;

ಮೊಳಕಾಲ್ಮೂರು: ದೇಶದ ದಲಿತರ ಪರಧ್ವನಿ ಎತ್ತಿದ ಮಹಾನಾಯಕ ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆ.!!

ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ 130 ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ನಮನ ಸಲ್ಲಿಸಿ ಮಾತನಾಡಿದರು. ಅಸ್ಪೃಶ್ಯತೆ ವಿರುದ್ದ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಹಾಗೂ ಹತ್ತು ಹಲವು ಸೌಲಭ್ಯಕ್ಕಾಗಿ ದೇಶದ ದಲಿತರ ಪರಧ್ವನಿ ಎತ್ತಿದ ಮಹನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್‌ ಅವರು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ ತಿಳಿಸಿದರು. ಅಂಬೇಡ್ಕರ್ ರವರು ಸ್ವತಃ ಅನೇಕ ಬಾರಿ ಶೋಷಣೆಗೆ ಒಳಗಾದರೂ ಸಾಧನೆ ಮಾಡಬೇಕೆಂಬ ಛಲಬಿಡದೆ ಮುಂದುವರಿದವರು. ಆನಿಟ್ಟಿನಲ್ಲಿ ಯಶಸ್ಸು ಸಾಧಿಸಿದರು ಇಂದು ಅನೇಕ ಅಬಿವೃದ್ಧಿ ಹೊಂದಿದ ದೇಶಗಳು ಅಂಬೇಡ್ಕರ್ ರವರ ತತ್ವ ಸಿದ್ದಾಂತ ಜ್ಞಾನವನ್ನು ಅನುಸರಿಸುತ್ತಿವೆ. ಪ್ರತಿಯೊಬ್ಬರು ಅಂಬೇಡ್ಕರ್ ರವರ ತತ್ವ ಆದರ್ಶ ವನ್ನು ಪಾಲಿಸಬೇಕು . ಈ ಬಾರಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಮಂಡಲದಲ್ಲಿ ಬಿಜೆಪಿ ಎಲ್ಲಾ ಮೋರ್ಚಾಗಳ ವತಿಯಿಂದ ಸೇವ ಸಪ್ತಾಹ ಕಾರ್ಯಕ್ರಮದಲ್ಲಿ ಸ್ವಚ್ಚತಾ ಕಾರ್ಯಕ್ರಮ, ಸಸಿನೆಡುವ ಕಾರ್ಯಕ್ರಮ, ಪುಷ್ಪ ದೀಪಾಲಂಕಾರ ಕಾರ್ಯಕ್ರಮ, ಬೂಮಿ ಸುಪೋಷಣಾ ಅಭಿಯಾನ, ಹಾಗೂ ದೇಶದ ಹೆಮ್ಮೆಯ ನಿವೃತ್ತ ಯೋಧರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು ಎಂದು ತಿಳಿಸಿದರು. ಶಮಹಿಳಾ ಮೋರ್ಚಾ ಅಧ್ಯಕ್ಷೆ ಸರ್ವಮಂಗಳ ಮಾತನಾಡಿ ಭಾರತರತ್ನ, ಸಂವಿಧಾನ ಶಿಲ್ಪಿ ಭೀಮರಾವ್ ಅಂಬೇಡ್ಕರ್ ರವರು 1891 ಎಪ್ರೀಲ್ 14 ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬೇವಾಡಿ ಗ್ರಾಮದ ರಾಮಜಿ ಸಕ್ವಾಲ್ ಹಾಗೂ ಭೀಮಬಾಯಿ ದಂಪತಿಯ ಮಗನಾಗಿ ಜನಸಿ ಚಿಕ್ಕ ವಯಸ್ಸಿನಿಂದಲೇ ಸಮಾಜ ಪರಿವರ್ತನೆಗಾಗಿ ಹೋರಟಾ ನಡೆಸಿದಂತವರು, ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ಸಮಾನತೆ ಸಿಗಲಿದೆ ಎಂದು ತಿಳಿಸಿದಂತವರು. ಅಂಬೇಡ್ಕರ್ ರವರು ಮೊದಲ ಬಾರಿಗೆ ದೇಶಕ್ಕೆ ಡಾಕ್ಟರೇಟ್ ಪದವಿ ತಂದುಕೊಟ್ಟವರು ಅವರು ನೆಹರೂ ಸರ್ಕಾರದ ಆಡಳಿತ ಅವದಿಯಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದವರು ಭಾರತ ಸಂವಿಧಾನದಲ್ಲಿ ರಚಿಸಿರುವ ಮೂಲಭೂತ ಹಕ್ಕುಗಳಾದ ಸಮಾನತೆಯನ್ನು, ಸ್ವಾತಂತ್ರ್ಯಹಕ್ಕು, ಶೋಷಣೆವಿರುದ್ದಹಕ್ಕು ರಾಜಕೀಯ ಹಕ್ಕು , ಧಾರ್ಮಿಕ ಹಕ್ಕು ಶೈಕ್ಷಣಿಕ ಹಕ್ಕುಗಳನ್ನು ಭಾರತ ದೇಶದ ಪ್ರಜೆಗಳಾದ ನಾವುಗಳು ಗೌರವಿಸಬೇಕು ಹಾಗೂ ಪಾಲಿಸಬೇಕು ಅಂಬೇಡ್ಕರ್ ಅವರು ಆಕಾಶದ ಅಗಲಕ್ಕೂ ನಿಂತ ಆಲದ ಮರದಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಿ.ಎಂ.ಈಶ್ವರಪ್ಪ, ಪ.ಪಂ.ಅಧ್ಯಕ್ಷ ಪಿ.ಲಕ್ಷ್ಮಣ,ಪ.ಪಂ.ಉಪಾಧ್ಯಕ್ಷೆ ಶುಭ ಪೃಥ್ವಿರಾಜ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಸಿದ್ದಾರ್ಥ, ನೇಕಾರಪ್ರಕೋಷ್ಟಕ ಜಿಲ್ಲಾ ಸಂಚಾಲಕ ಶಾಂತರಾಮ್ ಬಸಾಪತಿ, ನಗರಘಟಕ ಅಧ್ಯಕ್ಷ ಕಿರಣ್ ಗಾಯಕವಾಡ್, ಪ್ರಧಾನಕಾರ್ಯದರ್ಶಿ ಎನ್.ಪಿ.ಪ್ರಭಾಕರ್, ಯುವಮೋರ್ಚಾ ಅಧ್ಯಕ್ಷ ಹರೀಶ್, ಪ.ಪಂ.ಸದಸ್ಯರಾದ ರೂಪ ವಿನಯ್, ಭಾಗ್ಯಮ್ಮ, ಲೀಲಾವತಿ, ಲಕ್ಷ್ಮದೇವಿ, ಮಂಜಣ್ಣ, ತಿಪ್ಪೇಸ್ವಾಮಿ, ಪ.ಪಂ.ನಾಮನಿರ್ದೇಶನ ಸದಸ್ಯ ಕೆ. ತಿಪ್ಪೇಸ್ವಾಮಿ, ಮಹಿಳಾ ಮೊರ್ಚಾಜಿಲ್ಲಾ ಉಪಾಧ್ಯಕ್ಷೆ ಈರಮ್ಮ, ಕೆ.ಆರ್.ವಿಧ್ಯಾ, ರೇಣುಕಾ, ಸ್ನೇಹ. ವನಿತಾ, ಶೋಭಾ, ಕಲ್ಯಾಣಿ ಮುಂತಾದವರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;