ಎಚ್ಚರಿಕೆ 15
ಭಾರತ ಸರಕಾರ, ರಾಜ್ಯ ಸರಕಾರಗಳು, ಸಾವಿರಾರು ಸಂಘ-ಸಂಸ್ಥೆಗಳು, ಮಹಿಳೆಯರಿಗೆ ಪ್ರಾಧನ್ಯತೆ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. ರಾಜಕೀಯ, ಸಾಮಾಜಿಕ ಸಂಘಟನೆಗಳು ಮಹಿಳೆಯರ ಸಹಭಾಗಿತ್ವಕ್ಕಾಗಿ ಮಿಸಲಾತಿಯನ್ನು ಇಟ್ಟಿದೆ. ಹಾಗಿದ್ದಲ್ಲಿ ಯಾಕೆ ಇಂದು ಪ್ರತೀ ವೇದಿಕೆಯಲ್ಲಿಯೂ ಈ ಜಿಜ್ಞಾಸೆಯು ಪ್ರಶ್ನಾರ್ಥವಾಗಿಯೇ ಉಳಿದಿದೆ? ಈ ಬಗ್ಗೆ ಬಹಳ ಗಾಢವಾಗಿ ಆಲೋಚನೆ ಮಾಡಿದಾಗ ನಮ್ಮಲ್ಲಿ ಯೋಜನೆಗಳಿವೆ, ಅವಕಾಶಗಳಿವೆ, ಮಹಿಳಾಪರ ಕಾನೂನುಗಳೂ ಇವೆ. ಆದರೆ ಇದನ್ನು ತಳಮಟ್ಟಕ್ಕೆ ತಲುಪಿಸುವಂತಹ I.E.C ಅಂದರೆ (Information Education & Communication) ಮಾಹಿತಿ ನೀಡುವುದು, ತಿಳುವಳಿಕೆ ನೀಡುವುದು ಮತ್ತು ಸಂಪರ್ಕಿಸುವ ವ್ಯವಸ್ಥೆ ಇದ್ದರೂ, ಯೋಜನೆಗಳು, ಅವಕಾಶಗಳು, ಕಾನೂನುಗಳು ಬರೀ ಪುಸ್ತಕ-ವರದಿಗಳಗೆ ಸೀಮಿತವಾಗಿದೆ ಎಂಬ ಭಾವನೆ ಬೇರೂರಿದೆ. ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ತೋರಿಸುತ್ತಿರುವ ಆಸಕ್ತಿ, ಬದ್ದತೆ ಮತ್ತು ನೆಪುಣ್ಯತೆಯೂ ಕಾರಣವಾಗಿದೆ.
ಕೆಲವು ಯೋಜನೆಗಳಂತೂ ಬರೀ ದುಡ್ಡು ಮಾಡುವುದಾಕ್ಕಾಗಿ ರೂಪಿಸಲಾಗುತ್ತಿದೆ ಎಂಬ ಮಾತೂ ಇದೆ, ಕಾನೂನು ಇಂದು ಕೆಗೆಟುಕದ ಸ್ಥಿತಿಯಲ್ಲಿ ಇದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಇದೆ. ಏನೇ ಇರಲಿ ಇಂದು ಮಹಿಳಾ ಸಬಲೀಕರಣಕ್ಕೆ ಪೂರಕವಾದ ಆಯುಧಗಳು ನಮ್ಮ ಸಮಾಜದಲ್ಲಿ ಬಹಳಷ್ಟು ಇದೆ. ಇದನ್ನು ತಿಳಿದುಕೊಂಡು ಬಳಕೆ ಮಾಡಿದರೆ ನಾವು ಯಾರನ್ನು ದೂರಬೇಕಾಗಿಲ್ಲ, ಯಾರನ್ನು ಬೇಡ ಬೇಕಾಗಿಲ್ಲ.
ಈ ನಿಟ್ಟಿನಲ್ಲಿ ಮಹಿಳೆಯರ ಅಭಿವೃದ್ಧಿಗೆ, ಸಬಲೀಕರಣಕ್ಕೆ ಪ್ರಸ್ತುತ ಇರುವ ಸರಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಸಣ್ಣ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಇದು ಎಲ್ಲರಿಗೂ ಉಪಯೋಗವಾಗಬಹುದು ಎಂದು ನಾನು ನಂಬಿದ್ದೇನೆ. ಹೆಣ್ಣು ಮಗು ಈ ಭೂಮಿಗೆ ಕಾಲಿಡುವ ಸಂದರ್ಭದಿಂದ ಇರುವ ಯೋಜನೆಯ ಬಗ್ಗೆ ಪ್ರಾರಂಭಿಸುತ್ತೇನೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಬಿವೃದ್ಧಿ ಇಲಾಖೆ:
ಈ ಇಲಾಖೆಯಡಿಯಲ್ಲಿ ಮಕ್ಕಳ ಕಲ್ಯಾಣ, ಮಹಿಳಾ ಕಲ್ಯಾಣ ಮತ್ತು ಸಾಮಾಜಿಕ ರಕ್ಷಣೆಯಡಿಯಲ್ಲಿ ಹಲವಾರು ಕಾರ್ಯ ಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.
ಮಕ್ಕಳ ಕಲ್ಯಾಣ ಯೋಜನೆಯಡಿಯಲ್ಲಿ
ಭಾಗ್ಯಲಕ್ಷ್ಮಿ ಯೋಜನೆ :: ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕಂತಹ ಬಡತನ ರೇಖೆಗಿಂತ ಕೆಳಗಿರುವ(BPL) ಮೂರು ಮಕ್ಕಳಿರುವ BPL ಕುಟುಂಬಗಳ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತಿದೆ. ರೂ.೧೯,೩೦೦/- ಮೊತ್ತ ನಿರಖು ಠೇವಣಿಯನ್ನು ಮೊದಲ ಮಗುವಿನ ಹೆಸರಿನಲ್ಲಿಡಲಾಗುವುದು ಮತ್ತು ಎರಡನೇಯ ಮಗುವಿನ ಹೆಸರಿನಲ್ಲಿ ರೂ.೧೮,೩೫೦/- ಇಡಲಾಗುವುದು. ಮತ್ತು ಮಗುವಿಗೆ ೧೮ ವರ್ಷ ಪೂರ್ಣಗೊಂಡ ನಂತರ ಮೊದಲ ಮಗುವಿಗೆ ರೂ.೧,೦೦,೦೯೭/- ಮತ್ತು ಎರಡನೇಯ ಮಗುವಿಗೆ ರೂ.೧,೦೦,೦೫೨/- ಮೊತ್ತ ನೀಡಲಾಗುತ್ತದೆ.
ಈ ಮಗುವಿಗೆ ೧೫ ವರ್ಷ ತುಂಬಿದ ನಂತರ ೧೦ನೇ ತರಗತಿಯಲ್ಲಿ ಉತ್ತಿರ್ಣಳಾಗಿ, ಮುಂದಿನ ವಿದ್ಯಾಬ್ಯಾಸಕ್ಕಾಗಿ ಈ ಭಾಗ್ಯಲಕ್ಷ್ಮಿ ಬಾಂಡನ್ನು ಅಂಗೀಕೃತ ಬ್ಯಾಂಕ್ಗಳಲ್ಲಿ ಅಡಮಾನವಿರಿಸಿ, ಗರಿಷ್ಠ ರೂ.೫೦,೦೦೦/- ಸಾಲ ಪಡೆಯಬಹುದಾಗಿದೆ.
ಈ ಯೋಜನೆಯನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.
ಈ ಯೋಜನೆಯಡಿಯಲ್ಲಿ ಇತರ ಅರ್ಹತೆಯ ಅಂಶಗಳು:
೧) ಮಗುವಿನ ಜನನವನ್ನು ಖಡ್ಡಾಯವಾಗಿ ನೋಂದಾಯಿಸಿರಬೆಕು.
೨) ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗ ನಿರೋಧಕ ಲಸಿಕೆ ಹಾಕಿಸಿರಬೆಕು.
೩) ಅಂಗನವಾಡಿ ಕೇಂದ್ರಕ್ಕೆ ನೊಂದಾವಣೆ ಆಗಿರಬೆಕು.
೪) ಶಿಕ್ಷಣ ಇಲಾಖೆಯು ನೋಂದಾಯಿಸಿದ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿರಿಸಬೆಕು.
೫) ಮಗು ಬಾಲಕಾರ್ಮಿಕಳಾಗಿರಬಾರದು.
೬) ೧೮ ವರ್ಷತನಕ ವಿವಾಹವಾಗಬಾರದು.
೨. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ: (Integrated Child Development Scheme (ICDS)
ಈ ಯೋಜನೆಯು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೈಕೆ, ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆ ಕರ್ನಾಟಕ ಸರಕಾರವು ೧೯೭೫ರಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಿಸಿ ಪ್ರಸ್ತುತ ರಾಜ್ಯಾದ್ಯಾಂತ ಎಲ್ಲಾ ತಾಲೂಕುಗಳಲ್ಲಿ ಅನುಷ್ಠಾನವಾಗುತ್ತಿದೆ.
ಈ ಯೋಜನೆಯ ಉದ್ದೇಶ:
೧) ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಕಾಪಾಡುವುದು.
೨) ಮಗುವಿನ ದೆಹಿಕ, ಬೌದ್ದಿಕ, ಮಾನಸಿಕ ಮತ್ತು ಭಾವಾನಾತ್ಮಕ ಬೆಳವಣಿಗೆ ಸಮಗ್ರವಾಗುವಂತೆ ಮಾಡುವುದು.
೩) ಶಿಶುಗಳ ಮರಣ, ಅನಾರೋಗ್ಯ, ಅಪೌಷ್ಠಿಕತೆಯ ಸಮಸ್ಯೆಗಳ ನಿವಾರಣೆ ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು.
೪) ಮಕ್ಕಳ ಅಭಿವೃದ್ಧಿಗೆ ಇರುವಂತಹ ವಿವಿಧ ಇಲಾಖೆಗಳ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡುವುದು.
೫) ಮುಖ್ಯವಾಗಿ ತಾಯಂದಿರು ತಮ್ಮ ಆರೋಗ್ಯ ನಿರ್ವಹಣೆ ಮತ್ತು ಮಕ್ಕಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವಂತೆ ಮಾಹಿತಿ ಕಾರ್ಯಕ್ರಮಗಳ ಆಯೋಜನೆ ಮಾಡುವುದು.
೪. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ತರಗತಿ ಹಾಜರಾತಿಗೆ ಸ್ಕಾಲರ್ ಶಿಪ್ ಪಾವತಿ: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೆಕೆಂಬ ಉದ್ದೇಶದಿಂದ ಪ್ರತಿ ತಿಂಗಳು ರೂ.೨೫/-ರಂತೆ, ಹತ್ತು ತಿಂಗಳು-೭ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ೮-೧೦ ನೇ ತರಗತಿಯವರೆಗೆ ಹೆಣ್ಣು-ಮಕ್ಕಳಿಗೆ ರೂ.೭೫/-ರಂತೆ ನೀಡಲಾಗುತ್ತಿದೆ. ಕನಿಷ್ಠ ೮೦% ಹಾಜರಾತಿ ಖಡ್ಡಾಯ. ಕುಟುಂಬದ ಆದಾಯ ರೂ.೧೦,೦೦೦/-ಕ್ಕೆ ಮೀರಿರಬಾರದು ಮತ್ತು ಹಳ್ಳಿಯ ಜನಸಂಖ್ಯೆ ೨೦,೦೦೦ ದೊಳಗೆ ಇದ್ದರೆ ಮಾತ್ರ ಈ ಯೋಜನೆ ಅನ್ವಯಿಸುವುದು. ಜಿಲ್ಲಾ ಪಂಚಾಯತಿ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.
೫. ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ: ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ರೂ.೧೦,೦೦೦/-ಕ್ಕಿಂತ ಆದಾಯ ಕಡಿಮೆಯಿರುವ ಕುಟುಂಬದ ಹೆಣ್ಣುಮಕ್ಕಳಿಗೆ ಆರನೇ ತರಗತಿ ನಂತರದ ವಿದ್ಯಾಭ್ಯಾಸಕ್ಕಾಗಿ ಉಚಿತ ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಟ್ಟು ೪೪ ಹಾಸ್ಟೆಲ್ ಳನ್ನು ರಾಜ್ಯಾದ್ಯಂತ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.
೬. ಮಕ್ಕಳ ರಕ್ಷಣೆ ಮತ್ತು ಜಾಗರೂಕತೆಗಾಗಿ ಮತ್ತು ಕಲ್ಯಾಣಕ್ಕಾಗಿ ಯೋಜನೆಗಳು: ಅನಾಥ ಹಾಗೂ ನಿರ್ಗತಿಕ ಮಕ್ಕಳ ರಕ್ಷಣೆಗಾಗಿ, ಅವರ ಪಾಲನೆ ಪೋಷಣೆಗಾಗಿ ಅನಾಥಾಲಯಗಳನ್ನು ಸ್ಥಾಪಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ಇದರ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಒಟ್ಟು ೨೬೯ ಅನಾಥಾಲಯಗಳು ಕಾರ್ಯನಿರ್ವಸುತ್ತಿದೆ.
೭. ಕೆಲಸ ಮಾಡುವ ಮಹಿಳೆಯರ, ಮಕ್ಕಳ ಪಾಲನೆಗಾಗಿ ಶಿಶುಧಾಮ: ಗಾಮೀಣ ಪ್ರದೇಶಗಳಲ್ಲಿ ಕೃಷಿ ಹಾಗೂ ಇತರ ಕೆಲಸಗಳಿಗೆ ತೆರಳುವ ಮಹಿಳೆಯರ ೩ ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಶಿಶುಧಾಮ, ಶಿಶು ಮಂದಿರಗಳನ್ನು ನಡೆಸುವರೇ ಮಹಿಳಾ ಮಂಡಳಿ, ಸ್ವಯಂ ಸೇವಾ ಸಂಸ್ಥೆಗಳಿಗೆ ಆರ್ಥಿಕ ಸಹಾಯದ ಸೌಲಭ್ಯವಿದೆ. ಈ ಸೌಲಭ್ಯದಲ್ಲಿ ಆರೋಗ್ಯ ರಕ್ಷಣೆ, ಪೌಷ್ಠಿಕ ಆಹಾರ, ಮಗುವಿಗೆ ವಸತಿ ವ್ಯವಸ್ಥೆ, ಲಸಿಕೆ ಹಾಕುವುದು, ಆಟಗಳು ಇವೆಲ್ಲವೂ ಒಳಗೊಂಡಿದೆ.
೮. ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗೆ ಯೋಜನೆಗಳು: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ವಿಚಾರದ ಬಗ್ಗೆ ಮಾಹಿತಿ ಕೊಡುವ ನಿಟ್ಟಿನಲ್ಲಿ ಮತ್ತು ಈ ವಿಚಾರದ ಬಗ್ಗೆ ಮನದಟ್ಟು ಮಾಡುವಂತೆ ಪ್ರತೀ ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ದಿನದ ಮಾಹಿತಿ ಕಾರ್ಯಕ್ರಮಗಳನ್ನು ಜಾಥಾ, ಬೀದಿ ನಾಟಕ, ರ್‍ಯಾಲಿಗಳ ಮೂಲಕ ಸಂಘಟಿಸಲಾಗುತ್ತಿದೆ.
೯. ಬಾಲ್ಯವಿವಾಹ ತಡೆ ಕಾಯಿದೆ ೨೦೦೬ರ ಅನುಷ್ಠಾನ: ಬಾಲ್ಯ ವಿವಾಹ ತಡೆ ಕಾಯಿದೆಯ ಅನುಷ್ಠಾನ ಜವಾಬ್ದಾರಿಯನ್ನು ಇಲಾಖೆ ನೋಡಿಕೊಳ್ಳುತ್ತಿದೆ. ಇಲಾಖೆಯ ಉಪ ಕಮಿಷನರ್, ಉಪನಿರ್ದೇಶಕರು, ಕಾರ್ಯನಿರ್ವಹಣಾ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತಹಶೀಲ್ದಾರರು, ಕಾರ್ಮಿಕ ಇಲಾಖಾ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ರೆವನ್ಯೂ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಇವರೆಲ್ಲರೂ ಈ ಕಾಯಿದೆಯ ಅನುಷ್ಠಾನದ ಜವಾಬ್ದಾರಿ ಇರುವವರು, ಬಾಲ್ಯವಿವಾಹ ಕಂಡು ಬಂದಲ್ಲಿ ಈ ಅಧಿಕಾರಿಗಳಿಗೆ ಯಾರು ಬೇಕಾದರೂ (ಸಾರ್ವಜನಿಕರು) ಸೂಚಿಸಬಹುದು.
೧೦. ಹೆಣ್ಣು ಮಕ್ಕಳ ದಿನ ಆಚರಣೆ: ಜನವರಿ ೨೪ರಂದು ಹೆಣ್ಣು ಮಗುವಿನ ದಿನ ಎಂದು ಭಾರತ ಸರಕಾರವು ಘೋಷಿಸಿದೆ. ಈ ದಿನದಂದು ಹೆಣ್ಣು ಮಗುವಿನ ಪ್ರಾಮುಖ್ಯತೆ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ, ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಶೋಷಣೆ, ಅಪೌಷ್ಠಿಕತೆ ಬಗ್ಗೆ ಜಾಗೃತಿ ಹೀಗೆ ಈ ವಿಚಾರಗಳ ಬಗ್ಗೆ ವ್ಯಾಪಕವಾದಂತಹ ಮಾಹಿತಿ ಒದಗಣೆ ಮತ್ತು ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಳ್ಳುತ್ತಿದೆ.
೧೧. ಉಜ್ವಲ ಯೋಜನೆ: ಲೈಂಗಿಕ ಶೋಷಣೆಗೆ ಒಳಗಾದ ಮಕ್ಕಳು/ಮಹಿಳೆಯರ ರಕ್ಷಣೆ, ಆರೆಕೆ ಮತ್ತು ಅವರನ್ನು ಕುಟುಂಬದ ಜೊತೆ ಜೋಡಿಸುವ ಯೋಜನೆ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಅಕ್ರಮ ಸಾಗಾಣಿಕೆ ಮತ್ತು ಬಲಾತ್ಕಾರವಾದ ಲೈಂಗಿಕತೆ, ಇಂತಹ ದೌರ್ಜನ್ಯವನ್ನು ತಡೆಯುವುದಕೋಸ್ಕರ ಸಮಾಜದಲ್ಲಿ ಸಾರ್ವಜನಿಕರಿಗೆ ಮಹಿಳೆಯರ ಪರವಾಗಿ ಗೌರವಯುತ ಭಾವನೆಯನ್ನು ತರುವಂತೆ ಮತ್ತು ಲೈಂಗಿಕ ಬಲಾತ್ಕಾರ ಮತ್ತು ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಉಜ್ವಲ ಯೋಜನೆ ಶ್ರಮಿಸುತ್ತಿದೆ. ಇಂತಹ ಸಮಸ್ಯೆಗೆ ಸಿಲುಕಿದಂತಹ ಮಹಿಳೆಯರ ರಕ್ಷಣೆ ಮತ್ತು ಅವರಿಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸುವಲ್ಲಿ, ದೇಶದ ಗಡಿ ಪ್ರದೇಶದಲ್ಲಿ ಈ ಸಮಸ್ಯೆಗೆ ಒಳಗಾದಂತಹ ಮಹಿಳೆಯರನ್ನು ಅವರ ಸ್ವದೇಶಕ್ಕೆ ಮರಳುವಂತೆ ಮಾಡುವಂತೆ, ವಸತಿ ವ್ಯವಸ್ಥೆ, ಊಟ-ಉಪಚಾರ, ಮೂಲಭೂತ ಸೌಕರ್ಯಗಳ ಒದಗಣೆ ಹೀಗೆ ಈ ರೀತಿಯಾದಂತಹ ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಈ ಯೋಜನೆಯನ್ನು ಸಮಾಜಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮಗಳು, ಇತರ ಸ್ವಯಂ ಸೇವಾ ಸಂಸ್ಥೆಗಳು ಅನುಷ್ಠಾನ ಮಾಡುತ್ತಿದೆ.
೧೨. ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನಾ (IGMSY) (ಹೆರಿಗೆ ಸೌಲ”s ಯೋಜನೆ): ಕೇಂದ್ರ ಸರಕಾರದ ಕಾರ್ಯಕ್ರಮ: ಈ ಯೋಜನೆಯ ಪ್ರಕಾರ ಗರ್ಭಿಣಿ, ಬಾಣಂತಿ ಮತ್ತು ಹಾಲುಣಿಸುವ ತಾಯಂದಿರ ಮತ್ತು ಶಿಶುಗಳ ಆರೋಗ್ಯ, ನೆರ್ಮಲ್ಯ ಮತ್ತು ಪೌಷ್ಟಿಕತೆ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾದ ಹೆಜ್ಜೆಗಳು, ಪದ್ಧತಿಗಳು, ಆರೆಕೆ ಕ್ರಮಗಳು, ಸುರಕ್ಷಾ ಹೆರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ನೀಡಬೆಕಾದ ಆಹಾರ ಪದ್ಧತಿ ಹೀಗೆ ಈ ವಿಚಾರಗಳ ಬಗ್ಗೆ ಕಾಳಜಿಯನ್ನು ವಹಿಸಲಾಗುತ್ತದೆ. ವಯೋಮಿತಿ ಹತ್ತೊಂಬತ್ತು ಮತ್ತು ಹೆಚ್ಚಿನ ಪ್ರಾಯದ ಗರ್ಭಿಣಿ ಮಹಿಳೆಯರ ಎರಡು ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಗರ್ಭವತಿಯಾದ ಸಂದರ್ಭ ಮತ್ತು ಹೆರಿಗೆ ಸಂದರ್ಭ ಉದ್ಯೋಗ/ಕೂಲಿ ಕೆಲಸಕ್ಕೆ ಹೋಗಲು ಅಸಾಧ್ಯವಾಗುವುದರಿಂದ ಅದಕ್ಕೆ ಪೂರಕವಾಗಿ ರೂ.೪,೦೦೦/- ಸಹಾಯ ಧನವನ್ನು ಮೂರು ಕಂತಿನಲ್ಲಿ ಮಹಿಳೆಯರಿಗೆ, ಗರ್ಭಿಣಿಯಾಗಿ ಆರು ತಿಂಗಳು ಪೂರ್ತಿಯಾಗಿ ಮತ್ತು ಹೆರಿಗೆಯಾಗಿ ಆರು ತಿಂಗಳು ಆಗುವ ಅವಧಿಯಲ್ಲಿ ನೀಡಲಾಗುತ್ತದೆ. ಈ ಯೋಜನೆಯು ಸಮಗ್ರ ಮಕ್ಕಳ ಕಲ್ಯಾಣ ಯೋಜನೆ (ICDS) ಉಸ್ತುವಾರಿಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನವಾಗುತ್ತದೆ. ಮಹಿಳೆ ಗರ್ಭಿಣಿ ಆಗಿರುವಾಗ ಉತ್ತಮ ಆಹಾರ ಸೇವನೆ ಬಗ್ಗೆ ಜಾಗೃತಿ ವಹಿಸಿ ತನ್ನನ್ನು ಆರೆಕೆ ಮಾಡಿಕೊಂಡು ಆರೋಗ್ಯವಂತ ಶಿಶುಗಳ ಸುರಕ್ಷಿತ ಜನನ ಮತ್ತು ಶಿಶುಗಳ ಜನನವಾದ ತಕ್ಷಣದಲ್ಲಿ ಖಡ್ಡಾಯವಾಗಿ ಎದೆಹಾಲನ್ನು ಉಣಿಸುವ ಬಗ್ಗೆ ಜಾಗೃತಿ ಮತ್ತು ಬಾಣಂತಿ ಆರೈಕೆ ಸಮಗ್ರವಾಗಿ ತಾಯಿ ಮತ್ತು ಮಗು ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳುವ ಯೋಜನೆ.
ಇದಕ್ಕೆ ಮಾಡಬೇಕಾದದ್ದು ಇಷ್ಟೇ:
ಗರ್ಭವತಿ ಆದ ೪ ತಿಂಗಳೊಳಗಾಗಿ ಸ್ಥಳೀಯ ಅಂಗನವಾಡಿಯಲ್ಲಿ ನೊಂದಾವಣೆ ಮಾಡಿಸಿಕೊಳ್ಳಬೆಕು.
ಪ್ರಸವ ಪೂರ್ವ ಆರೈಕೆ ಸ್ಥಳೀಯ ಅಂಗನವಾಡಿಯ ಮೂಲಕ ಪಡಕೊಳ್ಳಬೇಕು. ಪ್ರತೀ ತಿಂಗಳಲ್ಲಿ ಒಂದು ದಿನ ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ದಿನವನ್ನು ಆಚರಿಸುವ ಸಂದರ್ಭ ಹಾಜರಿರಬೆಕು.
ಹೆರಿಗೆ: ಹೆರಿಗೆಯನ್ನು ಖಡ್ಡಾಯವಗಿ ನರ್ಸಿಂಗ್ ಹೋಮ್, ಆಸ್ಪತ್ರೆಗಳಲ್ಲಿ ನುರಿತ ಡಾಕ್ಟರ್ಗಳಿಂದ/ ನರ್ಸ್ ಗಳಿಂದ ಮಾಡಿಸಬೆಕು. ಮನೆಯಲ್ಲಿ ಹೆರಿಗೆ ಮಾಡಿಸಬಾರದು.
ಶಿಶುವಿನ ಆರೈಕೆ: ಕಾಲಕಾಲಕ್ಕೆ ಸರಿಯಾಗಿ ಲಸಿಕೆ ಹಾಕಿಸಿಕೊಳ್ಳುವುದು, ಮಗುವಿನ ಬೆಳವಣಿಗೆ ಬಗ್ಗೆ ನಿಗಾ ಇಡುವುದು, ಶಿಶುವಿನ ೬ ತಿಂಗಳ ತನಕ ಕಡ್ಡಾಯ, ಎದೆಹಾಲು ಮಾತ್ರ ನೀಡುವುದು. ನಂತರ ಇತರ ಪೂರಕ ಆಹಾರದ ಜೊತೆಗೆ ಎರಡುವರ್ಷ ತುಂಬುವ ತನಕ ಎದೆಹಾಲು ನೀಡುವುದು. ಇದರಿಂದ ಮಗುವಿನ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಅಧಿಕವಾಗಲು ಸಾಧ್ಯ. ಈ ರೀತಿಯ ಆರೆಕೆಯನ್ನು ಮಾಡಿದಲ್ಲಿ ಮಾತ್ರ ಆರೋಗ್ಯವಂತವಾಗಿ ಮಗು ಬೆಳೆಯಲು ಸಾಧ್ಯ
ಇನ್ನೂ ಮಹಿಳಾ ಸಬಲೀಕರಣದ ಹಲವಾರು ಯೋಜನೆಗಳಿವೆ. ಮುಂದಿನ ಅಂಕಣದಲ್ಲಿ ವಿಸ್ತೃತವಾಗಿ ಚರ್ಚೆ ಮಾಡೊಣ. ಯೋಜನೆಗಳು ಎಲ್ಲಿವೂ ಸೋರದಿರಲಿ ಎಚ್ಚರಿಕೆ!

ಅಂಕಣ: ಅಜಯ.ಚ
ಹುಗಲೂರು
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
