ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ .ದಿನಾಂಕ 24/4/21 ಶನಿವಾರ ಎರಡನೇ ಅಲೆಯ ಹಿನ್ನೆಲೆಯಲ್ಲಿ ಶನಿವಾರ ದಿನವಾದ ಇಂದು ಸರ್ಕಾರದ ಆದೇಶದ ಮೇರೆಗೆ ಲಾಕ್ಡೌನ್ ಮಾಡಲಾಗಿದೆ .ನಗರದಲ್ಲಿ ಇರುವ ಅಂಗಡಿಗಳು ಹೋಟೆಲ್ ಗಳು ಮುಚ್ಚಿದ್ದವು ಆದರೆ ಸಾರ್ವಜನಿಕರು ಅನಾವಶ್ಯಕವಾಗಿ ಅಡ್ಡಾಡುತ್ತಿರುವವರನ್ನು ಅಲ್ಲಿನ ಪೊಲೀಸ್ ಸಿಬ್ಬಂದಿಗಳು ತಡೆದು ನಿಲ್ಲಿಸಿ ಧoಡ ಹಾಕುತ್ತಿರುವ ದೃಶ್ಯ ಕಂಡುಬಂದಿತು .
ಪೊಲೀಸರು ಇನ್ನೊಮ್ಮೆ ಹೊರ ಬಾರದಂತೆ ಎಚ್ಚರಿಕೆ ಸಂದೇಶವನ್ನು ನೀಡಿದರು ಸಹ ಕೆಲ ಸಾರ್ವಜನಿಕರೂ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ತಮ್ಮ ಒಂದು ವರ್ತನೆಯನ್ನು ಮಾಡುತ್ತಿರುವುದನ್ನು ನೋಡಿದರೆ ಪೊಲೀಸ್ ಸಿಬ್ಬಂದಿಗಳು ಬಿಸಿಲು ಮಳೆ ಗಾಳಿ ಎನ್ನದೆ ಸಮಾಜವನ್ನು. ಕಾಯುವ ಕೆಲಸವನ್ನು ಮಾಡುತ್ತಿರುವ . ಪೊಲೀಸ್ ಇಲಾಖೆಯ ನಿಷ್ಠಾವಂತ ಅಧಿಕಾರಿಗಳಿಗೆ ನಮ್ಮ ಎಚ್ಚರಿಕೆ ಪತ್ರಿಕೆಯ ಕಡೆಯಿಂದ ಸಲಾ೦, ಹಾಗೂ ಈ ಒಂದು ಸಂದರ್ಭದಲ್ಲಿ ತಾಲೂಕಿನ ಠಾಣೆಯ ಡ್ಯೂಟಿಯಲ್ಲಿ ನಿರತರಾಗಿದ್ದ ವಾಸಪ್ಪ ಹಾಗೂ ಚೇತನ್ ಸಹಇದ್ದರು…
ವರದಿ. ಧನಂಜಯ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
