ಸ್ವರ ಮಾಂತ್ರಿಕನನ್ನು ಸ್ಮರಿಸಿದ ಸಂಗೀತ ಪ್ರೀಯರು…!!!

ಗುಡೇಕೋಟೆಯಲ್ಲಿ ಎಸ್.ಪಿ.ಬಿ. ಜನ್ಮದಿನೋತ್ಸವ.
ಸ್ವರ ಮಾಂತ್ರಿಕನನ್ನು ಸ್ಮರಿಸಿದ ಸಂಗೀತ ಪ್ರೀಯರು.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿಂದು ಡಾ.ಎಸ್.ಪಿ.ಬಾಲಸುಭ್ರಮಣ್ಯಂ ರವರ 76 ನೇ ಜನ್ಮ ದಿನವನ್ನು ಕ್ರೇಜಿ ಮೆಲೋಡಿ ಆರ್ಕೆಸ್ಟ್ರಾದ ಅಭಿಮಾನಿಗಳ ವತಿಯಿಂದ ಆಚರಿಸಲಾಯಿತು.
ಎಸ್.ಪಿ.ಬಿ.ಅವರು ನಮ್ಮೋಂದಿಗೆ ಇದ್ದಿದ್ದರೆ 76 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೋಳ್ಳುತ್ತಿದ್ದರು .ದುರದೃಷ್ಟವತ್ ಎಸ್.ಪಿ.ಬಿ.ಇಂದು ನಮ್ಮೋಂದಿಗಿಲ್ಲಾ.ಇಂದು ನಮ್ಮೇಲ್ಲರ ಜೋತೆ ಇಲ್ಲಾದಿದ್ದರೂ.ಅಭಿಮಾನಿಗಳ ಹಾಗೂ ಸಂಗೀತ ಪ್ರಿಯರ ಹೃದಯದಲ್ಲಿ ಹಚ್ಚ ಹಸಿರಾಗಿದ್ದಾರೆ.ಎಸ್.ಪಿ.ಬಿ.ಅವರ ಜನ್ಮ ದಿನದ ಇಂದು ತಾರೆಯರು ಅಭಿಮಾನಿಗಳು ಸಂಗೀತ ಪ್ರಿಯರು ಲೆಜೆಂಡರಿ ಗಾನ ಬ್ರಹ್ಮ ಗಾಯಕನನ್ನು ಸ್ಮರಿಸುತ್ತದೆ.ಎಂದು ಗುಡೇಕೋಟೆ ಗ್ರಾ.ಪಂ.ಸದಸ್ಯರಾದ.ಎನ್.ಕೃಷ್ಣ.ಮಾತನಾಡಿದರು. ಸಾವಿರಾರು ಹಾಡುಗಳ ಮೂಲಕ ಕೋಟ್ಯಾಂತರ ಜನರನ್ನು ರಂಜಿಸಿದ ಗಾಯಕ ಎಸ್.ಪಿ.ಬಿ.ಐದು ದಶಕಗಳ ಕಾಲ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದು ನಲವತ್ತು ಸಾವಿರಕ್ಕೂ ಆಧಿಕ ಹಾಡುಗಳಿಗೆ ದ್ವನಿಯಾಗಿದ್ದ ಗಾನ ಗಾರುಡಿಗ ತಲೆಮಾರುಗಳು ಬದಲಾಗಿವೆ ಅವರ ದ್ವನಿ ಮಾತ್ರ ಕಾಲಾತೀತವಾಗಿ ಮುಂದುವರೆದಿದೆ ಎಂದು ರಂಗಭೂಮಿ ಹಿನ್ನೆಲೆ ಗಾಯಕ ನಾಗರಹುಣಸೆ ದುರುಗೇಶ್ ತಿಲಿಸಿದರು.
ಡಾ.ಎಸ್.ಪಿ.ಬಿ.ಅವರ 76 ನೇ ಹುಟ್ಟು ಹಬ್ಬ ಬಹುಶ್ಹ ಅವರು ಇದ್ದಿದ್ದರೇ ಆಸಂಭ್ರಮ ಇನ್ನೆಷ್ಟು ಜೋರಾಗಿರುತ್ತಿತ್ತೋ ಏನು?? ಬರೀ ಕನ್ನಡ ತೆಲುಗು ತಮಿಳುಗರುಷ್ಟೆ ಅಲ್ಲಾ ಇಡೀ ಭಾರತೀಯ ಚಿತ್ರರಂಗ ಅವರ ಹುಟ್ಟು ಹಬ್ಬಕ್ಕೆ ಶುಭಾಷಯ ಕೋರುತ್ತಿತ್ತೋ ಏನು? ಎಸ್.ಪಿ.ಬಿ.76 ನೇ ಹೆಸರಿನ ಕಾರ್ಯಕ್ರಮ ಆಯೋಜಿತವಾಗುತ್ತಿತ್ತೋ ಏನು? ಆದರೆ ಅದ್ಯಾವುದು ನೋಡುವುದಕ್ಕೆ ಅವರು ಈಗಿಲ್ಲಾ ಎಸ್.ಪಿ.ಬಿ.ಸಾಧನೆಗೆ ಗಡಿರೇಖೆಗಳ ಅಡ್ಡಿ ಇರಲಿಲ್ಲ.”ನನಗೆ. ಕನ್ನಡಿಗರು ನೀಡಿದ ಪ್ರೀತಿ ವಾತ್ಸಲ್ಯಾ.ಬೇರೆ ಯಾರಿಂದಲೂ ದೋರಕಿಲ್ಲ.ಮುಂದಿನ ಜನ್ಮವೊಂದಿದ್ದರೆ ನಾನು ಕನ್ನಡ ನಾಡಿನಲ್ಲಿ ಜನಿಸಲು ಬಯಸುತ್ತೇನೆ ಎಂದು ಅವರೋಮ್ಮೆ ಕರುನಾಡಿಗೆ ಮನದಾಳದ ಕೃತಜ್ಞತೆ ಸಲ್ಲಿಸಿದ್ದರು.ಈ ಸಂದರ್ಭದಲ್ಲಿ ಗುಡೇಕೋಟೆ ಗ್ರಾ.ಪಂ.ಸಧ್ಯಸ್ಯರಾದ ಎನ್.ಕೃಷ್ಣ.ರಂಗಭೂಮಿ ಹಿನ್ನಲೆ ಗಾಯಕರಾದ ನಾಗರಹುಣಸೆ ದುರುಗೇಶ್.ಕ್ರೇಜಿ ಮೆಲೋಡಿ ಆರ್ಕೆಸ್ಟ್ರಾದ ಮಾಲೀಕರಾದ ಎಸ್.ಆರ್.ರಾಮು.ಮುಖಂಡರಾದ ಬೇಕರಿ ಸುರೇಶ್.ಸುಬ್ರಮಣಿ.ವಿರುಪಾಕ್ಷಿ.ಹುಲುಗೇಶ್ ಇತರೆ ಕಲಾವಿಧರು ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend