ನಮ್ಮ ನಾಡಿನ ಪತ್ರಿಕೋಧ್ಯಮದ ದಿಗ್ಗಜರು,ಸ್ವಾತಂತ್ಯ ಹೋರಾಟಗಾರರು ಇನ್ನಿಲ್ಲವೆಂಬ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,ಈ ಇಳಿವಯಸ್ಸಿನಲ್ಲಿಯೂ ಹೋರಾಟಗಳ ಬೆನ್ನತ್ತಿ ಸಾಗುತ್ತಿದ್ದ ಪೂಜ್ಯರು,ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳುವಿಗೂ ಇವರ ಹೋರಾಟದ ಫಲ ಅಂದರೆ ಅತಿಶಯೋಕ್ತಿ ಅಲ್ಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಎನ್.ರಾಜು ರವರು ಸಂಘದ ಲಕ್ಷಾಂತರ ರೂ ಗಳ ಗುಳುಂ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಹೋರಾಟಕ್ಕೆ ಬೆಂಬಲ ನಂತು ಖುದ್ದಾಗಿ ಈ ಇಳಿ ವಯಸ್ಸಿನಲ್ಲಿಯೂ ಬೆಂಗಳೂರಿನ ಅಲಸೂರ್ ಗೇಟ್ ಪೋಲಿಸ್ ರಾಣೆಗೆ ಬಂದು ಇನ್ಸ್ ಪೆಕ್ಟರ್ ಹಾಗೂ ಡಿ.ಸಿ.ಪಿ. ಯವರೊಂದಿಗೆ ವಾಗ್ವಾದ ಹೋರಾಟ ನಡೆಸಿ ಹಿಂದಿನ ರಾಜ್ಯಧ್ಯಕ್ಷರಾದ ರಾಜು ವಿರುದ್ದ ಎಪ್.ಐ.ಆರ್. ಆಗುವಂತೆ ಮಾಡಿದ ಇವರ ಹೋರಾಟ ಅವಿಸ್ಮರಣೀಯ. ಇವರ ಸಾವು ನಿಜಕ್ಕೂ ದುಃಖಃ ತಂದಿಗೆ.ಅಪ್ರತಿಮ ಹೋರಾಟಗಾರರನ್ನು ಕಳೆದುಕೊಂಡ ನಾವುಗಳು, ಇವರ ಆತ್ಮಕ್ಕೆ ಶಾಂತಿ ಕೋರುತ್ತಾ,ಮತ್ತೊಮ್ಮೆ ನಮ್ಮ ನಾಡಿನಲ್ಲಿ ಹುಟ್ಟಿ ಬಾ ಎಂಬ ಕಣ್ಣೀರಿನ ನಮನದೊಂದಿಗೆ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಕಾರ್ಯದರ್ಶಿಗಳು,ಹಾಗೂ ಎಚ್ಚರಿಕೆ ಪತ್ರಿಕಾ ಬಳಗದ ವತಿಯಿಂದ ಗೌರವನಮನಗಳೊಂದಿಗೆ….
ವರದಿ.ಮಂಜುನಾಥ್, ಎನ್, ಸಂಪಾದಕರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
