;

ಹೊಸಹಳ್ಳಿ:ರಾಗಿ ಖರೀದಿ ಕೇಂದ್ರ ಪ್ರಾರಂಭ…!!!

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಹೊಸಹಳ್ಳಿ:ರಾಗಿ ಖರೀದಿ ಕೇಂದ್ರ ಪ್ರಾರಂಭ*

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಯಲ್ಲಿ,ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಉಪಕೇಂದ್ರವನ್ನು ತಹಶಿಲ್ದಾರ ಎಸ್.ಮಹಾಬಲೇಶ್ವರ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿರೈತರಿಂದ ನೋಂದಣಿ ಪ್ರಕ್ರಿಗೆ ಚಾಲನೆ ನೀಡಲಾಯಿತು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ. ಗೌರಮ್ಮ,ಗ್ರಾಮ ಪಂಚಾಯಿತಿ ಅಧ್ಯಕ್ಷರು,ಎಪಿಎಂಸಿ ಕಾರ್ಯದರ್ಶಿಗಳು,ಆಹಾರ ಶಿರಸ್ತೇದಾರ ಭರತ್ ರಾಜ್,ಆಹಾರ ನಿರೀಕ್ಷಕ ಗೀತಾಂಜನೇಯ, ಕೃಷಿ ಇಲಾಖೆಯ ಗ್ರೇಡರ್ ಮಾನಸ,ಕಂದಾಯ ನಿರೀಕ್ಷಕ ಮುರುಳಿ ಕೃಷ್ಣ,ಖರೀದಿ ಅಧಿಕಾರಿ ಕರೇಗೌಡ ಮತ್ತಿತರರು ಹಾಜರಿದ್ದರು.
ಸಭೆಯನ್ನು ಉದ್ದೇಶಿಸಿ ಮಾನ್ಯ ತಹಶೀಲ್ದಾರರು ಹೊಸಹಳ್ಳಿ ಯಲ್ಲಿ ಖರೀದಿ ಉಪಕೇಂದ್ರವನ್ನು ತೆರೆದಿರುವುದನ್ನು ರೈತರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ತಿಳಿಸಿದರು. ನೋಂದಣಿ/ಖರೀದಿ ಪ್ರಕ್ರಿಯೆಯು ಮಾ31 ರಂದು ಮುಕ್ತಾಯಗೊಳ್ಳುವುದರಿಂದ ರೈತರು ಈ ದಿನಾಂಕದೊಳಗೆ ನೋಂದಣಿ /ಖರೀದಿಯನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು,ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಈ ಬಗ್ಗೆ ಸ್ಥಳೀಯವಾಗಿ ವ್ಯಾಪಕ ಪ್ರಚಾರ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.ಅಲ್ಲದೇ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಪ್ರತಿ ಕ್ವಿಂಟಲ್ ಗೆ ಸರ್ಕಾರ ಕರೀದಿಸುವ ರಾಗಿ₹3295 ,ಹೈಬ್ರಿಡ್ ಜೋಳ ₹2620,ಮಾಲ್ದಂಡಿ ಜೋಳ ₹2640,ಭತ್ತ ಸಾಮಾನ್ಯ ₹1868′ ಗ್ರೇಡ್ ಎ – ₹1888 ದರ ನಿಗದಿಗೊಳಿಸಿದೆ ಎಂದು ಇಲಾಖೆ ಪ್ರಕಟಣೆ ನೀಡಿದೆ.ಕಂದಾಯ ಇಲಾಖಾಧಿಕಾರಿಗಳು ಹಾಗೂ ಕೃಷಿ ಇಲಾಖಾಧಿಕಾರಿ ಸಿಬ್ಬಂದಿ,ಜನಪ್ರತಿನಿಧಿಗಳು ಹಾಗೂ ರೈತರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;