ಬೆಳೆಗಳಿಗೆ ವಿಷ ಹಾಕುತ್ತಿಲ್ಲ, ಜೀವಗಳಿಗೆ ವಿಷ ಹಾಕಲಾಗುತ್ತದೆ- ಆನಂದ ಆಶ್ರೀ ರೈತರಿಗೆ ಕಿವಿ ಮಾತು.
ಕೂಡ್ಲಿಗಿ.ಜು.26 :- ನಾವು ಇಂದು ಬೆಳೆಗಳಿಗೆ ವಿಷ ಹಾಕುವ ಮೂಲಕ ಅಮೂಲ್ಯ ಜೀವಗಳಿಗೆ ವಿಷಹಾಕುತ್ತಿದ್ದೇವೆ ಎಂಬ ಅಪರಾಧ ಪ್ರಜ್ಞೆ ಕಾಡಿದಾಗ ಮಾತ್ರ ಕೖಷಿ ಸಂಸ್ಕ್ರುತಿ, ಪರಂಪರೆ ಉಳಿಯಲು ಸಾಧ್ಯ, ಕೖಷಿಯಲ್ಲಿ ಲಾಭಕ್ಕಿಂತ ಮುಖ್ಯವಾಗಿ ಸೇವಾ ಮನೋಭಾವ ಬಂದಾಗ ಮಾತ್ರ ರೈತರ ಬದುಕು ಹಸನಾಗುವುದರ ಜೊತೆಗೆ ಜಗತ್ತಿನಲ್ಲಿ ಜೀವವೈವಿಧ್ಯ ಉಳಿಯಲು ಸಾಧ್ಯ ಎಂದು ಕರ್ನಾಟಕ ಸರ್ಕಾರದ ಸಾವಯವ ಕೃಷಿ ಮಿಷನ್ ಅದ್ಯಕ್ಷ ಆನಂದ ಆಶ್ರೀ ರೈತರಿಗೆ ಕಿವಿಮಾತು ಹೇಳಿದರು.
ಅವರು ತಾಲೂಕಿನ ಹೊಸಹಳ್ಳಿ ಸಮೀಪದ ಹುಲಿಕೆರೆ ಗ್ರಾಮದಲ್ಲಿ ಸುಭಿಕ್ಷಾ ಸಾವಯವ ಮಳಿಗೆ ಉದ್ಗಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸುಭಿಕ್ಷಾ ಮಳಿಗೆ ಗ್ರಾಹಕರಿಗೆ ಒಳ್ಳೆಯ ಸಾವಯ ವಸ್ತುಗಳನ್ನು ಕೊಡಲು ಸೀಮಿತವಾಗದೆ ಪ್ರಕೃತಿ ಉಳಿಸಲು ಗುರುತರ ಪಾತ್ರ ವಹಿಸಬೇಕು ಇಂದು ನಾವೆಲ್ಲರೂ ಭೂಮಿಗೆ ವಿಷ ಹಾಕಿ ಬೆಳೆದ ಪದಾರ್ಥಗಳನ್ನು ತಿನ್ನುತ್ತಿದ್ದು ಇದು ನಿಲ್ಲಬೇಕು ರೈತ ಭೂಮಿಗೆ ವಿಷ ಹಾಕುವುದನ್ನು ನಿಲ್ಲಿಸಬೇಕು, ಇಡೀ ಜಗತ್ತು ಬಟ್ಟೆ ಇಲ್ಲದೆ ಜೀವನ ನಡೆಸುವ ಸಮಯದಲ್ಲಿ ನಮ್ಮ ಭಾರತದಲ್ಲಿ ಕೃಷಿ ಯಲ್ಲಿ ತೊಡಗಿಕೊಂಡಿತ್ತು ಅಂತಹ ಸಂಸ್ಕೃತಿ ಹೊಂದಿರುವ ದೇಶಗಳಲ್ಲಿ ನಮ್ಮದು ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾಪಕ ಪ್ರಮುಖ ಮಂಗೇಶ್ ಬೆಂಡೆ ಅವರು ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ ಬರುವ ಪೀಳಿಗೆಗೆ ಆರೋಗ್ಯ ಹಾಗೂ ಆರೋಗ್ಯವಂತ ಭೂಮಿಯನ್ನು ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೇ ಈ ನಿಟ್ಟಿನಲ್ಲಿ ಎಲ್ಲಾ ರೈತರು ಸಾವಯ ಕೃಷಿಯ ಕಡೆಗೆ ಒಲವು ತೋರಬೇಕಿಗೆ ಎಂದರು.ರೈತರು ಹುಟ್ಟಿಹಾಕಿರುವ ಸಂಸ್ಥೆ ಅಂದರೆ ಸುಭಿಕ್ಷಾ ಆರ್ಗ್ಯಾನಿಕ್ ಪಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿಯಿಂದ ಇಂದು ವಿಜಯನಗರ ಜಿಲ್ಲೆಯಲ್ಲಿ ಮೊದಲ ಸಾವಯವ ಮಳಿಗೆ ಮಾಡಿದ್ದು ಇದರಿಂದಾಗಿ ರೈತರು ಸಾವಯವದಲ್ಲಿ ಬೆಳೆದ ಪದಾರ್ಥಗಳಿಗೆ ಮಾರುಕಟ್ಟೆ ಸಿಗುತ್ತದೆ ಹಾಗೂ ರಾಜ್ಯಾದ್ಯಂತ ಪ್ರತಿ ತಾಲೂಕು ಜಿಲ್ಲಾ ಕೇಂದ್ರ…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
