ಕ್ರಷರ್ ಕಂಪನಿಯಲ್ಲಿ ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ಕಳ್ಳತನ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ಆಲೂರು ಹತ್ತಿರದಲ್ಲಿರುವ ಎಸ್ ಎ ವಿ ಕನ್ಸ್ಟ್ರಕ್ಷನ್ ಕಂಪನಿಗೆ ಸೇರಿದ ಕ್ರಷರ್ ಕಂಪನಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಸುಮಾರು 9.98 ಲಕ್ಷ ಮೌಲ್ಯದ ಸಾಮಗ್ರಿಗಳು ಕಳ್ಳತನವಾಗಿವೆ.
ಕಂಪನಿಯಲ್ಲಿ ನಿಲ್ಲಿಸಿದ್ದ ಲಾರಿಗಳ ಡಿಸ್ಕ್ ನೊಂದಿಗೆ 22 ಟೈಯರ್ ಗಳು,6 ಬ್ಯಾಟರಿ 250 ಲೀಟರ್ ಡೀಸೆಲ್ ಸೇರಿ 9.98 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಕಂಪನಿಯ ನೌಕರ ಮೈಕಲ್ ಜೆರಾಲ್ಡ್ ಕರ್ಮಸಿಂಗ್ ನೀಡಿದ ದೂರಿನ ಮೇರೆಗೆ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ…
ವರದಿ. ವಿರೇಶ್, ಕೆ, ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

