ಮೊಳಕಾಲ್ಮುರು: ರಾಂಪುರದಲ್ಲಿ ಕಾರ್ಮಿಕ ಇಲಾಖೆ ನೀಡುವ ಆಹಾರ ಕಿಟ್ ಸಿಗದೆ ಪ್ರತಿಭಟಿಸಿದ ಕಟ್ಟಡ ಕಾರ್ಮಿಕರು.!

ಚಿತ್ರದುರ್ಗ: ಜಿಲ್ಲಾಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಇಂದು (ಜು-27) ಕಾರ್ಮಿಕ ಇಲಾಖೆಯಿಂದ ಫುಡ್ ಕಿಟ್ ಗಾಗಿ ಸಾವಿರಾರು ಕಟ್ಟಡ ಕಾರ್ಮಿಕರು ಇಂದು ಸಂತೆ ಇರುವ ಕಾರಣದಿಂದ ಹೆಚ್ಚಿನ ಜನರು ಜಮಾಯಿಸಿದರು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯ ಜನರಿಗೆ ಮಾಹಿತಿ ನೀಡಿಲ್ಲ. ಮಧ್ಯವರ್ತಿಗಳ ಹೇಳಿಕೆಯಿಂದ ಪ್ರತಿ ಹಳ್ಳಿಯಲ್ಲಿ ಆಹಾರ ಕಿಟ್ಟು ವಿತರಣೆ ಮಾಡಲಾಗುತ್ತಿದೆ ಎಂದು ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗಿತ್ತು. ಗುರುತಿನ ಚೀಟಿ ಹಿಡಿದು ನೂಕುನುಗ್ಗಲು 12 ಗಂಟೆಯಾದರೂ ಸ್ಥಳಕ್ಕೆ ಯಾವ ಅಧಿಕಾರಿ ಸುಳಿವೇ ಇಲ್ಲದ ಕಾರಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಲಿ-ನಾಲಿ ಬಿಟ್ಟು ಕೂಲಿ ಕಾರ್ಮಿಕರು ಹಳ್ಳಿಯಿಂದ ಬೆಳಗ್ಗೆ 6 ಗಂಟೆಗೆ ಬಂದು ಊಟ ನೀರು ಇಲ್ಲದೆ ಬೆಳಗ್ಗೆಯಿಂದ ನಾವುಗಳು ಕಾಯುತ್ತಿದ್ದೇವೆ ಯಾವ ಅಧಿಕಾರಿಯೂ ಬಂದಿಲ್ಲ ಎಂದು ಕೂಲಿ ಕಾರ್ಮಿಕರಾದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend