪೮ನೇ ಇಸವಿಯಲ್ಲಿಯೆ ಸಂವಿಧಾನವನ್ನು ರಚಿಸಿದ ಮಹಾನ್ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಾಹೇಬರವರು ಆರೋಗ್ಯ, ಶಿಕ್ಷಣ ಇಂಧನ ಯಾವುದೇ ಕಾರಣಕ್ಕೂ ಖಾಸಗಿಯಾಗಬಾರದು ಇವು ದೇಶದ ಉನ್ನತಿ ಪ್ರಗತಿಗೆ ಅತ್ಯಮೂಲ್ಯವಾದ ಇಲಾಖೆಗಳು ಇಂತಹ ಇಲಾಖೆಗಳು ದೇಶ ವಿರುವವರೆಗೂ ಸರ್ಕಾರಿ ಸೌಮ್ಯದ ಅಡಿಯಲ್ಲಿಯೇ ಕೆಲಸವನ್ನು ನಿರ್ವಹಿಸಬೇಕು ಎಂದು ತಿಳಿಸಿದರು….
ದುರಂತವೆಂದರೆ so called Leaders ಇಂದು ನಮ್ಮನ್ನಾಳುವ ಜನಪ್ರತಿನಿಧಿಗಳು ಮಾಡುತ್ತಿರುವುದಾದರೂ ಏನು???? ಇಂದು ಅಂತಹ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಒಮ್ಮೆ ಆಲೋಚಿಸಿ ನೋಡಿ………
ಹೆಚ್ಚಳವಾಗಿರುವ ಡೀಸೆಲ್ ದರದಿಂದ,ಹೊಸ ಕೊಳವೆ ಬಾವಿ ಕೊರೆಸುವುದು, ಟ್ರಾಕ್ಟರ್ ಬಾಡಿಗೆಗಳು ಗಗನಮುಖಿಯಾಗಿವೆ, ರಸಗೊಬ್ಬರ, ಕೀಟನಾಶಕಗಳ ಬೆಲೆ ದುಪ್ಪಟ್ಟಾಗಿದೆ, ಕೃಷಿ ಉಪಕರಣಗಳ ಬೆಲೆಯೂ ಕೂಡ 3 ಪಟ್ಟು ( PVC, ಕೊಳವೆಬಾವಿ ಪೈಪ್, cable,) ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಕೈಕೊಡುವ ಪಂಪ್ ಸೆಟ್ , ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೆಚ್ಚಿರುವ ಕೂಲಿ.

ಬೆಳೆವ ಬೆಳೆಗೆ ಬೆಲೆಯಿಲ್ಲ, ಸರಿಯಾದ ಮಾರುಕಟ್ಟೆಗಳಿಲ್ಲ, ನಿಶ್ಚಿತ ದರವಿಲ್ಲ, ಬಂದರೆ ಬರ, ಹೊತ್ತೊಯ್ದರೆ ನೆರೆ.

ಕೊಳವೆಬಾವಿ ಇರುವ ಹಲವಾರು ರೈತರು ಸಾಲ ಮಾಡಿ ವ್ಯವಸಾಯ ಮಾಡುತ್ತಿದ್ದಾರೆ.

ಇದೀಗ ವಿದ್ಯುತ್ ಮೀಟರ್ ನ ಸರದಿ!

ಸರ್ಕಾರ 10 HP ವರೆಗೂ ಮಾತ್ರ ಉಚಿತ ವಿದ್ಯುತ್ ನೀಡುತ್ತಿರುವುದು. ವಾಸ್ತವವಾಗಿ 400 ಅಡಿಗಿಂತ ಆಳವಿರುವ ಕೊಳವೆಬಾವಿಗಳಲ್ಲಿ 10 HP ಮೊಟರ್ ನೀರನ್ನು ಎತ್ತಲು ಸಾಧ್ಯವಿಲ್ಲ. ಹಾಗಾಗಿ ಈಗಾಗಲೇ 400 ಅಡಿ ಮೇಲ್ಪಟ್ಟ ಕೊಳವೆಬಾವಿಗಳಲ್ಲಿ 10 ರಿಂದ 20 HP ಮೊಟರ್ ನಿಂದ ನೀರನ್ನು ಮೇಲೆತ್ತುತ್ತಿದ್ದಾರೆ.

ಖಾಸಗಿಯವರೇನಾದರೂ ಈಗಿರುವ ಹಾಗೆ ಉಚಿತವಾಗಿ ನೀಡುತ್ತೇವೆಂದು ಪುಸಲಾಯಿಸಿ, (ಉಚಿತವಾಗಿ ಬಳಸಿ ಎನ್ನುತ್ತಾ ಮೊದಲು Jio ಕಂಪನಿ ಕೊಟ್ಟ ಹಾಗೆ) ಮೀಟರ್ ಅಳವಡಿಸಿ ಅದರಲ್ಲಿ Maximum demand (MD) record ಆಗಿ ನೀವು ಎಷ್ಟು ಅಶ್ವಶಕ್ತಿ ವಿದ್ಯುತ್ ಬಳಸುತ್ತಿದ್ದೀರಿ ಎಂದು ಮೀಟರ್ ನಲ್ಲಿ record ಆಗುವಂತೆ ಮಾಡುತ್ತಾರೆ.
(ಅಂದರೆ10 HP ಗಿಂತ ಹೆಚ್ಚಾದರೆ ನೀವು ಉಚಿತ ವಿದ್ಯುತ್ ಪಡೆಯಲು ಈಗಿರುವ ಸರ್ಕಾರಿ ಕಾಯ್ದೆಯಲ್ಲೇ ಅರ್ಹರಲ್ಲ) ಎಷ್ಟೋ ರೈತರು 4 / 5/ 6 HP service ಪಡೆದು ಹೆಚ್ಚು HP ಬಳಸುತ್ತಿದ್ದಾರೆ. ಈಗಿರುವ KPTCL, ESCOM ಸಾರ್ವಜನಿಕ ಇಲಾಖೆ (ಲಾಭದ ಉದ್ದೇಶವಿಲ್ಲದ ಸಾರ್ವಜನಿಕ ಸೇವೆ) ಹಾಗಾಗಿ ರೈತರಿಗೆ ಸೇವೆ ನೀಡುತ್ತಿವೆ ಹೊರತು 10 HP ಗಿಂತ ಹೆಚ್ಚು/ಕಡಿಮೆ ಬಗ್ಗೆ ಕಾರ್ಯೋನ್ಮುಖವಾಗಿಲ್ಲ.. ಕಾರಣ ಮೀಟರ್ ಅಳವಡಿಸಿಲ್ಲ.
ಹೀಗಿರುವಾಗ ಖಾಸಗಿಯವರು ಇರುವ ಕಾಯ್ದೆಯಲ್ಲೇ ರೈತರನ್ನು ಸುಲಿಯದೆ ಬಿಡುತ್ತಾರೆಯೇ, ಒಮ್ಮೆ ಯೋಚಿಸಿ ನೋಡಿ.
ಇನ್ನು ನೀವು DBT ಎನ್ನುವ2021 ರ ಮಸೂದೆಯಲ್ಲಿ ( direct benifit transfer)ಅಂದರೆ ರೈತರು ಬಳಸಿದ ವಿದ್ಯುತ್ ಯೂನಿಟ್ ಗೆ ರೈತರು ಸರ್ಕಾರಕ್ಕೆ ಹಣ ಪಾವತಿಸುವುದು,/ ರೈತರ ಅಕೌಂಟ್ ಗೆ ಹಣ ವರ್ಗಾಯಿಸುವುದು. (ಇದೆ DBT ಯನ್ನು ಮೊದಲು ಗೃಹಬಳಕೆ Gas cylinder ಗಳಿಗೆ ಕೆಲವು ತಿಂಗಳು ಕೊಟ್ಟರು ಇಂದು ಏನಾಗಿದೆ ಎಂದು ನಿಮಗೆ ತಿಳಿದಿದೆ).
ಮೊದಲು ಆಕಾಶ ತೋರಿಸಿ ನಂತರ ಬಾವಿಗೆ ನೂಕುವ ಕೆಲಸ.
ಇನ್ನು Prepaid ಮೀಟರ್ ಬಂದರೆ ಮೊದಲೇ (recharge) ಬಿಲ್ಲು ಕಟ್ಟಲು ಸಾಧ್ಯವೇ? ಒಮ್ಮೆ ಯೋಚಿಸಿ.
ಸದರಿ ವ್ಯವಸ್ಥೆಯಲ್ಲಿ ವಾಣಿಜ್ಯ ಬಳಕೆದಾರರಿಂದ unit ಗೆ ರೂಪಾಯಿ 8 ರಿಂದ 9 ಪಡೆದು, ಗೃಹಬಳಕೆಗೆ ಇದರ ಅರ್ಧ ಅಂದರೆ 4 ರಿಂದ 5 ರೂ ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ. ಜೊತೆಗೆ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಆಸ್ಪತ್ರೆಗಳಿಗೆ, ಶಾಲೆಗಳಿಗೆ,ಇತರೆ ವಾಣಿಜ್ಯ ದರಗಳಿಂದ ಹೊಂದಾಣಿಕೆ ಮಾಡಿ ಸರಾಸರಿ 6+/- ಪ್ರತಿ ಯೂನಿಟ್ ದರ KERC ನಿಗದಿಪಡಿಸುತ್ತಿದೆ.

ನಮ್ಮ ನಿಮ್ಮ ಹೊಲದಲ್ಲಿ ಬಿದ್ದ ಮಳೆ (ನೀರಿನಿಂದ),
ನಾವು ಬೆಳೆದ ಮರಗಿಡಗಳ (ಬಿರುಗಾಳಿಯಿಂದ),
ಭೂತಾಯಿಯ (ಒಡಲಿಂದ) ಕಲ್ಲಿದ್ದಲು,
ಸುರಿದು, ತಿರುಗಿ, ಬೆಂದ ಬೂದಿಯಿಂದ,
ಬೆಳಗುತಿಹವು ನಮ್ಮ ಮನೆ ಮನಗಳ.

ನಿಮ್ಮ ಹೊಲಗಳ ಮೇಲೆ ಇರುವ ವಿದ್ಯುತ್ ಜಾಲದ ತಂತಿಗಳು ಆಗಲಿವೆ ಮುಂದೆ ಯಾವುದೋ ಖಾಸಗಿ ಯವರ ಪಾಲು.
ನಾವೆಲ್ಲರೂ ಗಿಡ ನೆಡದೆ, ಹೊಲ ಮಾಡದೆ,ಕಂಬ , ತಂತಿಯನ್ನು ಹಾಕಲು ಬಿಟ್ಟದ್ದು , ಸಾವಿರಾರು ಜನರ ಮನೆ ಬೆಳಗುವ ಜ್ಯೋತಿಯಾಗಲೆಂದು, ಹೊರತು ಯಾರೋ ವಿದೇಶಿ ಹೊಡಿಕೆಯವನಿಗೆ ಲಾಭ ಕೋಟಿಯಾಗಲೆಂದು ಅಲ್ಲ.

ಹಾಗೆ,
ಎಲ್ಲವನ್ನು ಒಂದೇ ಬಾರಿ ಖಾಸಗೀಕರಣ ಮಾಡಿಬಿಡಿ, ದೇಶವನ್ನು ಮತ್ತೊಮ್ಮೆ (East india com) ಆಳಿದ ಹಾಗೆ Reliance East india com, adani west india com, Tata north india com, birla south india com,etc ಎಂದು, ಕೊನೆಗೆ ಕಷ್ಟ ಪಟ್ಟು ಓದಿದ ರೈತರ ಮಕ್ಕಳು, ವಿದ್ಯಾವಂತರು, ಶೋಷಿತ ವರ್ಗದವರು, ಅಂಗವಿಕಲರು, ಇವರುಗಳ company ಯಲ್ಲಿ ಕೂಲಿ ಕಾರ್ಮಿಕರಾಗಲಿ , ಅವರ ಕಾರ್ಮಿಕ ಕಾಯ್ದೆ ಕಾನೂನುಗಳು ಎಲ್ಲರ ಸ್ವತಂತ್ರ ಹರಣ ಮಾಡಿ, ಬಿಡಿಗಾಸು ಕೊಡಲಿ.

ಬಡವ ಬಡವನಾಗೆ ಇರಲಿ, ಬಲ್ಲಿದ ಇನ್ನಷ್ಟು ಬಲಿಷ್ಠನಾಗಲಿ.

ಮುಂದೆ ಈ company ಯಾರ ಹೆಸರನ್ನು ಸೂಚಿಸುತ್ತದೋ ಅವರಿಗೆ ಎಲ್ಲರೂ ಮತ ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿ. ಮತ್ತೆ ಸರ್ಕಾರದ ಹಿಡಿತ ಸ್ವತಂತ್ರ ಪೂರ್ವದಲ್ಲಿ ಇದ್ದ ಹಾಗೆ company ಸರ್ಕಾರವಾಗಲಿ.
ಆಗ ಮತ್ತೊಮ್ಮೆ ನಾವೆಲ್ಲರೂ ನಮ್ಮ ಹಕ್ಕುಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ ಹೊರಡೋಣ.10-08-2021 ಸತ್ಯಾಗ್ರಹ ಖಾಸಗೀಕರಣ ವಿರುದ್ದ ಎಲ್ಲರೂ ಕೈಜೋಡಿಸಿ….

ವರದಿ. ಮಂಜುನಾಥ್ ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend