ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಪಂ ವ್ಯಾಪ್ತಿಯ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿಯ ರೈತ ಎಂ.ಪಿ.ಮಲ್ಲಿಕಾರ್ಜುನ. ಶೇಂಗಾದಲ್ಲಿ ಎಡೆಕುಂಟೆ ಹೊಡೆಯಲು ಎತ್ತುಗಳ ಸಮಸ್ಯೆ ಕಾಡಿದ್ದರಿಂದ ರೈತನೊಬ್ಬ ಮನೆಯಲ್ಲಿದ್ದ ಹಳೆ ಸೈಕಲ್‌ನ್ನು ಕೇವಲ 800 ರೂ. ಖರ್ಚು ಮಾಡಿ ತಾನೇ ತಳ್ಳುವ ಎಡೆಕುಂಟೆ ಮಾಡಿಕೊಂಡು ಗಮನಸೆಳೆದಿದ್ದಾನೆ. ಒಂದು ಮುಕ್ಕಾಲು ಎಕರೆ ಜಮೀನಿನಲ್ಲಿ ಬೆಳೆದಿರುವ ಶೇಂಗಾದಲ್ಲಿ ಕಳೆ ತೆಗೆಯಲು ಎತ್ತುಗಳು ಸಿಗದಿರುವುದು ಹಾಗೂ ಹೆಚ್ಚಿದ ಕೂಲಿ ಹಣ ನೀಡುವುದು ಕಷ್ಟವಾಗಿತ್ತು. ಕಳೆದ ವರ್ಷ ಯಾರೋ ಮಂಡ್ಯ ಭಾಗದವರು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದ ಈ ವಿಡಿಯೋ ನೋಡಿದ್ದೆ ಇದನ್ನೇ ಈ ವರ್ಷ ನಾನು ನಮಗೆ ಆನುಕೂಲವಾಗುವ ರೀತಿಯಲ್ಲಿ ತಯಾರಿಸಿಕೊಂಡು ಎಡೆಕುಂಟೆ ಹೊಡೆಯುತ್ತಿದ್ದಾನೆ. ನಮ್ಮ ಜಮೀನಿನಲ್ಲಿ ಎಡೆಕುಂಟೆ ಹೊಡೆಯಲು ಎರಡು ಎತ್ತು, ನಾಲ್ಕು ಜನ ಕೂಲಿಯಾಳು ಬೇಕಾಗುತ್ತದೆ. ಒಬ್ಬರಿಗೆ 1500 ರೂ. ಕೂಲಿ ನೀಡಬೇಕು. ಇತ್ತೀಚೆಗೆ ಎತ್ತುಗಳ ಸಂಖ್ಯೆ ಕಡಿಮೆಯಾಗಿದ್ದು, ನಮಗೆ ಬೇಕಾದ ಸಮಯಕ್ಕೆ ಹಣ ನೀಡಿದರೂ ಎತ್ತು, ಕೂಲಿಯಾಳು ದೊರೆಯುವುದಿಲ್ಲ. ಈ ಕಾರಣದಿಂದ ಹಣ ಉಳಿತಾಯದ ಜತೆ ನಮಗಿಷ್ಟ ಬಂದಾಗ ಕೆಲಸ ಮಾಡಿಕೊಳ್ಳಲು ಈ ಯಂತ್ರ ನನಗೆ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ. ನಮ್ಮ ಭಾಗದಲ್ಲಿ ಅನುಕೂಲಕ್ಕೆ ತಕ್ಕಂತೆ ನಾಲ್ಕು ಕುಳ ಜೋಡಿಸಿಕೊಂಡಿದ್ದೇನೆ. ಒಬ್ಬ ವ್ಯಕ್ತಿ ಸರಾಗವಾಗಿ ಚಲಿಸುತ್ತಾ ಬೆಳೆಯ ಎರಡು ಸಾಲಿನ ಮಧ್ಯದ ಕಳೆಯನ್ನು ಸುಲಭವಾಗಿ ತೆರವುಗೊಳಿಸಬಹುದು. ಎತ್ತುಗಳಿಂದ ಈ ಕೆಲಸ ಮಾಡಿಸಿದರೂ ಇಷ್ಟೊಂದು ಆಳಕ್ಕೆ ಕುಳ ಹೋಗುವುದಿಲ್ಲ, ಗಿಡಗಳಿಗೆ ಹಾನಿಯಾಗುವ ಆತಂಕ ಇದ್ದೇ ಇರುತ್ತದೆ. ಆದರೆ ನಾನು ಸಿದ್ಧಪಡಿಸಿದ ಈ ಯಂತ್ರದಿಂದ ಯಾವ ಹಾನಿಯೂ ಆಗುವುದಿಲ್ಲ ಎಂದು ರೈತ ತಿಳಿಸಿದರು.

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
