;

ನಾಣ್ಯಾಪುರ:ಬೊಮ್ಮಕ್ಕಳಿಗೆ ಬಾರದ ಪರಿಹಾರ,ಶೀಘ್ರವೇ ಒದಗಿಸಿ…!!!

ವರದಿ. ಧನಂಜಯ್

ನಾಣ್ಯಾಪುರ:ಬೊಮ್ಮಕ್ಕಳಿಗೆ ಬಾರದ ಪರಿಹಾರ,ಶೀಘ್ರವೇ ಒದಗಿಸಿ- ವಂದೇ ಮಾತರಂ ಆಗ್ರಹ*- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ, ಬೊಮ್ಮಕ್ಕ ಕೆಲ ತಿಂಗಳ ಹಿಂದೆ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಳು.ಮಾರಣಾಂತಿ ದಾಳಿಗೊಳಗಾಗಿದ್ದ ಅವಳು ಅದೃಷ್ಟವಶಾತ್ ಪ್ರಾಣಾಪಾಯದೊಂದ ಪಾರಾಗಿದ್ದಾಳೆ.ಆದ್ರೆ ಕೆಲ ಅಂಗಾಂಗ ಳು ನಾಯಿಕಡಿತದಿಂದಾಗಿ ತೀವ್ರ ನಂಜುಂಟಾಗಿ ಹೂನವಾಗಿವೆ, ಗ್ರಾಮದ ದನಗಳನ್ನು ಕಾದು ಬರುವ ಬಿಡಿಗಾಸಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುತಿದ್ದ ಬೊಮ್ಮಕ್ಕಳು.ಅಕ್ಷರಸಃ ಅಸಹಜ ವಿಕಲಾಂಗ ಳಾಗಿದ್ದಾಳೆ ದೇಹದಲ್ಲಿಯ ಗಾಯ ಹಾಗೂ ನಂಜಿನಿಂದಾಗಿ ನರಳುತಿದ್ದಾಳೆ,ಅನಾರೋಗ್ಯ ಪೀಡಿತ ಅಶಕ್ತ ಗಂಡ ಮತ್ತು ಚಿಕ್ಕ ಮಕ್ಕಳಿರುವ ಕುಟುಂಬ ನಿರ್ವಹಣೆ ತೀರಾ ದುಸ್ಥರದಿಂದ ಕೂಡಿದೆ.ಪ್ರತಿ ದಿನದ ಸಮಯ ಒಂದು ತಿಂಗಳಂತೆ ಭಾಸವಾಗುತ್ತಿದೆ ತಿಂಗಳು ವರ್ಷದಂತೆ ಭಾಸವಾಗುತ್ತಿದೆ.ಕಾರಣ ಸ್ಥಳೀಯ ಆಡಳಿತ ವಾರದೊಳಗಾಗಿ ಸೂಕ್ತ ಪರಿಹಾರ ನೀಡಬೇಕಿದೆ.
*ನಿರ್ಲಕ್ಷ್ಯಸಿದರೆ ದೂರು ಹೋರಾಟ-ಎಚ್ಚರಿಕೆ*-
ಆರ್ಥಿಕ ಸಂಕಷ್ಟದಲ್ಲಿರುವ ಬೊಮ್ಮಕ್ಕಳಿಗೆ ಗ್ರಾಪಂ ನಲ್ಲಿರುವ ಅರ್ಹಯೋಜನೆಗಳಡಿ ಸೂಕ್ತ ಪರಿಹಾರ ಶೀಘ್ರವೇ ನೀಡಬೇಕಿದೆ.
ಗ್ರಾಮದ ಹೊರವಲಯದಲ್ಲಿ ದನ ಮೇಯಿಸುತಿದ್ದಾಗ.ಬೊಮ್ಮಕ್ಕಳ ಮೇಲೆ ನಾಯಿಯೊಂದು ದಾಳಿ ಮಾಡಿ ಗಂಭೀರ ಗಾಯ ಮಾಡಿತ್ತು,ಬೊಮ್ಮಕ್ಕ
ಖಾಸಗೀ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾಳೆ.ದನಕಾದು ಬರುವ ಬಿಡಿಗಾಸಿನಲ್ಲಿಯೇ ಜೀವನ ತೇಯುವ ಬೊಮ್ಮಕ್ಕ ಚಿಕಿತ್ಸೆಗೆ ಸುಮಾರು 60ಸಾವಿರ ₹ಗಳಷ್ಟು ಕರ್ಚುಮಾಡಿದ್ದಾಳೆ.ಹೀಗಾಗಿ ಖಾಸಗೀ ಆಸ್ಪತ್ರೆಗೆ ಹಣ ಜೋಡಿಸಲು 60ಸಾವಿರ ₹ ಕೈಗಡ ಸಾಲ ಮಾಡಿದ್ದು,ನಾಯಿಯ ದಾಳಿಯಿಂದ ದೈಹಿಕ ನ್ಯೂನತೆಯಿಂದ ಬಳಲುತಿದ್ದಾಳೆ.ನಿತ್ಯ ಜೀವನ ನಡೆಸುವುದೇ ದುಸ್ತರವಾಗಿರುವ ಬೊಮ್ಮಕ್ಕಳಿಗೆ ದೈಹಿಕ ಭಾದೆ ಹಾಗೂ ಸಾಲದ ಸುಳಿಯಲ್ಲಿದ್ದಾಳೆ.
ಕಾರಣ ಬೊಮ್ಮಕ್ಕಳಿಗೆ ಸ್ಥಳೀಯ ಆಡಳಿತ ಗ್ರಾಮ ಪಂಚಾಯ್ತಿಯು ಬೊಮಕ್ಕಳಿಗೆ,ಶೀಘ್ರವೇ ಅಗತ್ಯ ಆರ್ಥಿಕ ನೆರವು ನೀಡುವ ಮೂಲಕ ಸಹಕರಿಸಬೇಕೆಂದು.ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡ ನಾಣ್ಯಾಪುರದ ದಿಬ್ಬದಳ್ಳಿ ಮಲ್ಲಪ್ಪ ಒತ್ತಾಯಿಸಿದ್ದಾರೆ,ವಾರದೊಳಗಾಗಿ ಬೋರಮ್ಮಳಿಗೆ ದಶಮಾಪುರ ಗ್ತಾಪಂ ಅಭಿವೃದ್ಧಿ ಅಧಿಕಾರಿ,ಯೋಗ್ಯ ಪರಿಹಾರ ಹಣ ಮಂಜೂರು ಮಾಡಬೇಕು.ನಿರ್ಲಕ್ಷ್ಯ ತೋರಿದ್ದಲ್ಲಿ ಗ್ರಾಪಂ ಅಧಿಕಾರಿಗಳ ವಿರುದ್ಧ ವಂದೇ ಮಾತರಂ ಜಾಗೃತಿ ವೇದಿಕೆ ಯಿಂದ, ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಗೆ ಲಿಖಿತ ದೂರು ನೀಡಲಾಗುವುದು ವೇದಿಕೆ ಪದಾಧಿಕಾರಿಗಳು ಈ ಮೂಲಕ ಎಚ್ಚರಿಸಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;