ಭಾರತಕ್ಕೆ ಬಂಗಾರ ತಂದ ನೀರಜ್ ಚೋಪ್ರಾ…!!!

ಭಾರತಕ್ಕೆ ಬಂಗಾರ ತಂದ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ಅಥ್ಲೆಟಿಕ್ಸ್ ವಿಭಾಗದ ಜಾವಲಿನ್ ಥ್ರೋ ವಿಭಾಗದಲ್ಲಿ ೮೭.೩ ಮೀ.ಎಸೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟ ಕೀರ್ತಿ ನೀರಜ್ ಚೋಪ್ರಾ ಅವರಿಗೆ ಸಲ್ಲುತ್ತದೆ . ನೀರಜ್ ಪ್ರದರ್ಶನ ಹೀಗಿತ್ತು
ನೀರಜ್ ತಮ್ಮ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದರು. ಎರಡನೇ ಪ್ರಯತ್ನದಲ್ಲಿ, ನೀರಜ್ 87.58ಮೀಟರ್ ಎಸೆದರು. ನೀರಜ್ ಅವರ ಮೂರನೇ ಪ್ರಯತ್ನ ಸರಿಯಾಗಿರಲಿಲ್ಲ. ಅವರು 76.79 ಮೀಟರ್ ಎಸೆತವನ್ನು ಮಾತ್ರ ಸಾಧ್ಯವಾಯಿತು. ನಾಲ್ಕನೇ ಮತ್ತು ಐದನೇ ಪ್ರಯತ್ನದಲ್ಲಿ ನೀರಜ್ ಫೌಲ್ ಆದರು. ಕೊನೆಯ ಪ್ರಯತ್ನದಲ್ಲಿ ನೀರಜ್ 84 ಮೀಟರ್ ಎಸೆದರು. ನೀರಜ್ ಅರ್ಹತೆಯ ಮೊದಲ ಪ್ರಯತ್ನದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಮೊದಲ ಪ್ರಯತ್ನದಲ್ಲಿ 86.65 ಮೀಟರ್ ದೂರ ಎಸೆದು ಫೈನಲ್ ತಲುಪಿದರು. 12 ಆಟಗಾರರು ಫೈನಲ್ ತಲುಪಿದ್ದರು, ಅದರಲ್ಲಿ ನೀರಜ್ ನಂಬರ್ ಒನ್ ಆಗಿದ್ದರು ಮತ್ತು ಶನಿವಾರ ಅವರು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಜೆಕ್ ಗಣರಾಜ್ಯ ಜೋಡಿಯಾದ ಜಾಕೂಬ್ ವಾಡ್ಲೆಜ್ಚ್ ಮತ್ತು ವಿಟೆಜ್ಸ್ಲಾವ್ ವೆಸೆಲಿ ಅವರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಗೆಲ್ಲಲು 23 ವರ್ಷದ ನೀರಜ್ 87.58 ಮೀಟರ್ ಎಸೆತವನ್ನು ಎಸೆದು ಇತಿಹಾಸ ಸೃಷ್ಟಿಸಿದರು. ಈ ಪದಕ, ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕ. 2008 ರ ಬೀಜಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದ ನಂತರ ಒಲಿಂಪಿಕ್ ಇತಿಹಾಸದಲ್ಲಿ ದೇಶಕ್ಕೆ ಸಿಕ್ಕ ಎರಡನೇ ವೈಯಕ್ತಿಕ ಚಿನ್ನದ ಪದಕವಾಗಿದೆ. ಸೃಷ್ಟಿಸುವಲ್ಲಿ ಯಶಸ್ವಿಯಾದರು.ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಹರಿಯಾಣ ಸರ್ಕಾರ ನಗದು ಬಹುಮಾನವನ್ನು ಘೋಷಿಸಿತು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಒಲಿಂಪಿಕ್ಸ್​ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾ ಅವರಿಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.ಮತ್ತು ಈ ಬಂಗಾರದ ಪುರುಷನಿಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ .ನೀರಜ್ ಚೋಪ್ರಾ ರವರು ಇಲ್ಲಿಯವರೆಗೂ ಪಡೆದುಕೊಂಡಂತಹ ಪ್ರಶಸ್ತಿಗಳು ಮತ್ತು ಪದಕಗಳು ಈ  ಕೆಳಗಿನಂತಿವೆ ೨೦೧೬ ರಲ್ಲಿ ಸೌತ್ ಏಷಿಯನ್ ಗೇಮ್ಸ್ ನಲ್ಲಿ- ಬಂಗಾರದ ಪದಕ ,೨೦೧೬ ರ ಏಷಿಯನ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕ ,೨೦೧೬ ರಲ್ಲಿ ನಡೆದ ವರ್ಲ್ಡ್ ಯೂ ಟ್ವೆಂಟಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ,೨೦೧೭ ರ ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಬಂಗಾರದ ಪದಕ ,೨೦೧೮ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂಗಾರದ ಪದಕ ೨೦೧೮ ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ನ್ಯಾಶನಲ್ ರೆಕಾರ್ಡ್ ಆಫ್ ೮೮.೦೬ ಬಂಗಾರದ ಪದಕ .೨೦೨೧ರಲ್ಲಿ ಟೋಕಿಯೊದಲ್ಲಿ ನಡೆಯುತ್ತಿರುವ  ಟೋಕಿಯೋ೨೦೨೦ ಒಲಿಂಪಿಕ್ಸ್ ನಲ್ಲಿ  ಬಂಗಾರದ ಪದಕ  . *ಬಂಗಾರದ ಮನುಷ್ಯ ನೀರಜ್ ಚೋಪ್ರಾ ರವರ ವೈಯಕ್ತಿಕ ಮತ್ತು ವೃತ್ತಿಜೀವನ* ಎಂದರೆ ಇವರು ಜನಿಸಿದ್ದು ಮೂಲತಃ ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಖಾಂದ್ರಾ ಗ್ರಾಮದಲ್ಲಿ  ೨೪.೧೨.೧೯೯೭ ಜನಿಸಿದರು .ಇವರ ತಂದೆಯ ಹೆಸರು ಸತೀಶ್ ಕುಮಾರ್ ಮತ್ತು ತಾಯಿ ಸರೋಜಾ ದೇವಿ ದೇವಿ .ಇವರಿಗೆ ಇಬ್ಬರು ಸಹೋದರಿಯರಿದ್ದಾರೆ ಇವರ ತಂದೆ ಮೂಲತಃ ರೈತಾಪಿ ಕುಟುಂಬದವರು .ಇವರು ಪಾಣಿಪತ್ ನ ದಾವ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ .ಇವರು ಪ್ರಸ್ತುತ ಭಾರತೀಯ ಸೇನೆಯಲ್ಲಿ ಸುಬೇದಾರ್ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇಂತಹ ಅದ್ಭುತ ಸಾಧಕನಿಗೆ ಎಚ್ಚರಿಕೆ ವಾರಪತ್ರಿಕೆಯ ಬಳಗದಿಂದ  ಅಭಿನಂದನೆಗಳು .

ವರದಿ.ಮಂಜುನಾಥ ದೊಡ್ಡಮನಿ ಮತ್ತು ಸಂಗೀತಾ ಪಾಟೀಲ್ .

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend