
ಕನ್ನಡಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಬಹಿಷ್ಕರಿ ಸದಿರಲು ತೀರ್ಮಾ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ದಿನಾಂಕ 20-4-20 21ರಂದು ಕೆಲವು ಪತ್ರಿಕೆಗಳಲ್ಲಿ ವರದಿಯಾದ ಅನ್ವಯ ಇತ್ತೀಚಿಗೆ ಕೂಡ್ಲಿಗಿ ಪಟ್ಟಣದಲ್ಲಿ ಸಭೆಸೇರಿ ಕೆಲವು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸದಸ್ಯರು ದಿನಾಂಕ 9- 5 -2021 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತದಾನ ಮಾಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತದಾನ ಬಹಿಷ್ಕರಿಸಲು ನಿರ್ಣಯದ ಹಿನ್ನೆಲೆಯಲ್ಲಿ ಮತದಾನದ ಪ್ರತಿಯೊಬ್ಬ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ವೈಯಕ್ತಿಕ ಅಭಿಪ್ರಾಯವಾಗಿದೆ ಕೂಡ್ಲಿಗಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಸದಸ್ಯರ ತೆಗೆದುಕೊಂಡಿ ನಿರ್ಣಯ ವಾಗಿರುವುದಿಲ್ಲ. ವಿಜಯನಗರ ನೂತನ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನದ ಅವಕಾಶ ದೊರಕದಿರುವುದು ಜಿಲ್ಲೆಯ ಎಲ್ಲಾ ಕನ್ನಡಸಾಹಿತ್ಯಪರಿಷತ್ತಿನ ಸದಸ್ಯರಿಗೂ ಬೇಸರವಾಗಿದೆ.ಈ ವಿಷಯ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಚುನಾವಣಾ ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯ ರಾಜ್ಯಾಧ್ಯಕ್ಷರ ಆಡಳಿತಾತ್ಮಕ ವಿಷಯವಾಗಿದ್ದು ಹಾಗೂ ಮುಂದಿನ ಆದೇಶಕ್ಕಾಗಿ ಕಾಯದೆ ವಿಧಿಯಿಲ್ಲ. ಹಾಗೆಯೇ ಸ್ವತಂತ್ರ ಪೂರ್ವದಿಂದಲೂ ಬಳ್ಳಾರಿ ಜಿಲ್ಲೆಯೊಂದಿಗೆ ನ ಸುಮಧುರ ಸಂಬಂಧವನ್ನು ಮರೆಯುವುದು ಉಚಿತವಲ್ಲ.
ಈ ಎಲ್ಲಾ ಕಾರಣಗಳಿಂದ ತಾಲೂಕಿನ ಹಲವು ಸಾಹಿತಿಗಳು ಕನ್ನಡಾಭಿಮಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರುಗಳಾದ ಡಾ. ವೃಷಭೇಂದ್ರಾಚಾರ್, ಡಾ. ಕರಿಬಸಪ್ಪ. ಡಾ. ತಿಪ್ಪೇಸ್ವಾಮಿ. ಡಾ. ಲೋಕ ರಾಜ್ ದೊಡ್ಡಮನಿ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಾಜಿ ಅಧ್ಯಕ್ಷ ಎನ್ ಎಂ ರವಿಕುಮಾರ್.ಕೆಜಿ ಕುಮಾರ ಗೌಡ. ಹಿರಿಯ ಪತ್ರಕರ್ತರಾದ ಹುಡೇಂ ಕೃಷ್ಣಮೂರ್ತಿ. ಕೆ ಕರಿ ಬಸಣ್ಣ. ಶಾಮಸುಂದರ ಸಫಾರಿ. ಎಂ ಎಸ್ ತಿಪ್ಪೇಸ್ವಾಮಿ. ವೀರೇಶ್ ಕಿಟ್ಟಪ್ಪ ನವರ. ರಾಮಣ್ಣ ಸಫಾರಿ. ಹೆಚ್ ವಿ ಧನಂಜಯ. ಹೆಚ್ ಜಿ ಪ್ರಕಾಶ. ಹೆಚ್ ಜಿ ಆಂಜನೇಯ ನಿವೃತ್ತ ಶಿಕ್ಷಕರು. ಮುಂತಾದವರೆಲ್ಲಾ ಸೇರಿ ಒಮ್ಮತದ ಅಭಿಪ್ರಾಯದೊಂದಿಗೆ ದಿನಾಂಕ 9 -5- 2021 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಭಾಗವಹಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಮಗೆ ಇಷ್ಟವಾದ ಅಭ್ಯರ್ಥಿಗೆ ಮತ ಹಾಕುವ ಮೂಲಕ ತಮ್ಮ ಅಮೂಲ್ಯ ಮತದಾನ ಮಾಡಬೇಕೆಂದು ನಿರ್ಣಯಿಸಲಾಯಿತು.
ಎನ್ಎಮ್ ರವಿಕುಮಾರ ಸಾಹಿತಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ. ಕೆ. ಎಸ್. ವಿರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
