;

ಸಾರ್ವಜನಿಕರ ಸಮಸ್ಯೆಗಳನ್ನು ಹೊತ್ತು “ತಹಶೀಲ್ದಾರ್” ಭೇಟಿಯಾದ ಎಂ,ಪಿ,ವೀಣಾ ಮಹಾಂತೇಶ್!!

ಸಾರ್ವಜನಿಕರ ಸಮಸ್ಯೆಗಳನ್ನು ಹೊತ್ತು “ತಹಶೀಲ್ದಾರ್” ಭೇಟಿಯಾದ ಎಂ,ಪಿ,ವೀಣಾ ಮಹಾಂತೇಶ್!!

ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಶ್ರೀಮತಿ,ಎಂ,ಪಿ,ವೀಣಾ,ಮಹಾಂತೇಶ್ರವರು, ಇಂದು ಹರಪನಹಳ್ಳಿಯ ತಹಶೀಲ್ದಾರ್ ಅವರನ್ನು ಭೇಟಿಯಾಗಿ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ ಪರಿಹಾರವನ್ನು ಒದಗಿಸಿಕೊಡುವುದು, ಕೋವಿಡ್ ಮೊದಲ ಹಾಗೂ ಎರಡನೇ ಲಸಿಕೆಗಾಗಿ ಹದಿನೆಂಟು ವರ್ಷ ಮೇಲ್ಪಟ್ಟ ವಯಸ್ಸಿನ ಪ್ರತಿಯೊಬ್ಬರು ಪಡುತ್ತಿರುವ ಕಷ್ಟವನ್ನು ಪರಿಹರಿಸುವುದು ಮತ್ತು ನಲ್ವತೈದು ವಷ೯ ಮೇಲ್ಪಟ್ಟ ವರಿಗೆ ಎರಡನೇ ಲಸಿಕೆ ಹಾಕಿಸುವ ವಿಷಯ ಸೇರಿದಂತೆ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಕೈಗೊಂಡ ಕಾರ್ಯಕ್ರಮ ಕುರಿತು ಚರ್ಚೆ ನಡೆಸಿದರು. ಅದಕ್ಕೆ ತಮ್ಮ ಸಂಸ್ಥೆಯಿಂದ ಬೇಕಾದ ಸಹಕಾರವನ್ನು ನೀಡುತ್ತೇವೆ ಎಂದು ತಿಳಿಸಿದರು . ಕೋವಿಡ್ , ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ತಾವು ಸರಕಾರದ ಪರಿಹಾರ, ಸಹಾಯವನ್ನು ಆದಷ್ಟು ಬೇಗ ತಾಲೂಕಿನ ನೊಂದ ಜನಕ್ಕೆ ನೀಡಬೇಕೆಂದು ಆಗ್ರಹಿಸಿದರು . ಸಂಧಿಗ್ದ ಪರಿಸ್ಥಿತಯ ಜನರ ತಾಪತ್ರಯಗಳನ್ನು ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಅವರು ತಹಶೀಲ್ದಾರ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಮೇಲಿನ ಎಲ್ಲ ವಿಷಯಗಳ ಬಗ್ಗೆ ಗಮನಹರಿಸಿದ ತಹಶೀಲ್ದಾರ್ ಅವರು ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇನೆ. ಹಾಗೂ ತಮ್ಮಿಂದ ಸಹಕಾರ ಬೇಕಾದಲ್ಲಿ ಪಡೆದುಕೊಳ್ಳುತ್ತೇವೆ ಎನ್ನುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕವಿತಾ ವಾಗೀಶ್ ಮಾಜಿ ಪುರಸಭೆ ಅಧ್ಯಕ್ಷರು ಶ್ರೀ ಸಿದ್ದಲಿಂಗನಗೌಡ ವಕೀಲರು ದುಗ್ಗಾವತಿ ಶ್ರೀಮತಿ ರೇಕಮ್ಮ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಚಿಗಟೇರಿ ಶ್ರೀಮತಿ ಗಾಯತ್ರಿ ದೇವಿ ಸೋನಿಯಾ ಗಾಂಧಿ ಬ್ರಿಗೇಡ್ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಾದಾಪೀರ್ ಮಕರಬ್ಬಿ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಶ್ರೀ ಮಂಜುನಾಥ ಸಿ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ಕಾರ್ತಿಕ್ ಶ್ರೀ ಮದನ್ ಸ್ವಾಮಿ ಶ್ರೀ ಅಂಜಿನಿ ಶ್ರೀ ಪ್ರಜ್ವಲ್ ಕುಮಾರ್ ಶ್ರೀ ಅರುಣ್ ಕುಮಾರ್ ಶ್ರೀ ಗುರು ಬಸವರಾಜ್ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;