;

ಡಾ ಬಿ.ಆರ್.ಅಂಬೇಡ್ಕರ್‌ ರವರು ವಿಶ್ವ ಮಹಾ ನಾಯಕ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಡಾ ಬಿ.ಆರ್.ಅಂಬೇಡ್ಕರ್‌ ರವರು ವಿಶ್ವ ಮಹಾ ನಾಯಕ-ಡಿವೈಎಸ್ಪಿ ಹರೀಶ್* -ವಿಜಯನಗರ ಜಿಲ್ಲೆ ಕೂಡ್ಲಿಗಿ,ಡಾ ಬಿ.ಆರ್.ಅಂಬೇಡ್ಕರ್‌ ರವರು ವಿಶ್ವ ಮಹಾನಾಯಕರಾಗಿದ್ದಾರೆ,ಅವರು ಯಾವೊಂದು ಸಮುದಾಯ ಸಮಾಜಕ್ಕೆ ಸೀಮಿತವಲ್ಲ ಎಂದು ಡಿವೈಎಸ್ಪಿ ಜಿ.ಹರಿಶರವರು ನುಡಿದರು.ಅವರು ತಮ್ಮ ಡಾ.ಬಿ.ಆರ್.ಅಂಬೇಡ್ಕರ್‌ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸೋ ಮೂಲಕ,ಕಚೇರಿಯಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಜಯಂತಿಯನ್ನಾಚರಿಸಿ ಮಾತನಾಡಿದರು,ಪ್ರಜಾಪ್ರಭುತ್ವದ ಮೂಲ ಪುರುಷರಾಗಿದ್ದಾರೆ ಅವರು ರಚಿಸಿದ ಸಂವಿಧಾನ ಆಡಳಿತ ವ್ಯವಸ್ಥೆಯ ಮೂಲ ಆಧಾರವಾಗಿದೆ.ರಾಷ್ಟ್ರದ ಆಡಳಿತಾತ್ಮಕ ವ್ಯವಸ್ಥೆಯು ಅಂಬೇಡ್ಕರವರು ಹಾಕಿಕೊಟ್ಟ ಸಂವಿಧಾನದ ಕೊಡುಗೆಯಾಗಿದೆ, ಅವರಿಲ್ಲದಿದ್ದರೆ ತಾವೂ ಡಿವೈಎಸ್ಪಿ ಯಾಗುತ್ತಿರಲಿಲ್ಲವೇನೋ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಭಾರತ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದ್ದು ಈ ಮೂಲಕ ಡಾ ಬಿ.ಆರ್.ಅಂಬೇಡ್ಕರ್ ವಿಶ್ವ ಮಹಾನಾಯಕರಾಗಿದ್ದಾರೆ. ರಾಷ್ಟ್ರವನ್ನ ವಿಶ್ವಕ್ಕೆ ಪರಿಚಯಿಸಿಕೊಟ್ಟ ಮಹಾ ಮಾನವರಲ್ಲಿ ಇವರು ಪ್ರಮುಖರಾಗಿದ್ದಾರೆ,ಅವರ ಜೀವನದ ಚರಿತ್ರೆಯನ್ನ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಹಾಗೂ ವಿಚಾರಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಸಿಪಿಐ ವಸಂತ ಅಸೋದೆ ಉಪಸ್ಥಿತರಿದ್ದರು,ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಕಚೇರಿಯ ಸಿಬ್ಬಂದಿಯವರು ಹಾಜರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;