ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಕೈವಲ್ಯಾಪುರ:ಬೈಕ್ ಸ್ಕಿಡ್ ಸವಾರನಿಗೆ ಗಾಯ-ಪ್ರಕರಣ ದಾಖಲು*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೈವಲ್ಯಾಪುರ ಗ್ರಾಮದ ಹತ್ತಿರ,ಚಲಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಮಾ21ರಂದು ಮಧ್ಯಾಹ್ನ ಜರುಗಿದೆ. ಕುಪ್ಪಿನಕೇರಿ ಗ್ರಾಮದ ಟಿ.ರಾಮಪ್ಪ(55)ತೀವ್ರ ಗಾಯಗೊಂಡ ದುರ್ದೈವಿಯಾಗಿದ್ದಾನೆ.
ಈತನು ಹುಲಿಕುಂಟೆ ಗ್ರಾಮಕ್ಕೆ ಮೇವು ವ್ಯಾಪಾರಕ್ಕೆಂದು ತೆರಳಿದ್ದು,ಮರಳಿ ತನ್ನ ಗ್ರಾಮಕ್ಕೆ ತೆರಳುವಾಗ ಮಾರ್ಗಮದ್ಯೆ ಕೈವಲ್ಯಾಪುರ ಗ್ರಾಮದ ಬಳಿ.
ಆಕಸ್ಮಾತ್ ಬೈಕ್ ಸ್ಕಿಡ್ ಆಗಿದ್ದು
ಬೈಕ್ ಸಮೇತ ಬಿದ್ದಿದ್ದಾನೆ ಪರಿಣಾಮ ರಾಮಪ್ಪ ತೀವ್ರ ಗಾಯಗೊಂಡಿದ್ದಾನೆ,
ವಿಷಯ ತಿಳಿದ ಕೂಡಲೇ ಕೂಡ್ಲಿಗಿ ಹೈವೇ ಪೆಟ್ರೋಲ್ ಸಿಬ್ಬಂದಿ ರೇವಣ್ಣ ಸ್ಥಳಕ್ಕಾಗಮಿಸಿದ್ದಾರೆ.
ಕೂಡಲೇ ಗಾಯಾಳುವನ್ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ,ಘಟನಾ ಸ್ಥಳಕ್ಕೆ ಪಿಎಸ್ಐ ಸುರೇಶ್ ಹಾಗೂ ಮುಖ್ಯಪೇದೆ ಹನುಮಂತಪ್ಪ ಭೆಟ್ಟಿ ನೀಡಿದ್ದಾರೆ,ತೀವ್ರವಾಗಿ ಗಾಯಗೊಂಡಿರುವ ಗಾಯಾಳುವನ್ನ ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
