ಕಾನಹೋಸಹಳ್ಳಿ, ಕುಲುಮೆಹಟ್ಟಿ ಶಾಲಾ ಆವರಣದಲ್ಲಿ ಸಸಿ ನೆಡುವುದರ ಮೂಲಕ, ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ಹೊಸಹಳ್ಳಿ ಗ್ರಾಮದ ಕುಲುಮೆ ಹಟ್ಟಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಸಸಿ ನೆಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡ ವೀರೇಶ ಕಿಟ್ಟಪ್ಪ ನವರು ಮಾತನಾಡಿ ಪ್ರತಿವರ್ಷವೂ ಪರಿಸರ ದಿನವನ್ನು ಜೂನ್ 5ರಂದು ಆಚರಿಸಲಾಗುತ್ತಿದ್ದು ಪರಿಸರ ಸಂರಕ್ಷಣೆ ಜಾಗೃತಿ ಕುರಿತು ಸಾರ್ವಜನಿಕರಲ್ಲಿ ಪರಿಸರದಿಂದ ವನ್ಯಜೀವಿಗಳಿಗೆ ಮಾನವರಿಗೆ ಅತ್ಯಾವಶ್ಯಕವಾಗಿ ಜೀವಿಸಲು ಪರಿಸರ ಬಹಳ ಮುಖ್ಯವಾಗಿ ಬೇಕಾಗಿರುವುದರಿಂದ ಪ್ರತಿಯೊಬ್ಬರೂ ಸಸಿಯನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಿರಿ. ಮುಖಂಡ ವೆಂಕಟೇಶರವರು ಪ್ರತಿಯೊಬ್ಬ ನಾಗರಿಕರು ಮೊಟ್ಟಮೊದಲನೆಯದಾಗಿ ಪ್ರತಿಯೊಬ್ಬ ನಾಗರಿಕರು ಅವರವರ ಜಮೀನುಗಳಲ್ಲಿ ಮನೆಗಳ ಹಿತ್ತಲಿನಲ್ಲಿ ಒಳ್ಳೆಯ ಗಿಡಗಳನ್ನು ಬೆಳೆಸಿರಿ ಮತ್ತು ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ವೀರೇಶ್ ಕಿಟ್ಟಪ್ಪ ನವರ್.T ವೆಂಕಟೇಶ್. ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್, ನೇತ್ರಾವತಿ, ಮಂಜುನಾಥ, ದಾದು, ಗುರು, ಅನಿಲ್, ಕಾರ್ತಿಕ್, ಗಂಗಾಧರ, ಶಿವು ,ಪರಶುರಾಮ್, ಪ್ರಕಾಶ್ ವೀರಸ್ವಾಮಿ , ಮಂಜಣ್ಣ ಅಂಜಿನಪ್ಪ , ಕರಿ ವೀರಪ್ಪ ಅನಿಲ್ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ.ಡಿ. ಎಂ ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend