;

ಕಾನಾಹೋಸಹಳ್ಳಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ವಿಜೃಂಭಣೆಯಿಂದ ಜರುಗಿತು…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಗ್ರಾಮ
ತಾಲೂಕಿನ ಕಾನಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಶಕ್ತಿ ಮಾರಿಕಾಂಬ ಜಾತ್ರ ಮಹೋತ್ಸವ ಹಾಗೂ ರಥೋತ್ಸವ ಜರಗಿತು

ಶ್ರೀ ಶಕ್ತಿ ಮಾರಿಕಾಂಬಾ ದೇವಿಯ ಮೊದಲನೇ ದಿನವಾದ ಮಂಗಳವಾರದಂದು
ತನ್ನ ಗರ್ಭಗುಡಿಯಿಂದ ಸಕಲ ಮಂಗಳ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸಾಗಿಬಂದು ಮಂಗಳಂ ಗಣದಲ್ಲಿ ಶೃಂಗಾರಮಯ ಗೊಂಡ ಅಲಂಕರಿಸಲ್ಪಟ್ಟ ಚೌಕಿ ಮನೆ ಒಳಗೆ ಪ್ರವೇಶ ಮಾಡಿ ಸಕಲ ಭಕ್ತಾದಿಗಳಿಗೆ ದರ್ಶನಭಾಗ್ಯ ನೀಡುವುದು. ಮತ್ತು ಎರಡನೇ ದಿನ ಬುಧವಾರ ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಕೋಸ್ಕರ ದೇಗುಲ ಸೀರೆ ಮತ್ತು ಬಾಯಿಬೀಗ ಮುಂತಾದ ಭಕ್ತಿ ಕಾರ್ಯಕ್ರಮ ಜರುಗಿದವು. ಮತ್ತು ಮೂರನೇ ದಿನ ವಾದ ಗುರುವಾರ ವಿಶೇಷ ಪೂಜೆ ಹಾಗೂ ಗಂಗೆಪೂಜೆ ನಂತರ ಪೋತರಾಜರಿಂದ ಸಾಂಕೇತಿಕ ಪೂಜೆ ನಡೆದವು ಇದಕ್ಕೂ ಮುನ್ನ ಮೆರವಣಿಗೆ ಮೂಲಕ ಪೋತರಾಜ ರೊಂದಿಗೆ ಹಾಯ್ ಗಾರರು ಸೇರಿ ಹೊಸಹಳ್ಳಿ ಹೊರವಲಯದಲ್ಲಿರುವ ಪುರಾತನ ಬಾವಿಗೆ ತೆರಳಿ ಗಂಗೆ ಪೂಜೆ ಮಾಡಿದರು ನಂತರ ಗಂಗೆಯನ್ನು ನಾರಿಯರು ಮಾರಿಕಾಂಬ ದೇವಸ್ಥಾನಕ್ಕೆ ಬಂದು ದೇವಿ ಅಭಿಷೇಕ ಮಾಡಿದರು ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರು ಸುಡುಬಿಸಿಲಿಗೆ ತಣ್ಣನೆ ನೀರು ಪಾನೀಯ ಕಲ್ಲಂಗಡಿ ಹಣ್ಣಿ ಗೆ ಮೊರೆ ಹೋದರು. ಭಕ್ತರಿಗೆ ನೀರಿನ ಅರವಟ್ಟಿಗೆ ಕಲ್ಪಿಸಿ ಸುವ ಮೂಲಕ ಭಕ್ತರ ಜಲದಾಹ ತಣಿಸಿದರು. ಶ್ರೀದೇವಿಯು ಚೌಕಿ ಮನೆಯಿಂದ ಹೊರಟು ಸಡಗರ ಗಳೊಂದಿಗೆ ದಿವ್ಯ ಅಲಂಕಾರಗೊಂಡ ರಥದಲ್ಲಿ ಕುಳಿತು
ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದಾವಣಗೆರೆ ಚಿತ್ರದುರ್ಗ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ದೇವಿಯ ರಥೋತ್ಸವಕ್ಕೆ ಆಗಮಿಸಿದ್ದರು, ಹಾಗೂ ಕಾನಹೊಸಳ್ಳಿ ಯ ಗ್ರಾಮಸ್ಥರು ದೈವ ಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಹಾಕಿ ರಥದಲ್ಲಿ ಪ್ರತಿಷ್ಡಾಪಿಸುತ್ತಿದ್ದಂತೆ ನೇರದಿದ್ದ ಭಕ್ತರ ಜಯಘೋಷ ಹಾಕಿದರು.
ರಥ ಮುಂದೆ ಸಾಗುತ್ತಿದ್ದಂತೆ ಭಕ್ತರ ದಂಡು ಜಯಘೋಷ ಹಾಕಿ ಬಾಳೆಹಣ್ಣು ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ರಥವೂ ಪಾದಗಟ್ಟೆ ತಲುಪಿತು
ಕೆಕೆ ಹಾಕಿ ಸಂಭ್ರಮಿಸಿದರು.ಶ್ರೀ ಶಕ್ತಿ ಮಾರಿಕಾಂಬಾ ದೇವಿಯ ಕೃಪೆಗೆ ಪಾತ್ರರಾದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;