;

30 ಎಕರೆ ಅರಣ್ಯ ಬೆಂಕಿಗಾಹುತಿ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ,ದಲಿತ ಮುಖಂಡ ಈಶ್ವರಪ್ಪ ಆಗ್ರಹ…

 

30 ಎಕರೆ ಅರಣ್ಯ ಬೆಂಕಿಗಾಹುತಿ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ,ದಲಿತ ಮುಖಂಡ ಈಶ್ವರಪ್ಪ ಆಗ್ರಹ* -ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಹಾಗೂ ಸಿದ್ದಾಪುರ ಅರಣ್ಯ ಬೆಂಕಿಗಾಹುತಿಯಾಗಿದ್ದು, ಘಟನೆಗೆ ಕಾಣರಾದವರನ್ನು ಪತ್ತೆಹಚ್ಚಿ ತಕ್ಕ ಶಿಕ್ಷೆ ನೀಡಬೇಕೆಂದು ಹಿರಿಯ ದಲಿತ ಮುಖಂಡ ಹಾಗೂ ಪತ್ರಕರ್ತ ಡಿ.ಎಂ.ಈಶ್ವರಪ್ಪ ಆಗ್ರಹಿಸಿದ್ದಾರೆ. ಅವರು ಘಟನಾಸ್ಥಳ ಪರಿಶಿಲಿಸಿದರು ಮಾ14ರಂದು ಮಧ್ಯಾಹ್ನ1ಗಂಟೆಯಿಂದ ಸಿದ್ದಾಪುರ ಅರಣ್ಯಕ್ಕೆ ಬೆಂಕಿ ಹೊತ್ತಿಕೊಂಡಿತ್ತು, ಅಂದು ಸತತ ಹಲವು ತಾಸುಗಳ ಕಾಲ ಅರಣ್ಯದಲ್ಲಿ ಬೆಂಕಿ ಹೊತ್ತಿಹುರಿದಿದೆ,ಪರಿಣಾಮ ಸುಮಾರು10ಎಕರೆಯಷ್ಟು ಅರಣ್ಯ ಸುಟ್ಟು ಕರಕಲಾಗಿದೆ ಎಂದು ಅವರು ತಿಳಿಸಿದ್ದಾರೆ.ತಕ್ಷಣವೇ ಗ್ರಾಮಸ್ಥರು ಬೆಂಕಿ ನಂದಿಸುವ ಹರಸಾಹಸ ಮಾಡಿದ್ದಾರೆ ಪ್ರಯೋಜನವಾಗಿಲ್ಲ.

ಸಂಜೆ7ರತನಕ ಅರಣ್ಯ ಸುಟ್ಟಿದ್ದು ಸುಮಾರು 10ಎಕರೆ ಅರಣ್ಯ ನಾಶವಾಗಿದ್ದು,ವನ್ಯ ಸಂಪತ್ತಿನ ರಾಶಿ ಸುಟ್ಟು ಕರಕಲಾಗಿದೆ ಗ್ರಾಮಸ್ಥರು ಬೆಂಕಿಯನ್ನ ನಂದಿಸುವಲ್ಲಿ ತಡವಾಗಿ ಯಶಸ್ಸು ಸಾಧಿಸಿದ್ದಾರೆ.ಅದೇ ರೀತಿ ಗುಂಡುಮುಣು ಅರಣ್ಯಕ್ಕೆ ಸಂಜೆ 4ಗಂಟೆಗೆ ಹೊತ್ತಿಕೊಂಡಿದ್ದು ಬೆಂಕಿ ರಾತ್ರಿ ಹೊತ್ತಾದರೂ ತಹಬದಿಗೆ ಬಂದಿರಲಿಲ್ಲ,ಗ್ರಾಮಸ್ಥರು ಹಾಗೂ ಕೂಡ್ಲಿಗಿ ಅಗ್ನಿ ಶಾಮಕ ಠಾಣೆಯ 2ವಾಹನಗಳು ಹಾಗೂ ಅಗತ್ಯ ಸಿಬ್ಬಂದಿ ಹಲವು ತಾಸುಗಳ ಕಾರ್ಯಚರಣೆ ನಡೆಸಿದ್ದಾರೆ. ಪರಿಣಾಮ ಸುಮಾರು 20 ಎಕರೆಯಷ್ಟು ಅರಣ್ಯ ಸಂಪತ್ತು ನಾಶವಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
ಬೆಂಕಿ ಅವಘಡಕ್ಕೆ ಮೂಲ ಕಾರಣ ದಾರಿಹೋಕರು ಸೇದಿ ಬಿಸಾಡಿದ ಬೀಡಿ ಸಿಗರೇಟು,ಬೆಂಕಿ ಕಡ್ಡಿ ಎಸೆದು ಹೋಗಿರಬಹುದೆನ್ನಲಾಗಿದೆ.
ಅರಣ್ಯದಲ್ಲಿ ಅಧಿಕ ಉಲ್ಲುಗಾವಲಿದ್ದು ಬೆಂಕಿ ರಭಸವಾಗಿ ಹೊತ್ತಿಹುರಿಯಲು ಪ್ರಮುಖ ಕಾರಣವಾಗಿದೆ,ದನಕರಗಳಿಗೆ ಮೇಯಲು ಅವಕಾಶ ನೀಡಿದಲ್ಲಿ ಅನಾಹುತ ಇಷ್ಟು ಆಗುತ್ತಿರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
*ಇಲಾಖೆ ಜಾಗ್ರತೆ ವಹಿಸಲಿ*-ಅರಣ್ಯ ಇಲಾಖೆ ತನ್ನ ಕರ್ಥವ್ಯವನ್ನು ನಿಷ್ಠೆಯಿಂದ ಮಾಡಬೇಕಿದೆ,ಸರ್ಕಾರ ಅದಕ್ಕೆಂದೆ ಪ್ರತಿಯೊಬ್ಬರಿಗೆ ಲಕ್ಷಾನುಗಟ್ಟಲೆ ಪ್ರತಿ ತಿಂಗಳು ಸಂಬಳ ಕೊಡುತ್ತಿದೆ.ಅದರ ಪರಿವು ಸಂಬಂಧಿಸಿದ ಇಲ‍ಾಖಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಿಳಿದಿರಲಿ,
ಗ್ರಾಮಸ್ಥರು ವನ್ಯ ಸಂಪತ್ತು ಹಾಗೂ ವನ್ಯ ಸಂಪನ್ನ್ಮೂಲ ನಮ್ಮದೆಂದು ತಿಳಿದು ಜತನದಿಂದ ಕಾಪಾಡಬೇಕಿದೆ. ಅರಣ್ಯ ಹಾನಿ ಮಾಡದಂತೆ ಅಗತ್ಯ ಜಾಗ್ರತೆ ವಹಿಸಬೇಕಿದೆ ಅದು ಪ್ರತಿಯೊಬ್ಬರ ಆಧ್ಯ ಕರ್ಥವ್ಯವಾಗಿದೆ ಎಂದು ಈಶ್ವರಪ್ಪ ಜನತೆಗೆ ಕೋರಿದ್ದಾರೆ. ಸಿದ್ದಾಪುರ ಹಾಗೂ ಗುಂಡುಮುಣುಗು ಅರಣ್ಯಕ್ಕೆ ಮಾತರಂ14ರಂದು ಬಿದ್ದ ಬೆಂಕಿಗೆ,ಎರೆಡೂ ಕಡೆಯಲ್ಲಿ ಸೇರಿ ಒಟ್ಟು ಮೂವತ್ತು ಎಕರೆಯಷ್ಟು ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಘಟನೆಗೆ ನಿಖರ ಕಾರಣ ತಿಳಿಯಬೇಕಾಗಿದೆ,ಸ್ಥಳೀಯ ಅರಣ್ಯ ಇಲಾಖಾಧಿಕಾರಿಗಳು ಜಾಗ್ರತೆ ವಹಿಸಿದ್ದಲ್ಲಿ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲ.ಇಷ್ಟೊಂದು ನಷ್ಟಕ್ಕೆ ಪರೋಕ್ಷವಾಗಿ ಅವರೂ ಕಾರಣವಾಗಿದ್ದು,ಅವರೇ ಮುತುವರ್ಜಿ ವಹಿಸಿ ತಪ್ಪಿತಸ್ಥರನ್ನ ಪತ್ತೆಹಚ್ಚಬೇಕು ಘಟನೆಗೆ ಕಾರಣ ತಿಳಿದು ಖಾಯಂ ಪರಿಹಾರ ಕಂಡುಕೊಳ್ಳಬೇಕಿದೆ.ಸತತ ಮೂರು ವರ್ಷಗಳಿಂದ ಹೀಗೆಯೇ ಅರಣ್ಯ ಸುಟ್ಟು ಕರಕಲಾಗುತ್ತಿದೆ, ಅರಣ್ಯಾಧಿಕಾರಿಗಳ ಹಾಗೂ ಸಿಬ್ಬದಿಗಳ ನಿರ್ಲಕ್ಷ್ಯ ವೇ ಕಾರಣ ಎಂಬ ದೂರುಗಳು ಕೇಳಿಬಂದಿವೆ.
ಸತ್ಯಾಸತ್ಯತೆಯ ಪರಮಾರ್ಶೆಯಾಗಬೇಕು ಸತ್ಯ ಹೊರಬರಬೇಕು ಎಂದು ದಲಿತ ಸಂಘಟನಾಕಾರರು ಈ ಮೂಲಕ ಒತ್ತಾಯಿಸಿದ್ದಾರೆ.ಗುಂಡು ಮುಣುಗು,ಸಿದ್ದಾಪುರ ಹಾಗೂ ಹೊಸಹಳ್ಳಿ ಭಾಗದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಜರುಗುತಿದ್ದು,ಸಂಬಂಧಿಸಿದಂತೆ ಪ್ರಕರಣದಲ್ಲಿ ಆರೋಪಿ ಕಿಡಿಗೇಡಿಗಳನ್ನ ಪತ್ತೆ ಹಚ್ಚಬೇಕು,ತಪ್ಪಿತಸ್ಥರು ಯಾರೇ ಇರಲಿ ನಿರ್ಧಾಕ್ಷಿಣ್ಯ ಶಿಸ್ಥು ಕ್ರಮಗಳನ್ನು ಕೈಗೊಳ್ಳಬೇಕು.
ಅರಣ್ಯದಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತೆಗಳನ್ನ ಇಲಾಖೆ ಕೈಗೊಳ್ಳಬೇಕಿದೆ,ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕಾಗಿದೆ, ಅರಣ್ಯಾಧಿಕಾರಿಗಳ ಮೇಲೆ ತಮ್ಮ ಪ್ರಭಾವಿ ಭೀರಬೇಕಾಗಿದೆ ಎಂದು ದಲಿತ ಮುಖಂಡ ಹಾಗೂ ಪತ್ರಕರ್ತ ಡಿ.ಎಂ.ಈಶ್ವರಪ್ಪ ಒತ್ತಾಯಿಸಿದ್ದಾರೆ. ಹೊಸಹಳ್ಳಿ ಹೋಬಳಿ ಹಾಗೂ ವಿವಿದ ಗ್ರಾಮಗಳ ದಲಿತ ಮುಖಂಡರು,ವಿವಿದ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;