;

ಶರಣುಶರಣಾರ್ಥಿ ಎನ್ನುವಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,…

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ಶರಣುಶರಣಾರ್ಥಿ ಕಾರ್ಯಕ್ರಮ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಹೇಮಾವತಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶರಣುಶರಣಾರ್ಥಿ ಎನ್ನುವಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,
ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಮಾತನಾಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆದಿಯಾಗಿ ಹೋರಾಟವನ್ನು ನಿಲ್ಲಿಸಲು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದೇವೆ ಹೊರತು ಅಂಜಿಕೊಂಡು ಹಿಂದೆ ಸರಿದಿಲ್ಲ ಎಂದರು.
ಗಡುವಿನೊಳಗೆ 2ಎ ಮೀಸಲಾತಿ ಘೋಷಣೆ ಮಾಡದಿದ್ದರೆ ತೀವ್ರಸ್ವರೂಪದ ಕ್ರಾಂತಿಕಾರಕ ಹೋರಾಟ ಮಾಡುತ್ತೇವೆ.
ಸಮಾಜದ ಹೋರಾಟದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅಧಿವೇಶನದಲ್ಲಿ ಮೀಸಲಾತಿ ಕುರಿತು ಹೋರಾಟ ಮಾಡಿ ಏಕೈಕ ಶಾಸಕರಾಗಿದ್ದಾರೆ. ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ತಿಳಿಸಿದರು.
ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಬಹುಕಾಲದ ಬೇಡಿಕೆಯಾಗಿದ್ದು
ಸಿ ಎಂ ಬಿ.ಎಸ್ ಯಡಿಯೂರಪ್ಪ ಈಡೇರಿಸದಿದ್ದರೆ ನಾವು ಕಾನೂನು ಹೋರಾಟ ಮಾಡುತ್ತೇವೆ.

ಮತ್ತು ಮೀಸಲಾತಿಯಿಂದ ವಿದ್ಯಾಭ್ಯಾಸ.ಉದ್ಯೋಗ. ರಾಜಕೀಯ. ಅನುಕೂಲವಾಗಲಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಬದ್ರ ವಾಡಿ. ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಹೆಚ್ ರೇವಣ್ಣ,ಪಂಚಮಸಾಲಿ ಸಮಾಜದ ಮುಖಂಡರುಗಳಾದ ಟಿಜಿ ಮಲ್ಲಿಕಾರ್ಜುನಗೌಡ, ಕೆಜಿ ಕುಮಾರಗೌಡ, ಕೆಜಿ ನಾಗರಾಜ ಗೌಡ, ಕೆಜಿ ವೀರೇಂದ್ರ ಪಾಟೀಲ್, ಹೆಚ್ ಬಿ ವೀರಭದ್ರಪ್ಪ, ಅಂಬಳೆ ಗಂಗಣ್ಣ, ಲಿಂಗನಗೌಡ ಬನವಿಕಲ್, ಹಾಗೂ ಯುವಕರು ಪಂಚಮಸಾಲಿ ಸಮಾಜದ ಬಂಧುಗಳು ಹಿರಿಯರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;