ರೈತರಿಗೆ ಕುತ್ತಿಗೆ ನೇಣು ಸರ್ಫೇಸಿ ಕಾಯ್ದೆ…!!!

ರೈತರಿಗೆ ಕುತ್ತಿಗೆ ನೇಣು ಸರ್ಫೇಸಿ ಕಾಯ್ದೆ

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ ಫಲವನು ಬಯಸದೆ ಸೇವೆಯ ಪೂಜೆಯು ಕರ್ಮವೆ ಇಹಪರ ಸಾಧನವು

ನಾಡಿನ ರೈತಗೀತೆಯ ಸಾಲುಗಳು ಇವು. ರೈತರು ತಮ್ಮ ನೋವನ್ನು ಎಂದೂ ಹೇಳಿಕೊಳ್ಳಲಾರರು. ಸ್ವಾಭಿಮಾನಿಗಳು, ಸ್ವಾಭಿಮಾನದ ಉಳಿವಿಗೆ ಪ್ರಾಣವನ್ನಾದರೂ ಬಿಟ್ಟಾರು ಅದರೆ ನೋವ ಹೇಳಿಕೊಂಡು ಅನುಕಂಪ ಬಯಸರು. ಈ ನಿಟ್ಟಿನಲ್ಲಿ ಸರ್ಫೇಸಿ ಕಾಯ್ದೆಯು ಒಂದು ರೀತಿಯ ನೇಣು ಕುಣಿಕೆಗೆ ನೇರ ಆಹ್ವಾನ ವಿದ್ದಂತಿದೆ. ಈ ಕುರಿತು ಒಂದು ಎಚ್ಚರಿಕೆಯ ನೋಟ

ಸರ್ಫೇಸಿ ಕಾಯ್ದೆ ಎಂದರೇನು?

ಸಾಲಗಾರರ ವಾಗ್ದಾನ ಮಾಡಿದ ಸೆಕ್ಯೂರಿಟಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಹರಾಜು ಮಾಡಲು, ಬಾಕಿ ಇರುವ ಬಾಕಿಗಳನ್ನು ವಸೂಲಿ ಮಾಡಲು SARFAESI ಕಾಯಿದೆ ಬ್ಯಾಂಕುಗಳಿಗೆ ನೇರ ಅಧಿಕಾರ ನೀಡುತ್ತದೆ.

SARFAESIS Act 2002 – Securitization and Reconstruction of Financial Assets and Enforcement of Security Interest.

ಈ ಕಾಯ್ದೆಯು, ಬ್ಯಾಂಕುಗಳಿಗೆ ಸುಸ್ತಿಯಾದ ಕೃಷಿ ಸಾಲವನ್ನು ನೋಟೀಸು ನೀಡಿದ ಅರವತ್ತು ದಿನಗಳ ಒಳಗಾಗಿ ನ್ಯಾಯಾಲಯವನ್ನು ಸಂಪರ್ಕಿಸದೆ ನೇರವಾಗಿ ಹರಾಜು ಹಾಕಿಕೊಂಡು ತಮ್ಮ ಸಾಲದ ಮೊತ್ತವನ್ನು ಮುರಿದುಕೊಳ್ಳಬಹುದು ಎಂಬ ಅಧಿಕಾರವನ್ನು ನೀಡುತ್ತದೆ.

ಯಾವುದೇ ಕೃಷಿಕನ ಸಾಲವು ಸುಸ್ತಿಯಾಗಿದೆ ಎಂದರೆ ಆತನು ಅಪರಾಧಿಯಲ್ಲ, ಬದಲಾಗಿ ಅಸಹಾಯಕ. ಹವಾಮಾನ ವೈಪರೀತ್ಯ, ಬೆಲೆ ನಷ್ಟದಿಂದಾಗಿ ಕೃಷಿ ಆರ್ಥಿಕತೆಯ ನಷ್ಟಕ್ಕೊಳಗಾಗಿ ಬ್ಯಾಂಕಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇರುತ್ತಾನೆಯೇ ಹೊರತು, ಬ್ಯಾಂಕಿಗೆ ಮೋಸಮಾಡಬೇಕೆಂಬ ಉದ್ದೇಶವಿರುವುದಿಲ್ಲ. ಆದರೆ ಸಾಲ ಮರುಪಾವತಿ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ರೈತನಿಗೆ ನಿರೂಪಿಸಲು ಹಾಗೂ ನ್ಯಾಯಾಲಯಕ್ಕೆ ಮೊರೆಹೋಗುವ ಅವಕಾಶವನ್ನೇ ನೀಡದೇ ಏಕಾಏಕಿ ಹರಾಜು ನಡೆಸುವ ಅಧಿಕಾರವನ್ನು ಬ್ಯಾಂಕುಗಳಿಗೆ ನೀಡಿದರೆ ಅದು ಅಸಹಾಯಕ ರೈತನ ಅಂತ್ಯಕ್ಕೆ ಮುನ್ನುಡಿ ಬರೆದಂತೆ.

ಈ ಕಾಯ್ದೆಯ ವಿರುದ್ಧವಾಗಿ ತಮಿಳುನಾಡು ಹಾಗೂ ಕೇರಳ ಹೈಕೋರ್ಟ್ ಗಳು ತೀರ್ಪು ನೀಡಿ  ರೈತರ ಹಿತ ಕಾಯ್ದಿವೆ. ಆದರೆ ಕರ್ನಾಟಕ ಹೈಕೋರ್ಟ್ ಕಾಯ್ದೆಯ ಪರವಾಗಿ ತೀರ್ಪು ನೀಡಿದೆ.
ಈ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಕೃಷಿಯನ್ನು ಇದರಿಂದ ಹೊರತುಪಡಿಸಬೇಕೆಂದು ಒತ್ತಾಯಿಸಿ, ಈ ವಿಚಾರದ ಬಗ್ಗೆ ಗಮನ ಸಳೆಯಲು ಪೋಸ್ಟ್ ಕಾರ್ಡ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ವಾಣಿಜ್ಯ ಬೆಳೆಗಳನ್ನು ಬೆಳೆಯುವ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತೀ ಹಳ್ಳಿಗಳ ರೈತರಿಂದ ಪೋಸ್ಟ್ ಕಾರ್ಡ್ ಗಳನ್ನು ಬರೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತದೆ.

2002ರಲ್ಲಿ ಜಾರಿಗೆ ಬಂದ ಈ ಕಾಯ್ದೆಯು ವಿಜಯ್ ಮಲ್ಯ ಹಾಗೂ ಹಲವು ಭ್ರಷ್ಟರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಹ ಸಹಕಾರಿಯಾಗಿತ್ತು.ಆದರೆ ಇದನ್ನ ಅಸ್ತ್ರವನ್ನಾಗಿ ಬಳಸಿಕೊಂಡು ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡದಿಂದ ಬ್ಯಾಂಕ್ ಗಳು ಸಣ್ಣ ಸಣ್ಣ ರೈತರ ಸಾಲಕ್ಕೆ ಸಹ ನೋಟಿಸ್ ನೀಡಿ ಮುಟ್ಟುಗೋಲು ಹಾಕಿಕೊಳ್ಳಲು ನೋಡುತ್ತಿವೆ.ಆದಕಾರಣ ಈ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಇದರಿಂದ ಕೃಷಿಯನ್ನು ಕೈ ಬಿಡಬೇಕು ಎಂಬುದು ರೈತವರ್ಗದ ಮನವಿ.

ಈಗಿನ ಅತೀವೃಷ್ಟಿ, ಅನಾವೃಷ್ಟಿ ಅಕಾಲಿಕ ಮಳೆಯಿಂದಾಗಿ,ಮತ್ತು ಎರೆಡು ಲಾಕ್ ಡೌನ್ ನ ನಡುವೆ ಬದುಕೇ ಕಷ್ಟ ವಾಗಿರುವಾಗ ಸಾಲ ಮರುಪಾವತಿ ಇನ್ನೂ ಕಷ್ಟದಾಯಕ ಈ ಸ್ಥಿತಿಯಲ್ಲಿ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕುಗಳು ಆಸ್ತಿಯನ್ನು ಹಾರಾಜು ಮಾಡಿದರೆ ಕೃಷಿ ಭೂಮಿ ಕಳೆದುಕೊಂಡು ರೈತ ಖಂಡಿತವಾಗಿ ಬದುಕಲಾರ.

ವರದಿ: ಅಜಯ.ಚ (ಹುಗಲೂರು)
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend