ವೀರಶೈವ ಲಿಂಗಾಯತ ಜಂಗಮರು
‘ಬೇಡ ಜಂಗಮ’ ಎಂದು ದಾಖಲಿಸುತ್ತಿರುವುದರ ವಿರುದ್ಧ ಹೋರಾಟ
ಕೂಡ್ಲಿಗಿ
ವಿಶೇಷ ಸುದ್ದಿ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು
ಹಿಂದೂ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ದಲಿತ ಪರ ಸಂಘಟನೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ಬಳ್ಳಾರಿ ಜಿಲ್ಲೆ ಅಂಬೇಡ್ಕರ್ ಸೇನೆಯ ಜಿಲ್ಲಾ ಅಧ್ಯಕ್ಷರಾದ ಪಿ ಸಂತೋಷ್ ಕುಮಾರ್ ಮಾತನಾಡಿ
ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯತ ಜಂಗಮರು ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಜಾತಿಯ ‘ಬೇಡ ಜಂಗಮ’ ಎಂಬ ಪರಿಶಿಷ್ಟ ಜಾತಿಯ ಹೆಸರಿನಲ್ಲಿ ತಮ್ಮ ಜಾತಿಯನ್ನು ದಾಖಲು ಮಾಡುತ್ತಿದ್ದಾರೆ. ಅತ್ಯಂತ ಸಣ್ಣ ಪ್ರಮಾಣದ ಜನಸಂಖ್ಯೆ ಹೊಂದಿರುವ ಅಲೆಮಾರಿ ಬೇಡ ಜಂಗಮರ ಜಾತಿಯ ಹೆಸರಿನಲ್ಲಿ ವೀರಶೈವ ಲಿಂಗಾಯತ ಜಂಗಮರು ಶಾಲೆಗಳಲ್ಲಿ 1999 ರಿಂದಲೂ ಶಾಲಾ ದಾಖಲಾತಿಗಳಲ್ಲಿ ಬೇಡ ಜಂಗಮ ಎಂದು ದಾಖಲಿಸುತ್ತಿದ್ದಾರೆ. ಇದು ಮುಂದಿನ ಪೀಳಿಗೆಗೆ ದೊಡ್ಡ ದುರಂತ ಘಟನೆಯಾಗಿ ಮಾರ್ಪಡುತ್ತದೆ.
ಕಾರಣ ಸುಪ್ರೀಂ ಕೋರ್ಟಿನ ಆದೇಶದಲ್ಲಿ ಪ್ರಭುದೇವ ಮಲ್ಲಿಕಾರ್ಜುನ್ ವರ್ಸಸ್ ರಾಮಾನುಜನ್ ಪ್ರಕರಣದಲ್ಲಿ ಶಾಲೆಯ ದಾಖಲೆಯು 30 ವರ್ಷದ ದಾಖಲೆಯಾಗಿದ್ದರೆ ಅದು ಮೌಲ್ಯವೆಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ವೀರಶೈವ ಜಂಗಮರು ಮೇಲೆ ತಿಳಿಸಿದ ವರ್ಷದಿಂದ ಇಲ್ಲಿಯತನಕ ಶಾಲೆಗಳಲ್ಲಿ ಬೇಡ ಜಂಗಮ ಎಂದು ದಾಖಲೆ ಮಾಡಿಸುತ್ತಿದ್ದಾರೆ. ಇದರಿಂದಾಗಿ ಮುಂದಿನ ಮಕ್ಕಳ ಮತ್ತು ಮೊಮ್ಮಕ್ಕಳ ಕಾಲಘಟ್ಟದಲ್ಲಿ ವೀರಶೈವ ಜಂಗಮರೇ ಪರಿಶಿಷ್ಟ ಜಾತಿಗೆ ಸೇರಿದ ನಿಜವಾದ ಬೇಡ ಜಂಗಮರು ಎಂಬಂತಾಗುತ್ತದೆ……
ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ದಲಿತರ ಮೀಸಲಾತಿ ವಂಚಿಸುವುದು ಇವರ ಮೂಲ ಉದ್ದೇಶವಾಗಿರುತ್ತದೆ. ಹಾಗಾಗಿ ನಾವು ಜಿಲ್ಲಾಧಿಕಾರಿ ಕಚೇರಿ ಮುಂದೆ ತಾಲೂಕು ಕಚೇರಿ ಮುಂದೆ ಧರಣೆ ಮಾಡುವುದನ್ನು ಬಿಟ್ಟು, ನಮ್ಮ ಕರ್ನಾಟಕದ ಪ್ರತಿಯೊಂದು ತಾಲೂಕಿನಲ್ಲಿ ಪ್ರತಿಯೊಂದು ಸರ್ಕಾರಿ ಸರ್ಕಾರಿ ಶಾಲೆ- ಅನುದಾನಿತ ಶಾಲೆಗಳಲ್ಲಿ ‘ಬೇಡ ಜಂಗಮ’ ಎಂದು ಶಾಲೆಗಳಲ್ಲಿ ಯಾರು ದಾಖಲಾಗುತ್ತಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿರುತ್ತದೆ.
ಹಾಗಾಗಿ ನಾವು ಇಂದೇ ವೀರಶೈವ ಜಂಗಮರು ‘ಬೇಡ ಜಂಗಮ’ ಎಂದು ದಾಖಲಾಗುತ್ತಿರುವ ಶಾಲೆಗಳಲ್ಲಿ ಮಾಹಿತಿಯನ್ನು ಪಡೆಯುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಏಕೆಂದರೆ ಮುಂದಿನ ದಿನಮಾನಗಳಲ್ಲಿ ವೀರಶೈವ ಜಂಗಮರು ತಾವೇ ನಿಜವಾದ ಬೇಡ ಜಂಗಮರೆಂದು ಸಾಬೀತುಪಡಿಸುತ್ತಾರೆ.
ಆದ್ದರಿಂದ ಆ ದೃಷ್ಟಿಯಿಂದ ನಮ್ಮೆಲ್ಲಾ ಹೋರಾಟಗಾರರು ಸಂವಿಧಾನದತ್ತ ಕಾನೂನಾತ್ಮಕಹೋರಾಟ ಮಾಡುವುದು ಅನಿವಾರ್ಯವಾಗಿದೆ. ನಾನು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಶ್ರೀ ಗುರುದೇವ ಶಾಲೆ ಏಲ್ಲಿ ‘ಬೇಡ ಜಂಗಮ’ ಎಂಬ ಪರಿಶಿಷ್ಟ ಜಾತಿಯ ಹೆಸರಿನಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಕೇಳಿದಾಗ ವೀರಶೈವ ಜಂಗಮ ಜಾತಿಗೆ ಸೇರಿದ ವಿದ್ಯಾರ್ಥಿಗಳ 34 ವಿದ್ಯಾರ್ಥಿಗಳ ಮಾಹಿತಿ ಸಿಕ್ಕಿತು. ಇದನ್ನು ಆಧಾರವಾಗಿಟ್ಟುಕೊಂಡು ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಹಶಿಲ್ದಾರ್, ತಾಲೂಕು ಕಚೇರಿ ಇಲಾಖೆಯಲ್ಲಿಯೂ ಮಾಹಿತಿ ಕೇಳಿದಾಗ ಇವರಾರೊಬ್ಬರೂ ಬೇಡಜಂಗಮ ರಲ್ಲ ಮೇಲಾಗಿ ಈ ಎಲ್ಲಾ ವಿದ್ಯಾರ್ಥಿಗಳು ವೀರಶೈವ ಜಂಗಮ ಜಾತಿಗೆ ಸೇರಿದವರಾಗಿರುತ್ತಾರೆಂದು ಕಂಡುಬಂದಿದೆ.
ತದನಂತರದಲ್ಲಿ ಇದರ ಆಧಾರದ ಮೇಲೆ ಸಾಕಷ್ಟು ಸಲ ಗುರುದೇವ ಶಾಲೆಯ ಮೇಲೆ ಕೇಸುಗಳು ದಾಖಲಾಗುವಂತೆ ಮಾನ್ಯ ಮಹಾನಿರೀಕ್ಷಕರು ಬಳ್ಳಾರಿ ಪೊಲೀಸ್ ಇಲಾಖೆ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದಾವಣಗೆರೆ ಇವರಿಗೂ ಸಹ ಶಾಲಾ ದಾಖಲಾತಿಯಲ್ಲಿ ಜಾತಿ ಕಾಲಂನಲ್ಲಿ ಬೇಡ ಜಂಗಮ ಎಂದು ವೀರಶೈವ ಜಂಗಮ ಜಾತಿಗೆ ಸೇರಿದ ಜನಾಂಗದವರು ಸುಳ್ಳು ಜಾತಿಯನ್ನು ಹೇಳಿ ದಾಖಲೆಯನ್ನು ದಾಖಲಿಸುತ್ತಿದ್ದಾರೆ ಅವರ ವಿರುದ್ಧವಾಗಿ ಅಂದರೆ ಶಾಲೆಯ ಮುಖ್ಯಸ್ಥರು ಪೋಷಕರ ವಿರುದ್ಧ ಕೇಸು ದಾಖಲಿಸುವಂತೆ ಅರ್ಜಿಯನ್ನು ಸಲ್ಲಿಸಿರುತ್ತೇನೆ. ಇಂದು ನಮ್ಮ ಕೂಡ್ಲಿಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆದೇಶ ಹೊರಡಿಸಿದರು ತಾಲೂಕಿನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸರ್ಕಾರಿ, ಅನುದಾನಿತ, ಅನುದಾನರಹಿತ ಹಿರಿಯ-ಕಿರಿಯ ಹಾಗೂ ಪ್ರೌಢಶಾಲೆಯ ಉಪ ಪ್ರಾಚಾರ್ಯರು ವಿದ್ಯಾರ್ಥಿಗಳ ದಾಖಲಾತಿ ಹೊಂದುವ ಸಮಯದಲ್ಲಿ ಪರಿಶಿಷ್ಟ ಜಾತಿಯ ಬೇಡ ಜಂಗಮ ಸಂಬಂಧಿಸಿದ ಯಾವುದೇ ಜಾತಿಯನ್ನು ನಮೂದಿಸುವ ಮುಂಚೆ ಕಂದಾಯ ಇಲಾಖೆ ಮಾನ್ಯ ತಹಶಿಲ್ದಾರರು ಕೊಡುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡು ದಾಖಲಾತಿ ನಮೂದಿಸಬೇಕೆಂದು ಆದೇಶಿಸಿದ್ದಾರೆ ಈ ಪ್ರಕ್ರಿಯೆ ಪ್ರತಿಯೊಂದು ತಾಲೂಕಿನಲ್ಲಿ ನಡೆದಾಗ ಮಾತ್ರ ನಿಜವಾಗಲೂ ನಮ್ಮ ಸಮಾಜಕ್ಕೆ ನಮ್ಮ ಹೋರಾಟಗಾರರು ಕೊಡುವಂತಹ ದೊಡ್ಡ ಕೊಡುಗೆ ಎಂದು ನಾನು ಭಾವಿಸುತ್ತೇನೆ. ವೀರಶೈವ ಜಂಗಮರು ತಾವೇ ‘ಬೇಡ ಜಂಗಮ’ ಎಂದು ಶಾಲೆ ದಾಖಲೆಯಲ್ಲಿ ದಾಖಲಿಸುವುದರ ವಿರುದ್ಧ ಮುಂದಿನ ದಿನಮಾನಗಳಲ್ಲಿ ಹೈಕೋರ್ಟಿನಲ್ಲಿ ಇವರ ವಿರುದ್ಧ ಕೇಸನ್ನು ದಾಖಲಿಸುವುದಾಗಿ ಹೋರಾಟ ಮಾಡಬೇಕೆಂದು ನಮ್ಮೆಲ್ಲಾ ಹೋರಾಟಗಾರರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದರು…
ಈ ಸಂದರ್ಭದಲ್ಲಿ ಎಸ್ ದುರ್ಗೇಶ್, ಮಾದಿಗ ದಂಡೋರ ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಲು ಮನೆ ರಾಘವೇಂದ್ರ,. ಬಿ ಮಹೇಶ್. ಸುಂಕದಕಲ್ ಸಿದ್ದಪ್ಪ. ಎಚ್ ಬಸಪ್ಪ. ಛಲವಾದಿ ಮಹಾಸಭಾದ ಅಧ್ಯಕ್ಷ ಕೊಟ್ರೇಶ್. ಸಿ ಬಸವರಾಜ್. ಕೃಷ್ಣಪ್ಪ.ಎಚ್ ಬಿ ಹಳ್ಳಿ ಪ್ರಕಾಶ್ ಇನ್ನು ಮುಂತಾದ ದಲಿತ ಮುಖಂಡರು ಭಾಗವಹಿಸಿದ್ದರು…

ವರದಿ. ವಿರೇಶ್, ಕೆ, ಎಸ್, ಹೊಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
