ವರದಿ. ಮಂಜುನಾಥ್. ಎಚ್

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯಲ್ಲಿ ಇಂದು ಏಪ್ರಿಲ್ 5 2021 ಇಂದು ಹಸಿರು ಕ್ರಾಂತಿ ಹರಿಕಾರ, ಕಾರ್ಮಿಕ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 114ನೇ ಜಯಂತಿ ಆಚರಣೆ ಮಾಡಲಾಯಿತು. ಕೋವಿಡ್ 2ನೇ ಅಲೆ ಹೆಚ್ಚಾಗಿರುವುದರಿಂದ ಸರಳವಾಗಿ ಆಚರಿಸಲಾಯಿತು. ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡು ಅವರ ಸಾಧನೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮಾಂತೇಶ್ವರ ಸ್ವಾಮಿ, ಕಾರ್ಯದರ್ಶಿ ಚಂದ್ರಣ್ಣ, ಸದಸ್ಯರುಗಳಾದ ಬಿ ರಾಮಚಂದ್ರಪ್ಪ ಹೂಡೇಂ, ಸುಂದರಮ್ಮ ಮಲ್ಲಿಕಾರ್ಜುನ್, ನಾಗಮ್ಮ ಗದ್ದಿಗ ಸ್ವಾಮಿ, ತಿಪ್ಪೇರುದ್ರಪ್ಪ ಬಿಲ್ ಕಲೆಕ್ಟರ್, ಗ್ರಾ.ಪಂ ಮಾಜಿ ಸದಸ್ಯರು ರವಿ, ಸಿದ್ದೇಶ್, ಗುರುರಾಜ್ ಗ್ರಂಥಾಲಯ ಮೇಲ್ವಿಚಾರಕರು, ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
