ಬಿ.ಜೆ.ಪಿ ಬಂಡವಾಳಶಾಹಿಗಳ ಪರವಾದ ಪಕ್ಷ, ರಾಜ್ಯ ಸರ್ಕಾರಕ್ಕೆ ಪೂರ್ವಯೋಜನೆ ಇಲ್ಲ! ಪುತ್ರೇಶ್ ವಾಗ್ದಾಳಿ!
ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ ಹಲವರು ಸಮಸ್ಯೆಗಳಿವೆ. ರೈತರಿಗೆ ಯುರಿಯಾ ಗೊಬ್ಬರ ಸಿಗುತ್ತಿಲ್ಲ. ಬೊಮ್ಮಾಯಿಯವರು ಕಾಲಹರಣ ಮಾಡದೆ ಕ್ರಮ ಕೈಗೊಳ್ಳಬೇಕು.ಅಲ್ಲದೆ ವಿದ್ಯುತ್ ಅನ್ನ ಖಾಸಗೀಕರಣ ಮಾಡ್ಲಿಕ್ಕೆ ಹೊರಟಿದಾರೆ ನರೇಂದ್ರ ಮೋದಿ ಮತ್ತು ಜನತಾ ಪಕ್ಷ ಪೂರ್ತಿ ಬಂಡವಾಳಶಾಹಿಗಳ ಪರವಾದ ಸರ್ಕಾರ, ಬಡವರು,ರೈತರು,ದಲಿತರ ಸರ್ಕಾರ ಅಲ್ಲ.
ಗಡಿಗಳನ್ನ ಬಂದು ಮಾಡಿ ರಾತ್ರಿ ಕರ್ಪ್ಯೂ ಮಾಡ್ತಾರೆ ಜೊತೆಗೆ ಶಾಲೆಗಳ ತೆರೆಯೊದಕ್ಕೆ ಅನುಮತಿ ಕೊಡ್ತಿದಾರೆ. ಮೂರನೇ ಅಲೆಗೆ ಜನ ಸತ್ತರೆ ಅವರ ಪ್ರಾಣ ತಂದುಕೊಡಲಾದಿತೆ ? ಸರ್ಕಾರಕ್ಕೆ ? ಪೂರ್ವ ಯೋಜನೆ ಇಲ್ಲದ ಸರ್ಕಾರದ ಇದು. ಅರ್ ಎಸ್ ಎಸ್ ನ ಗರ್ಭಗುಡಿ ಸಂಸ್ಕೃತಿ ಮತ್ತು ಮನು ಸ್ಮೃತಿ ಯನ್ನ ಜಾರಿಗೆ ತರೊದಕ್ಕೆ ಪ್ರಯತ್ನ ಮಾಡ್ತಿದಾರೆ ಇದು ಸಂವಿಧಾನ ಬಾಹಿರ. ಎಂದು ಜೆ.ಡಿ.ಎಸ್ ಯುವ ಮುಖಂಡರಾದ ಪುತ್ರೇಶ್ ಅವರು ಹೇಳಿಕೆ ನೀಡಿದರು..

ವರದಿ: ಅಜಯ.ಚ
ಹುಗಲೂರು
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
