;

ವೈಭವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೋವಿಡ್ 19 ನಿಯಂತ್ರಣ ಅನುಸರಿಸಬೇಕಾದ ಮುಂಜಾಗ್ರತೆ ಕಾರ್ಯಗಳ ಜಾಗೃತಿ ಸಭೆ ಜರುಗಿತು…!!!

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ*
*ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ವೈಭವ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಕಾನ ಹೊಸಹಳ್ಳಿ* *ಹೋಬಳಿ ಮಟ್ಟದ ಕೋವಿಡ್ 19 ನಿಯಂತ್ರಣ ಅನುಸರಿಸಬೇಕಾದ ಮುಂಜಾಗ್ರತೆ ಕಾರ್ಯಗಳ ಜಾಗೃತಿ ಸಭೆ ಜರುಗಿತು* ಕೂಡ್ಲಿಗಿ ಕ್ಷೇತ್ರದ ಜನಕ್ಕಾಗಿ ನಾನು ಅವರ ಆರೋಗ್ಯವೇ ನನ್ನ ಮುಖ್ಯ ಧ್ಯೇಯ ಎಂದು ಶಾಸಕ ಎನ್.ವೈ ಗೋಪಾಲಕೃಷ್ಣ ಹೇಳಿದರು.
ತಾಲೂಕಿನ ವೈಭವ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಹೊಸಹಳ್ಳಿ ಮಟ್ಟದ ಕೋವಿಡ್-೧೯ ನಿಯಂತ್ರಣ ಅನುಸರಿಸಬೇಕಾದ ಮುಂಜಾಗ್ರತಾ ಕಾರ್ಯಕ್ರಮಗಳ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕೊರೊನಾ ೨ನೇ ಅಲೆಯ ದೇಶದಲ್ಲಿ ಆರ್ಭಟ ಹೆಚ್ಚಾಗಿದ್ದು,ವ್ಯಕ್ತಿಗಳು ತಮ್ಮನ್ನು ತಾವೇ ವ್ಯಕ್ತಿಗತವಾಗಿ ಜವ್ದಾಬಾರಿ ಅರಿತು ಮುನ್ನಡೆಯಬೇಕಾಗಿದೆ. ಈ ಹಿಂದೆ ಕೊರೊನಾ ಸಾಂಕ್ರಮಿಕ ರೋಗಗಳಿಂದ ಸಾಕಷ್ಟು ಜನ ಸಾವಿನದವಡೆಗೆ ತುತ್ತಾದ್ದರು.ಆದರೆ ಘಟನೆಗಳು ಮರುಗಳಿಸದಂತೆ ಮಾಧ್ಯಮಗಳು, ಪತ್ರಿಕೆಗಳು ಕೊರೊನಾ ೨ ನೇ ಅಲೆಯ ಹರಡುವುಕೆಯನ್ನು ಜನರಿಗೆ ಬಿತ್ತಿರಿಸುತ್ತಾ ಮುಂಜಾಗ್ರತೆವಹಿಸಿಕೊಳ್ಳಿ ಎಂದು ತಿಳಿಸುತ್ತಿದ್ದಾರೆ ಅವರ ಕಾರ್ಯ ಮಹತ್ವವಾದದು ಎಂದು ಸ್ಮರಿಸಿದರು.
ಕೊವಿಡ್-೧೯ ಸಲುವಾಗಿ ಸರ್ಕಾರದಿಂದ ಕೋವಿಶೀಲ್ಡ ಮತ್ತು ಕೋವಿವ್ಯಾಕ್ಸಿನ್ ಈಗಾಗಲೇ ಲಸಿಕೆಗಳು ಜನರಿಗೆ ಹಾಕುತ್ತಿದ್ದಾರೆ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಬೀರುವುದಿಲ್ಲ,ಇಂದು ಶಾಸಕನಾಗಿ ಹೇಳುವ ಮಾತಲ್ಲ,ಸಾಮಾಜಿಕ ಕಾಳಜಿ ಮತ್ತುಕಾರ್ಯಕರ್ತನಾಗಿ ಸ್ವಯಂ ಪ್ರೇರಣೆಯಿಂದ ಲಸಿಕೆಯನ್ನು ಇತ್ತೀಚ್ಚಿಗೆ ೫೦೦ ಮಂದಿಗೂ ಹೆಚ್ಚು ಜನರಿಗೆ ಹಾಕಿಸಿದ್ದೇನೆ ಆ ಕಾಳಜಿ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ಎಲ್ಲರೂ ಆರೋಗ್ಯದಿಂದ ಇರಲು ಸಾಧ್ಯ ಎಂದರು.
ಹಿಂದೆ ಪ್ಲೇಗ್ ರೋಗ ಕಾಣಿಸಿಕೊಂಡಿತ್ತು, ಇಂದು ಕೊರೊನಾ ಮಾಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದ್ದು,ಜನರ ಜೀವನ ದುಸ್ತಿರವಾಗುತ್ತಿದೆ ಆದ ಕಾರಣ ಜನರು ಸಾಂಕ್ರಮಿಕ ರೋಗಕ್ಕೆ ತುತ್ತಾಗಾದೆ ಸರ್ಕಾರ ಮಾರ್ಗಸೂಚಿಗಳನ್ನು ಅನುಸರಿಸಿ ಎಂಧರು.
ತಾಲೂಕಿನಲ್ಲಿ ಬೇಸಿಗೆ ಧಗೆಯಿಂದ ನೀರಿನ ಅಭಾವ ಹೆಚ್ಚಾಗುತ್ತಿದೆ ಅಧಿಕಾರಿ ವರ್ಗವರು ಯಾವ ಭಾಗದ ಹಳ್ಳಿಯಲ್ಲಿ ಸಮಸ್ಯೆಯಿದೆ ಕೂಡಲೇ ಬಗೆಹರಿಸಿ ಈ ತಾಲೂಕಿನಲ್ಲಿ ೨೬ ಗ್ರಾ.ಪಂ ಇದ್ದು ೧೧ ಪಿಡಿಓ ಕಾರ್ಯನಿರ್ವಹಿಸುತ್ತಿದ್ದಾರೆ ಜನರ ಸಹಕಾರ ಬಹಳ ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರಾದ ಎಸ್.ಮಹಾಬಲೇಶ್ವರ,ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ ನಿಂಗಪ್ಪ,ಇಒ ಬಸಣ್ಣ,ಟಿಹೆಚ್ ಒ ಷಣ್ಮುಖನಾಯ್ಕ, ಬಿಡಿಸಿಸಿ ಉಪಾಧ್ಯಕ್ಷರಾದ ಗುಂಡುಮುಣುಗು ತಿಪ್ಪೆಸ್ವಾಮಿ, ಜಿಪಂ ಅಸದಸ್ಯ ರೇವಣ್ಣ,ಪ್ರಕಾಶ,ತಾಪಂ sಸದಸ್ಯ ಪಾಪಾನಾಯಕ ಹುಡೇಂ,ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಬೋಮಣ್ಣ, ತಾಲೂಕು ಮಟ್ಟದ ಅಧಿಕಾರಿವರ್ಗ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;