ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ನಾಯಕನಟ್ಟಿ/ ಪಟ್ಟಣದ ತೊರೆ ಕೋಲಮ್ಮನಹಳ್ಳಿ ಗ್ರಾಮದಲ್ಲಿ ಡಾ ಬಿ.ಆರ್ ಅಂಬೇಡ್ಕರ್ ರವರ 130ನೇ ಜಯಂತಿ ಸ್ಮರಣೆ ಉದ್ದೇಶದಿಂದ ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ (ದಂಡದಿಕಾರಿ) ಎಂ.ಮಲ್ಲಿಕಾರ್ಜುನ್ ಅವರು ಮಾತನಾಡಿ, ಅಂಬೇಡ್ಕರ್ ರವರ ಭಾವಚಿತ್ರ ಅನಾವರಣ ಸಮಾರಂಭ, ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಇಂದು ನಾಡಿನೆಲ್ಲೆಡೆ 130ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಸರಳವಾಗಿ ನಡೆಯುತ್ತಿದೆ. ಎಲ್ಲೆಡೆ ಕೊರೋನಾ ಭಯ ಹರಡಿದ್ದು, ಯಾವುದೇ ಉತ್ಸವವನ್ನೂ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಇಂದು ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚಿದ ಸಂವಿಧಾನ ನೀಡಿದ ಹಿನ್ನೆಲೆಯಲ್ಲಿ ಎಲ್ಲ ನಿಯಮಗಳನ್ನು ಸಡಿಲಿಸಿ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ನಿಯಮಗಳನ್ನು ನಾವೆಲ್ಲರೂ ಪಾಲಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಧರಿಸಿ ಓಡಾಟ ನಡೆಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ತತ್ವ ಸಿದ್ದಾಂತಗಳು ಎಲ್ಲರಿಗೂ ಪ್ರೇರಕ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಾರಕ್ಕ – ಚೌಡಪ್ಪ, ಸುಮಿತ್ರಮ್ಮ- ಕೆ.ಎಂ ತಿಪ್ಪೇಸ್ವಾಮಿ, ಗಾದ್ರಪ್ಪ, ಬೆಂ ತಿಪ್ಪೇಸ್ವಾಮಿ, ಜಿ ಹನುಮಂತಪ್ಪ, ಕೆ ಹನುಮಪ್ಪ, ಜೆಸಿಬಿ ತಿಪ್ಪೇಸ್ವಾಮಿ, ಅಶೋಕ್ ಟಿ, ಕುಮಾರ್ ಎಚ್, ರಾಘವೇಂದ್ರ ಕೆ, ರಮೇಶ್ ಟಿ, ವೀರೇಶ್, ಸೋಮಶೇಖರ್ ವೈ, ನಾಗರಾಜ್ ಬಿ, ಬಸಪ್ಪ, ತಿಮ್ಮಶೆಟ್ಟಿ, ಮಾರಪ್ಪ, ಶಿವಣ್ಣ, ತಿಪ್ಪಣ್ಣ, ಮಾದಿಗ ದಂಡೋರ ಯುವಕರ ಸೇನೆ, ಊರಿನ ಗ್ರಾಮಸ್ಥರು ಉಪಸ್ಥಿತರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
