ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ವತಿಯಿಂದ ವಿವಿಧ ಕಾಲೇಜುಗಳ,ಪ್ರಾಂಶುಪಾಲರ,ಮುಖಾಂತರ ಉನ್ನತ ಶಿಕ್ಷಣ,ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು…!!!

ಇಂದು ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ವತಿಯಿಂದ ಪದವಿ ವಿದ್ಯಾರ್ಥಿಗಳ ಬೆಸ ಸಂಖ್ಯೆ ಪರೀಕ್ಷೆಗಳನ್ನು,ರದ್ದುಗೊಳಿಸಬೇಕೆಂದು ವಿವಿಧ ಕಾಲೇಜುಗಳ,ಪ್ರಾಂಶುಪಾಲರ,ಮುಖಾಂತರ ಉನ್ನತ ಶಿಕ್ಷಣ,ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ ಒಂದೇ ಪರೀಕ್ಷೆ ನಡೆಸಿ.
ಬಳ್ಳಾರಿ. ಗಣಿ ನಗರದ ಲ್ಲಿ,ಇಂದು. ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ವತಿಯಿಂದ ಪದವಿ ವಿದ್ಯಾರ್ಥಿಗಳ ಬೆಸ ಸಂಖ್ಯೆ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಮಾನ್ಯ ಉನ್ನತ ಶಿಕ್ಷಣ ಸಚಿವ ಸಚಿವರಿಗೆ ಮಾನ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಸಿಟಿ,ವೀರಶೈವ ಕಾಲೇಜು ಪ್ರಾಂಶುಪಾಲರುಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.
ಪದವಿ ಸ್ನಾತಕೋತ್ತರ ಪದವಿ ಇಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಫಾರ್ಮಸಿ ಕಾಲೇಜುಗಳಿಂದ ವಿಶ್ವವಿದ್ಯಾನಿಲಯಗಳ ಕುಲಪತಿಗಳು, ಶಾಸಕರು, ಪ್ರಾಂಶುಪಾಲರ, ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.
ಹಾಗೂ ಪತ್ರ ಚಳುವಳಿಯಲ್ಲಿ ಕೂಡ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಒಂದು ತಿಂಗಳಲ್ಲಿ 2ಸೆಮಿಸ್ಟರ್ ಗಳ ಪರೀಕ್ಷೆ ಬರೆಯಲಾರ ವು, ಎಂಬುದು ರಾಜ್ಯದ ವಿದ್ಯಾರ್ಥಿಗಳು ಕೂಗು.
ಕಳೆದ ಒಂದು ವಾರದಿಂದ ನಡೆಸಿದ ಗೂಗಲ್ ಫಾರ್ಮ್ ಸಮೀಕ್ಷೆಯಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು,ಶೇಕಡ 91 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಪ್ರಚಲಿತ ಸೆಮಿಸ್ಟರ್ ನಡುವೆ ನಡೆಯುವುದು ಬೇಡ, ಎಂಬ ಅಭಿಪ್ರಾಯ ಮಂಡಿಸಿದರು.
ತದನಂತರ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಪ್ರ ಸತ್ತಾತ್ಮಕ, ಚರ್ಚೆಯ ನಂತರವೇ ಮುಂದಿನ ಹಾದಿ ನಿರ್ಧರಿಸಬೇಕು, ಎಂಬುದು ವಿದ್ಯಾರ್ಥಿಗಳ ಬೇಡಿಕೆ ಆಗಿದೆ, ಎಂದು ಎಐಡಿಎಸ್ಒ ಜಿಲ್ಲಾಧ್ಯಕ್ಷರಾದ ಗುರಳ್ಳಿ ರಾಜ, ಅವರು ತಿಳಿಸಿದರು.

ಬೇಡಿಕೆಗಳು.
1.ಪದವಿ ಇಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಳೆದ ಸೆಮಿಸ್ಟರ್ನ ನ ಪರೀಕ್ಷೆಯನ್ನು ನಡೆಸುತ್ತೇವೆ ಎಂಬ ಅವೈಜ್ಞಾನಿಕ ಮತ್ತು ಅತಾರ್ಕಿಕವಾದ ನಿರ್ಧಾರವನ್ನು ಹಿಂಪಡೆಯಿರಿ.
2. ಸಂಬಂಧಪಟ್ಟವರ ಅಭಿಪ್ರಾಯವನ್ನು ಪಡೆಯದೆ, ಏಕಪಕ್ಷೀಯವಾಗಿ ಹಾಗೂ ಅಪ್ರಜಾತಾಂತ್ರಿಕವಾಗಿ ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿ.
.3.ನೀತಿಗಳನ್ನು ರಚಿಸುವವರು ಉತ್ತರಿಸಿ.!
ವಿದ್ಯಾರ್ಥಿ ಸಮೂಹದ ಮೇಲೆ ವಿಪರೀತ ಹೊರೆ ಹೇ ರುವುದನ್ನು ನಿಲ್ಲಿಸಿ.
4. ಆಫ್ಲೈನ್ ತರಗತಿಗಳು ಆರಂಭವಾಗುವ ಮುನ್ನ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ವ್ಯಾಕ್ಸಿನ್ ನೀಡಿರಿ.
ಸುದ್ದಿ ಇವರಿಂದ ಕೆ. ಈರಣ್ಣ ಜಿಲ್ಲಾ ಸೆಕ್ರೆಟರಿಯಾಟ್ ಸದಸ್ಯರು, ಎಐಡಿಎಸ್ಒ. ಬಳ್ಳಾರಿ.

ವರದಿಗಾರರು,ಎಂ.ಎಲ್. ವೆಂಕಟೇಶ್ಬಳ್ಳಾರಿ..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend