ವಿಜಯನಗರ ಜಿಲ್ಲೆ ಕೂಡ್ಲಿಗಿ,ಕೋವಿಡ್ 3ನೇ ಅಲೆ ಮುಂಜಾಗ್ರತಾ ಕ್ರಮವಾಗಿ,ಅಗತ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿತರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವ ಹಿನ್ನಲೆಯಲ್ಲಿ.ತಾವು ಕಟ್ಟು ನಿಟ್ಟಿನ ಅಗತ್ಯ ಕ್ರಮಗಳನ್ನು ಈ ಕ್ಷಣದಿಂದಲೇ ತಾವು ಕೈಗೊಳ್ಳುವುದಾಗಿ,ತಹಶಿಲ್ದಾರರಾದ ಟಿ.ಜಗದೀಶರವರು ಟಾಸ್ಕ್ ಪೋರ್ಸ್ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.ಕೋವಿಡ್ ನಿಯಮಗಳನ್ನು ಸರ್ವರೂ ಖಡ್ಡಾಯವಾಗಿ ಪಾಲಿಸಬೇಕಿದೆ, ಮೀರಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುದೆಂದು ಅವರು ಎಚ್ಚರಿಸಿದರು.
ಪ್ರತಿಯೊಬ್ಬರು ಮನೆಯಿಂದ ಹೊರಬರುವಾಗ ಮಾಸ್ಕ್ ಧರಿಸುವುದು ಖಡ್ಡಾಯವಾಗಿದ್ದು,
ವಿದೇಶಿಗರು ಹಾಗೂ ನೆರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದವರನ್ನು, ಸೂಕ್ತ ಆರೋಗ್ಯ ತಪಾಸಣೆಗೆ ಒಳಪಡಿಸಿಲಾಗುವುದು ಮತ್ತು ಸೋಂಕು ಲಕ್ಷಣಗಳುಳ್ಳವರ ಚಲನ ವಲನಗಳ ಮೇಲೆ ವಿಶೇಷ ನಿಗಾ ಇಡಲಾಗುವುದು ಎಂದರು.
ಕೋವಿಡ್ ನಿಯಮಗಳ ಪಾಲನೆ ಸರ್ವರ ಹೊಣೆಯಾಗಿದೆ ಮಾಸ್ಕ್ ಧರಿಸದವರಿಗೆ ದಂಢ ವಿಧಿಸುವಂತೆ ಪೊಲೀಸ್ ಇಲಾಖಾಧಿಕಾರಿಗೆ ಅವರು ಸೂಚಿಸಿದರು.ಪ್ರತಿ ಎರೆಡು ಗ್ರಾಮ ಪಂಚಾಯ್ತಿಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು,ಜಿಲ್ಲಾಧಿಕಾರಿಗಳವರ ನಿರ್ಧೇಶನದಂತೆ ಕೋವಿಡ್ 3ನೇ ಅಲೆಯ ದುಷ್ಪರಿಣಾಮ ಬೀರದಂತೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದ್ದು ಟಾಸ್ಕ್ ಪೋರ್ಸ್ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳೀಯ ಆಡಳಿತಗಳು ಸಿಬ್ಬಂದಿ ವರ್ಗ ಕೈಜೋಡಿಸಬೇಕಿದೆ. ತಾಲೂಕಿನ ಎಲ್ಲಾ ಹಂತದ ಜನಪ್ರತಿನಿಧಿಗಳು ತಾಲೂಕಾಡಳಿತದೊಂದಿಗೆ ಸಹಕರಿಸಬೇಕಿದೆ,ಮದುವೆ ಸಮಾರಂಭಗಳು ಹಾಗೂ ಉತ್ಸವಗಳಿಗೆ ಕಡಿವಾಣ ಹಾಕಲಾಗಿದೆ.ಈ ನಿಟ್ಟಿನಲ್ಲಿ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸಬೇಕಿದ್ದು,
ನಿಯಮ ಮೀರಿದವರ ವಿರುದ್ಧ ಕಾನೂನು ರೀತ್ಯ ಶಿಸ್ಥು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಸಿದರು.
ತಾಲೂಕಿನಲ್ಲಿ ಕೋವಿಡ್ 3ನೇ ಅಲೆ ನಿಯಂತ್ರಿಸುವಲ್ಲಿ ಎಲ್ಲಾ ಇಲಾಖೆಗಳ ಪಾತ್ರ ಅಗತ್ಯವಿದ್ದು,ಜಿಲ್ಲಾಧಿಕಾರಿ ಗಳ ಅಧಿಸೂಚನೆಯಂತೆ ತಾಲೂಕಿನ ಎಲ್ಲಾ ಹಂತದ ಟಾಸ್ಕ್ ಪೋರ್ಸ್ ಸಿಬ್ಬಂದಿಗಳಿಗೆ,ತಾವು ನಿರ್ವಹಿಸಬೇಕಾಗಿರುವ ಕರ್ಥವ್ಯದ ಕುರಿತು ಅದಿಸೂಚನೆ ನೀಡಲಾಗುವುದೆಂದರು.
ಡೆಂಗ್ಯೂ ಹಾಗೂ ಬ್ಲಾಕ್ ಫಂಗಸ್ ಸೇರಿದಂತೆ ಗಂಭೀರ ಖಾಯಿಲೆಗಳು ಬಾರದಂತೆ,ಅಗತ್ಯ ಮುಂಜಾಗ್ರತ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು
ಸೋಂಕುನಿಯಂತ್ರಣಕ್ಕೆ ಪ್ರತಿ ನಾಗರೀಕರು ಹಾಗೂ ಪ್ರಜ್ಞಾವಂತರು ಕೋವಿಡ್ ನಿಯಮಗಳನ್ನು ಪಾಲಿಸಬೇಕಿದೆ, ತಾಲೂಕಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಈ ಮೂಲಕ ಸಾರ್ವಜನಿಕರಲ್ಲಿ ಕೋರಿದರು.ತಾಲೂಕು ಟಾಸ್ಕ್ ಪೋರ್ಸ್ ಕಮಿಟಿ ಸದಸ್ಯರು ಹಾಗೂ ವಿವಿದ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
