;

ಗುಡೇಕೋಟೆ:ಮರಳು ಅಕ್ರಮ ಸಾಗಾಣಿಕೆ.!?-ಕಡಿವಾಣ ಯಾವಾಗ.?

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಗುಡೇಕೋಟೆ:ಮರಳು ಅಕ್ರಮ ಸಾಗಾಣಿಕೆ.!?-ಕಡಿವಾಣ ಯಾವಾಗ.?*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದಲ್ಲಿ,ಎಗ್ಗಿಲ್ಲದೇ ಮರಳು ಅಕ್ರಮ ಸಾಗಾಣಿಕೆ ಜರುಗುತ್ತಿದೆ ಎಂಬ ದೂರು ಗ್ರಾಮದ ತುಂಬೆಲ್ಲಾ ಕೇಳಿಬಂದಿದೆ.ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿರುವ ಇಲಾಖಾಧಿಕಾರಿಗಳು,ಮೌನ ಸಮ್ಮತಿಯನ್ನ ನೀಡಿರುವರೋ ಎಂಬ ಅನುಮಾನ ಪ್ರಜ್ಞಾವಂತರಲ್ಲಿ ಮೂಡಿದೆ.ಸರ್ಕಾರದ ಕೆಲಸ ದೇವರ ಕೆಲಸವೆಂದು ತಿಳಿದೂ ತಿಂಗಳಾ ಸಾಕಷ್ಟು ಸಂಬಳ ತೆಗೆದು ಕೊಂಡು,ಮರಳು ಅಕ್ರಮ ತಡೆಯದೆ ಇರೋದು ಹತ್ತಾರು ಅನುಮಾನಗಳನ್ನ ಗ್ರಾಮಸ್ತರಲ್ಲಿ ಮೂಡಿಸಿವೆಯಂತೆ.ನಿಷ್ಠಾವಂತ ಅಧಿಕಾರಿಗಳು ಶೀಘ್ರವೇ ಅಕ್ರಮಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ.ನಿತ್ಯ ತಡರಾತ್ರಿ ಅಥವಾ ಬೆಳ್ಳಂಬೆಳಿಗ್ಗೆ ಟ್ರಾಕ್ಟ್ ರ್ ಗಳಲ್ಲಿ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ,ಕೆಲವೇ ಕೆಲವು ಪಟ್ಟಭದ್ರ ಪ್ರಭಾವಿ ವ್ಯಕ್ತಿಗಳ ಟ್ರಾಕ್ಟ್ ರ್ ಗಳು ಮರಳು ಗಾರಿಕೆಯಲ್ಲಿ ಸಕ್ರೀಯವಾಗಿವೆ.ಮರಳು ಅಕ್ರಮ ದಂತೆ ಅವರು ಇತರೆ ಅಕ್ರಮ ಚಟುವಟಿಕೆಗಳಲ್ಲಿ,ಕಾನುನು ಭಾಹಿರ ಕಾರ್ಯಗಳಲ್ಲಿ ಸಕ್ರೀಯವಾಗಿದ್ದಾರೆ. ಅವುಗಳ ವೀಡಿಯೋ ಸಾಕ್ಷಿ ಸಮೇತ ಶೀಘ್ರವೇ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ,ರಾಜ್ಯ ಪಾಲರಿಗೆ ಗೃಹಮಂತ್ರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ಧೇಶಕರಿಗೆ.ಜಿಲ್ಲಾ ನ್ಯಾಯಾಧೀಶರಿಗೆ ಲಿಖಿತ ದೂರು ನೀಡಲಾಗುವುದು, ಅಕ್ರಮ ಕೋರರು ಗ್ರಾಮದಲ್ಲಿ ದೊಂಬಿ ಗಲಭೆಗಳನ್ನ ಸೃಷ್ಠಿಸುತ್ತಿದ್ದಾರೆ. ಪ್ರಭಾವಿಗಳೆಂದು ಗುರುತಿಸಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಈ ವ್ಯಕ್ತಿ,ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಲ್ಲಿ ಗುಂಪು ಗಾರಿಕೆ ಗಲಭೆ ಸೃಷ್ಠಿ ಮಾಡುತಿದ್ದಾರೆ.
ಕಾರಣ ಸಾರ್ವಜನಿಕ ಹಿತಾಸಕ್ತಿ ಯ ಮೇರೆಗೆ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು, ಮಾಧ್ಯಮಗಳ ಮುಂದೆ ಈ ದುಷ್ಠನ ಅಕ್ರಮಗಳನ್ನ ಬಿಚ್ಚಿಡಲಾಗುವುದು ಎಂದು ಹೆಸರು ಹೇಳಬಯಸದ ಗ್ರಾಮದ ಯುವ ಮುಖಂಡ ಪತ್ರಕರ್ತರಿಗೆ ತಿಳಿಸಿದ್ದಾನೆ.ಮರಳು ಅಕ್ರಮ ಸಾಗಿಸುವ ವ್ಯಕ್ತಿಯು ಸ್ಥಳೀಯ ಎಲ್ಲಾ ಇಲಾಖಾಧಿಕಾರಿಗಳೊಂದಿಗೆ,ನಿಖಟ ಸಂಪರ್ಕದಲ್ಲಿದ್ದು ಪರಸ್ಪರ ಒಳ ಒಪ್ಪಂದಗಳು ಜರುಗಿವೆ ಇದಕ್ಕೆ ಸಾಕ್ಷಿ ಪುರಾವೆಗಳು ವೀಡಿಯೋ ಆಡಿಯೋ ದಾಖಲುಗಳು,ತಮ್ಮ ಬಳಿ ಇವೆ ಅವುಗಳನ್ನ ಸಂಬಂಧಿಸದ ರಾಜ್ಯ ಮಟ್ಟದ ಉನ್ನತಾಧಿಕಾರುಗಳಿಗೆ ಖುದ್ದು ಸಲ್ಲಿಸಲಾಗುವುದು ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.
ಈತನ ಟ್ರಾಕ್ಟ ರ್ ಮಾತ್ರ ಅಕ್ರಮ ವಾಗಿ ಹುಸುಗು ಸಾಗಿಸಬೇಕು, ಬೇರೆಯವರು ಹುಸುಗು ಸಾಗಿಸಿದರೆ ಪೊಲೀಸರಿಗೆ ಹೀಳಿ ಹಿಡಿಸುತ್ತಾನೆ. ಪೊಲೀಸ್ರು ಈತನ ಮಾತಿಗೆ ತಲೆದೂಗುತ್ತಾರಂತೆ ಹಾಗಂತ ಆತನೇ ಹೇಳಿಕೊಂಡಿದ್ದಾನೆ, ಸದ್ಯ ಆತನ ಮಾತಿನಂತೆಯೇ ಪೊಲೀಸರು ಇದ್ದಾರೆ ಗುಡೇಕೋಟೆಯ ಅಧಿಕಾರಿಗಳು ಆತನ ಮಾತೇ ವೇದವಾಕ್ಯವಂತೆ ನಡೆದು ಕೊಳ್ಳುತ್ತಾರಂತೆ ಹೀಗೆಂದು ಗುಡೇಕೊಟೆಯ ಗ್ರಾಮಸ್ಥರು ಮಾತಮಾಡಿಕೊಳ್ಳುತ್ತಿರೋದು ಸತ್ಯ ಸಂಗತಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;