ಚಿತ್ರದುರ್ಗ: ಮೊಳಕಾಲ್ಮೂರು / ಭಾರತೀಯ ಜನತಾ ಪಾರ್ಟಿ ತಾಲ್ಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷೆರು ವಿ ಸಿದ್ದಾರ್ಥ ಅವರು ಇಂದು ತಾಲೂಕು ಕಚೇರಿಯ ಉಪ ತಾಸಿಲ್ದಾರ್ ಏಳುಕೋಟೆ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು. ಚಿಕ್ಕಮಂಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ PSI ಅರ್ಜುನ ರವರು ಕಿರಗುಂದ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಪುನೀತ್ ಎಂಬುವನನ್ನು ಕ್ಷುಲ್ಲಕ ಪ್ರಕರಣದಲ್ಲಿ ಅಕ್ರಮವಾಗಿ ಬಂಧಿಸಿದ್ದು ಅಲ್ಲದೇ ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿರುತ್ತಾರೆ.

ಮೂತ್ರ ಮಾಡಿದ ವ್ಯಕ್ತಿ ಚೇತನ್ ಎಂಬಾತನನ್ನು ಹಣ ಮತ್ತು ಇನ್ನಿತರ ಆಮಿಷಗಳನ್ನೂ ತೋರಿಸಿ ಮತ್ತು ಬೆದರಿಸಿ ಆತನನ್ನು ಬಚ್ಚಿಡಲಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಆದ್ದರಿಂದ ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರುವವರೆಗೂ ಆಪಾದಿತ PSI ಅರ್ಜುನ್‌ರವರನ್ನು ಅಮಾನತು ಮಾಡುವುದೇ ಸರಿಯಾದ ಕ್ರಮವಾಗಿರುತ್ತದೆ. ಈಗಾಗಲೇ ದಲಿತ ಸಂಘಟನೆಗಳು ಮತ್ತು ಮುಖಂಡರುಗಳು ಕೋವಿಡ್ ಕಾರಣದಿಂದ ಸರ್ಕಾರದ ನಿಯಮಗಳನ್ನು ಪಾಲಿಸುವ ಕಾರಣ ಯಾರೂ ರಸ್ತೆಗೆ ಇಳಿಯದೆ ಬದಲಾಗಿ ರಾಜ್ಯಾಧ್ಯಂತ ಆಂದೋಲನ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪ್ರಾದೇಶಿಕ ಪತ್ರಿಕೆಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಈ ವಿಷಯವನ್ನು ರಾಜ್ಯ ಸರ್ಕಾರ ಮತ್ತು ಗೃಹ ಸಚಿವರಾದ ಶ್ರೀ ಬಸವರಾಜು ಬೊಮ್ಮಾಯಿಯವರ ಗಮನಕ್ಕೂ ತರಲಾಗಿದೆ. ಈ ಅನಿರೀಕ್ಷಿತ ಘಟನೆಯಿಂದ ಬಹಳ ಮಾನಸಿಕ ಆಘಾತಕ್ಕೆ ಒಳಗಾದ ದಲಿತ ಸಮುದಾಯ ಬೀದಿಗಿಳಿದು ಹೋರಾಟ ಮಾಡುವ ಮೊದಲೇ ತಮ್ಮ ಇಲಾಖೆಯು ಎಚ್ಚೆತ್ತುಕೊಂಡು ಇಂಥಹ ಘಟನೆಗಳಿಂದ ಸಮಾಜದಲ್ಲಿ ದುಷ್ಪರಿಣಾಮಗಳಾಗುವುದನ್ನು ತಡೆಯಲು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನಿಷ್ಪಕ್ಷಪಾತವಾಗಿ ತನಿಖೆಮಾಡಿ ಸೂಕ್ತ ಕ್ರಮಗಳು ತೆಗೆದುಕೊಂಡು ಪರಿಹಾರಗಳನ್ನು ನೀಡುವ ಮೂಲಕ ನ್ಯಾಯ ಒದಗಿಸಬೇಕೆಂದು ಬಿಜೆಪಿ ಎಸ್‌ಸಿ ಮೋರ್ಚಾ ಮೊಳಕಾಲ್ಲೂರು ಮಂಡಲ ಒತ್ತಾಯಿಸುತ್ತದೆ.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
