*ಕರೋನದ ಬಗ್ಗೆ ಮುಂಜಾಗ್ರತೆಯಿಲ್ಲದ ಗ್ರಾಮಡಳಿತ.ಅಸಮರ್ಥ ಪಿಡಿಓ .
ವರದಿ ವೀರೇಶ್ ಪಿ. ಬಳ್ಳಾರಿ*
ಸಿರುಗುಪ್ಪ ತಾಲೂಕು ಕೇಂದ್ರದಿಂದ 5 ಕಿಲೋ ಮಿ ದೂರದಲ್ಲಿರುವ ಹಳೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೇವಲಾಪುರ.ಸಿದ್ದಪ್ಪನಗರ ಒಳಪಟ್ಟಿದೆ ಸುಮಾರು 12ರಿಂದ್ದ 15 ಸಾವಿರ ಜನರು ವಾಸಿವಿರಬಹುದು. ಕರೋನವೆಂಬ ಮಾಹಮಾರಿ ವೈರಸ್ ಜೊತೆಗೆ ಬ್ಲಾಕ್ ಪಂಗೋಸ್ ಮತ್ತು ವೈಟ್ ಪಂಗೋಸ್ ಎಂಬ ಭಯಾನಕ ವೈರಸಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾವೆ. ಅದರೆ ವೈರಸಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿಲ್ಲ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಯಾವುದೇ ಮುಂಜಾಗ್ರತೆಯ ಕ್ರಮಕೈಗೊಳ್ಳದ ಪಿಡಿಓ ಹಾಗೂ ಗ್ರಾಮಡಳಿತ.ಕರೋನ ವೈರಸಗೆ ಗ್ರಾಮಗಳಲ್ಲಿ ಸ್ಯಾನಿಟೆಜರ ಮಾಡಿಸಬೇಕು ಎಂದು ಊರಿನ ಯುವಕರು ಪಿಡಿಓಗೆ ಮನವಿ ಮಾಡಿದ್ದಾಗ ಅದಕ್ಕೆ ಬೇಜವಾಬ್ದಾರಿ ಉತ್ತರ ಕೊಟ್ಟಿದ್ದಾರೆ. ಪಿಡಿಓ ರವರನ್ನು ಪೋನಿನ ಮೂಲಕ ಸಂಪರ್ಕ ಮಾಡಿದಾಗ ನನಗೂ ಸಹ ಬೇಜವಾಬ್ದಾರಿ ಉತ್ತರ ಕೊಟ್ಟಿದ್ದಾರೆ. ವರದಿಗಾರ.ಸರ್ ಕರೋನ ವೈರಸ್ ಬಗ್ಗೆ ನಿಮ್ಮ ಮುಂಜಾಗ್ರತಾ ಕ್ರಮ ಏನು ತೆಗೆದುಕೊಂಡಿದ್ದಿರಿ ಪಿಡಿಓ.ಲಾಕಡೌನ ಬಿಟ್ಟು ಏನು ಇಲ್ಲ ಸರ್ಕಾರದ ಆದೇಶ ಪಾಲಿಸಬೇಕು ವರದಿಗಾರ. ಸರ್ ಗ್ರಾಮಗಳಲ್ಲಿ ಸ್ಯಾನಿಟೆಜರ್ ಮಾಡಿಸಬೇಕು ಪಿಡಿಓ.ಹೋದಸಲ ಮಾಡಿಸಿದ್ದಿವಿ ಈ ಸಲ ಇಲ್ಲ ಅದಕ್ಕೆ ನಿರ್ದಿಷ್ಟವಾದ ಕೆಮಿಕಲ್ ಇಲ್ಲ ಬಿಚಿಂಗ್ ಪೋಡರ್ ಮತ್ತು ನೀರು ಕಲಿಸಿ ಸಿಂಪಡಿಸಬೇಕು ಅಷ್ಟೆ ಅದರಿಂದ್ದ ಏನು ಉಪಯೋಗವಿಲ್ಲ ಈ ಸಲ ಮಾಡಲ್ಲ ವರದಿಗಾರ.ಸ್ಯಾನಿಟೆಜರ್ ಎಲ್ಲಿ ಮಾಡಿಸಿಲ್ಲಂತ ನೀವು ಮಾಡಿಸುವುದಿಲ್ಲ ಸರ್ ಪಿಡಿಓ.ಯಾರು ಮಾಡಿಸಿಲ್ಲ ಮತ್ತು ಆದೇಶವು ಇಲ್ಲ.?ಕರೋನ ವೈರಸನಿಂದ ಗ್ರಾಮಗಳನ್ನು ಸುರಕ್ಷಿತ ಮತ್ತು ಸ್ವಚ್ಛತೆಯಿಂದ ಕಾಪಾಡಲು ಆದೇಶ ಬೇಕಾ ನಿಮಗೆ.ಇ ಓ ಸರ್ ಆದೇಶ ಬೇಕಾ ಇಲ್ಲ ಮುಖ್ಯಮಂತ್ರಿಗಳ ಆದೇಶ ಬೇಕಾ.ಇಂತಹ ಬೇಜವಾಬ್ದಾರಿ ಉತ್ತರ ಕೊಟ್ಟಿರುವುದಕ್ಕೆ ನಾಚಿಕೆಗೇಡಿನ ಸಂಗತಿ. ಹಳೇಕೋಟೆ ಗ್ರಾಮದಲ್ಲಿ 15 ರಿಂದ 20 ಪಾಸಿಟಿವ್ ಕೇಸ್ ಬಂದಿದಾವೆ.ಇನ್ನೊಂದು ಕೊಳಗಲ್ಲು ಅಗುವುದು ಬೇಡ ಏಕೆಂದರೆ ಅಲ್ಲಿ 250 ಕ್ಕೂಹೆಚ್ಚು ಪಾಸಿಟಿವ್ ಕೇಸ್ ಬಂದಿದವು 50 ಜನ ಸಾವನ್ನಪ್ಪಿದ್ದಾರೆ.ಸ್ಯಾನಿಟೆಜರ್ ಮಾಡುಸುವುದಕ್ಕೆ ಯಾರ ಮನೆಯಿಂದ ಹಣ ಕೋಡುವುದಿಲ್ಲ. 14 ಮತ್ತು15 ನೇ ಹಣಕಾಸಿನ ಮೊತ್ತ ಸಾಕಷ್ಟುದೆ ಮತ್ತು ತೆರಿಗೆ ಆದಾಯ ಸಂಪನ್ಮೂಲ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಿಂತ ಹೆಚ್ಚಿನ ಆದಾಯ ಬರುತ್ತೆ. ಈ ವರ್ಷ ಕೆರೆಯಲ್ಲಿ ಕುಡಿಯುವ ನೀರು ಇಲ್ಲದ ಪರಿಸ್ಥಿತಿ ಬಂದು ಒದಗಿದೆ.ಅಗಷ್ಟ ಅಥವಾ ಸಪ್ಟೆಂಬರನಲ್ಲಿ ಕಾಲುವೆಗೆ ನೀರು ಬರುತ್ತಾವೆ ಅಲ್ಲಿರವರಿಗೂ ಜನರ ಪರಿಸ್ಥಿತಿ ಹೇಗೆ ಎಂಬುದು ಆಲೋಚನೆ ಮಾಡಿದ್ದಿರ.ಹಿಂದಿನ ಪಿಡಿಓ ಇದ್ದಾಗ ಕುಡಿಯುವ ನೀರಿನ ಸಮಸ್ಯೆ ಇದ್ದಿಲ್ಲ. ಗ್ರಾಮದಲ್ಲಿ ಎರಡು ವಾಟರ್ ಫಿಲ್ಟರ್ ಹೆಸರಿಗೆ ಮಾತ್ರ ಇದ್ದಾವೆ ರಿಪೇರಿಯಿಂದ ಸ್ಥಗಿತಗೊಂಡು ಸುಮಾರು ವರ್ಷ ಕಳೆದರೂ ರಿಪೇರಿ ಮಾಡಿಸಿಲ್ಲ.ತಮ್ಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳೇ ಪಿಡಿಓ ಅವರ ಮಾತಿಗೆ ಕವಡೆ ಕಾಸಿನ ಬೆಲೆ ಕೊಡುವುದಿಲ್ಲ ಇಂತಹ ಅಸಮರ್ಥ ಪಿಡಿಓ ಇದ್ದಾರೆ. .ಹಳೇಕೋಟೆ ಗ್ರಾಮವನ್ನು ನಿರ್ಲಕ್ಷಿಸಿದರೆ ಇನ್ನೂ ದೇವಲಾಪುರ. ಸಿದ್ದಪ್ಪನಗರಗಳ ಗತಿ ಏನೆಂಬ ಪ್ರಶ್ನೆ ಕಾಡುತ್ತದೆ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿಲ್ಲಿ ಎಂಬುವುದು ಜನರ ಅಪೇಕ್ಷೆ.ಅಡಳಿತದಲ್ಲಿ ಚುರುಕುತನವಿಲ್ಲ ಬೇಜವಾಬ್ದಾರಿ ಉತ್ತರ ಕೊಟ್ಟು ಜಾರಿಕೊಳ್ಳುವುದನ್ನು ಬಿಟ್ಟು ಇನ್ನೂ ಮುಂದೆ ಗ್ರಾಮಗಳ ಸ್ವಚ್ಛತೆ ಬಗ್ಗೆ ಗಮನಹರಿಸಿ ಉತ್ತಮ ಅಡಳಿತ ನೀಡಲ್ಲಿ ಎಂಬುದು ನಮ್ಮ ಅಶಯ.ಪಂಚಾಯಿತಿಯಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿ ಸಿಬ್ಬಂದಿಗಳು ಇದ್ದಾರೆ ಅದರ ಬಗ್ಗೆ ಸ್ವಲ್ಪ ಗಮನಕೋಡಿ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
