ಬಿ.ಜಿ.ಕೆರೆ: ಶಾಲಾ ಪ್ರಾರಂಭೋತ್ಸವ ಹಾಗೂ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ.!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ದಾಖಲಾತಿ ಆಂದೋಲನಕ್ಕೆ ಮುಖ್ಯ ಶಿಕ್ಷಕ ಎಂ.ಮಲ್ಲಿಕಾರ್ಜುನ ಚಾಲನೆ ನೀಡಿ ಮಕ್ಕಳಿಗೆ ಪುಸ್ತಕ ವಿತರಿಸಿದರು. ಮೊಳಕಾಲ್ಮುರು: ತಾಲೂಕಿನ ಬಿಜಿಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ದಾಖಲಾತಿ ಆಂದೋಲನಕ್ಕೆ ಮುಖ್ಯ ಶಿಕ್ಷಕ ಎಂ.ಮಲ್ಲಿಕಾರ್ಜುನ ಚಾಲನೆ ನೀಡಿದರು. ಶಾಲಾ ದಾಖಲಾತಿ ಯೋಜನೆಯಡಿ ಶಾಲಾ ಪ್ರಾರಂಭೋತ್ಸವ ಹಾಗು ದಾಖಲಾತಿ ಆಂದೋಲನ ಏರ್ಪಡಿಸಿದ್ದು ಶಿಕ್ಷಕ ವೃಂದ 2020-21 ನೇ ಸಾಲಿನ 8 ನೇ ತರಗತಿಗೆ ದಾಖಲಾತಿಗಾಗಿ ವಿದ್ಯಾರ್ಥಿಗಳಿಗೆ ಪ್ರೇರೆಪಿಸಿ ಶಾಲೆಯಲ್ಲಿ ದೊರಕುವಂತ ಸೌಲಭ್ಯಗಳಕುರಿತು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನವರಿಕೆ ಮಾಡಿದರು. ಹೊಸದಾಖಲು ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಬುಕ್ ಬ್ಯಾಗ್ ಕಾರ್ಯಕ್ರಮದಡಿಯಲ್ಲಿ 8 ಮತ್ತು 9 ನೇತರಗತಿಯ 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲಾಯಿತು. ಪ್ರತಿ ವಿದ್ಯಾರ್ಥಿ ಮನೆಗಳಿಗೆ ತೆರಳಿ ಚಂದನದಲ್ಲಿ ಪ್ರಸಾರವಾಗುವ ವೇಳಾಪಟ್ಟಿ ನೀಡಿ ಪಾಠ ಆಲಿಸುವಂತೆ ಮಾರ್ಗದರ್ಶನ ಮಾಡಲಾಯಿತು. ಮುಖ್ಯ ಶಿಕ್ಷಕ ಎಂ.ಮಲ್ಲಿಕಾರ್ಜುನ, ಶಿಕ್ಷಕರಾಜಣ್ಣ ತಿಪ್ಪೇಶ, ಅಶೋಕ್, ವಿಜಯ, ಎಸ್. ಮಂಗಳ, ಹೇಮಾವತಿ, ಎ.ಕೆ.ಚಲುವಾಂಬ ಇತರರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend