;

ಪ್ರಗತಿ ಪರಿಶೀಲನಾ ಸಭೆ,ಪಟ್ಟಣದ ಪ್ರವಾಸಿ ಮಂದಿರದಲ್ಲಿ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ದಿನಾಂಕ 04:04. 2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು*

*ಪ್ರಗತಿ ಪರಿಶೀಲನಾ ಸಭೆ*
*ಪಟ್ಟಣದ ಪ್ರವಾಸಿ ಮಂದಿರದಲ್ಲಿ* *NY ಗೋಪಾಲಕೃಷ್ಣ* *ಇವರ ಅಧ್ಯಕ್ಷತೆಯಲ್ಲಿ ತಾಲೂಕು* *ಮಟ್ಟದ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು* ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಅವರು ಮಾತನಾಡಿ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದ್ದು ಜನರನ್ನು ತುಂಬಾ ಸಂಕಷ್ಟಕ್ಕೆ ತರುವ ಸಾಧ್ಯತೆ ಇದೆ ಆದುದರಿಂದ ಸಾರ್ವಜನಿಕರು ಜನರು ಪ್ರತಿಯೊಬ್ಬ ನಾಗರಿಕರು ಜಾಗೃತರಾಗಬೇಕು. ಸರಕಾರ ರೂಪಿಸಿರುವ ವಿವಿಧ ಯೋಜನೆಗಳ ನಿಯಮಗಳನ್ನು ಪಾಲಿಸಬೇಕು. ಕಾರಣ ಕಳೆದ ವರ್ಷ ಈ ವಿಚಾರವಾಗಿ ನಾವು ಬಹಳ ಸಂಕಷ್ಟ ಎದುರಿಸಿದ್ದೇವೆ. ಈಗ ಹಾಕುತ್ತಿರುವ ವ್ಯಾಕ್ಸಿನ್ ಲಸಿಕೆಯನ್ನು ಪ್ರತಿಯೊಬ್ಬರು ತಪ್ಪದೇ ಹಾಕಿಸಿಕೊಳ್ಳಿ ಎಂದು ಸಭೆಗೆ ಆಗಮಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಗೂ ಸಾರ್ವಜನಿಕರಿಗೂ ಪತ್ರಕರ್ತರಿಗೂ ಹೇಳಿದರು ನಂತರ ಬಂದ ಅಧಿಕಾರಿಗಳನ್ನು ವ್ಯಾಕ್ಸಿನ್ ಚುಚ್ಚುಮದ್ದನ್ನು ಎಷ್ಟು ಜನ ಅಧಿಕಾರಿಗಳು ಹಾಕಿಸಿ ಕೊಂಡಿದ್ದೀರಿ ಎನ್ನುವುದು ಕೈ ಎತ್ತುವುದರ ಮೂಲಕ ಸಾಬೀತು ಪಡಿಸಿ ಹೇಳಿದರು ಹಾಗೂ ಬೇಸಿಗೆ ಕಾಲವಾದ್ದರಿಂದ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿ ವಿವಿಧ ಯೋಜನೆಗಳ ಬಗ್ಗೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳನ್ನು ಪರಿಶೀಲನೆ ಮಾಡಿದರು. ತಾಲೂಕಿನ ಗೊಲ್ಲರಹಟ್ಟಿಗಳಲ್ಲಿ ನ ವಸತಿರಹಿತರಿಗೆ ವಸತಿ ಕಲ್ಪಿಸಿಕೊಡಲು ಸರ್ಕಾರದಿಂದ 1000 ಮನೆಗಳನ್ನು ಮಂಜೂರು ಮಾಡಲಾಗಿದ್ದು ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಶೀಘ್ರದಲ್ಲೇ ಕೊಡಬೇಕೆಂದು ತಾಲೂಕು ಪಂಚಾಯಿತಿ ಇಓ ಜಿಎಂ ಬಸಣ್ಣನ ವರೆಗೂ ಹಾಗೂ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕ್ ತಹಸೀಲ್ದಾರರಾದ ಎಸ್ ಮಹಾಬಲೇಶ್ವರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿಗಳಾ ದ ಡಾ ಶಣ್ಮುಖ ನಾಯ್ಕ್. ಜಿಲ್ಲಾಪಂಚಾಯಿತಿ ಎಇಇ ಮಲ್ಲಿಕಾರ್ಜುನ. ಲೋಕೋಪಯೋಗಿ ಇಲಾಖೆ ನಾಗನಗೌಡರು. ಪೋಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಪತ್ರಕರ್ತರ ಮಿತ್ರರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;