;

ಸಾಮೂಹಿಕ ಶೌಚಾಲಯ ದುರಸ್ತಿಗೊಳಿಸುವಂತೆ ಆಗ್ರಹ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸಾಮೂಹಿಕ ಶೌಚಾಲಯ ದುರಸ್ತಿಗೊಳಿಸುವಂತೆ ಆಗ್ರಹ
ಮಹಿಳೆಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಂದಲೇ ಅಧಿಕಾರಿಗಳಿಗೆ ತರಾಟೆ.ಕಾನಾಹೊಸಹಳ್ಳಿ ಯ ನಾಲ್ಕನೇ ವಾರ್ಡ ನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಸುಮಾರು 15 ಲಕ್ಷಗಳ ವ್ಯಚ್ಚದಲ್ಲಿ ಭೂಸೇನಾ ಇಲಾಖೆಯಿಂದ ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿದ್ದು ಈ ವರೆಗೂ ಕೂಡ ಅದು ಗ್ರಾಮಸ್ಥರಿಗೆ ಉಪಯೋಗಕ್ಕೆ ಭಾರದೆ ಇದ್ದುದುನ್ನು ಗ್ರಾಮದ ಮಹಿಳೆಯರು ಹಾಗೂ ಗ್ರಾಮ ಪಂಚಾಯತಿ ಅದ್ಯಕ್ಷೆ ಸದಸ್ಯರು ಮಹಿಳೆಯರು ಇಂದು ಭೂಸೇನಾ ಇಲಾಖೆಯ ಅಧಿಕಾರಿಗೆ ಕೂಡಲೇ ಶೌಚಾಲಯವನ್ನು ದುರಸ್ತಿ ಗೊಳಿಸಿ ಸಾರ್ವಜನಿಕರಿಗೆ ಶೌಚಕ್ಕೆ ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ತರಾಟೆಗೆ ತೆಗೆದುಕೊಂಡರು ಇದೇ ಸಂದರ್ಭದಲ್ಲಿ ಕಾನಾಹೊಸಹಳ್ಳಿ ಗ್ರಾಪಂ ಅದ್ಯಕ್ಷೆ ನೀಲಮ್ಮ ಬೊಮ್ಮಣ್ಣ ಮಾತನಾಡಿ ಈ ಹಿಂದೆ ಕಳೆದ ಏಳು ವರ್ಷಗಳ ಹಿಂದೆ ಹಲವು ವರ್ಷಗಳ ಹಿಂದೆ ಊರಿನ‌ ಮದ್ಯ ಭಾಗದಲ್ಲಿ ಈ ಶೌಚಾಲಯ ನಿರ್ಮಾಣ ಮಾಡಿದ್ದು ಈ ವರೆಗೂ ಉಪಯೋಗಕ್ಕೆ ಲಬ್ಯವಾಗಿಲ್ಲ ನೀರಿನ ವ್ಯವಸ್ಥೆ ಮಾಡಿಲ್ಲ, ಆದ್ದರಿಂದ ಮಕ್ಕಳು ವೃದ್ದರು ಶೌಚಾಲಯದ ಹೊರಗಡೆಯೇ ಶೌಚಕ್ಕೆ ಹೋಗುತ್ತಿದ್ದು ಇದರಿಂದಾಗಿ ಸುತ್ತಮುತ್ತಲಿನ ಮನೆಯವರಿಗೆ ಅಸಯ್ಯ ಪಡುವಂತಾಗಿದೆ ಏಳು ವರ್ಷಗಳ ಹಿಂದೆ ಯೇ ಕಾಮಗಾರಿ ಮುಗಿದಿದೆ ಎಂದು ಹೇಳಿ ಹಣ ಮುಂಜೂರು ಮಾಡಿಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಇದೆ, ಈಗ ಇನ್ನೂ ಎರಡು ಮೂರು ದಿನಗಳಲ್ಲಿ ಕಾನಾಹೊಸಹಳ್ಳಿ ಯ ಮಾರಿಕಾಂಬಾ ಜಾತ್ರೆ ನಡೆಯಲಿದ್ದು ಅದರ ಒಳಗಾಗಿ ಭೂಸೇನಾ ಇಲಾಖೆಯ ಅಧಿಕಾರಿಗಳು ಈ ಶೌಚಾಲಯವನ್ನು ದುರಸ್ತಿಗೊಳಿಸಿ ಜನರಿಗೆ ಉಪಯೋಗ ಆಗುವಂತೆ ಮಾಡಿಕೊಡಬೇಕು ಎಂದು ಹೇಳಿದರು. ನಂತರ ಕಮ್ಯುನಿಸ್ಟ್ ಪಕ್ಷದ ಮುಖಂಡ ಸಿಬಿ ನಾಗೇಶ್ ಮಾತನಾಡಿ ನಾವು ಹಲವು ದಿನಗಳ ಹಿಂದೆಯೇ ಕೂಡ್ಲಿಗಿ ಯ ಭೂಸೇನಾ ಕಛೇರಿ ಗೆ ಹೋಗಿ ಸರಿಪಡಿಸಲು ಮನವಿ ಕೊಟ್ಟಿದ್ದೆವು ಆದರೂ ಇಲ್ಲಿಯವರೆಗೆ ಯಾರೂ ಕೂಡ ಇದನ್ನು ಪರಿಗಣಿಸಿಲ್ಲ ಕೂಡಲೆ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ.

ಗ್ರಾಪಂ ಸದಸ್ಯರಾದ ಸಿದ್ದಪ್ಪ, ಅಡವೆಜ್ಜರ ನಾಗರಾಜ,ಲಕ್ಷ್ಮಿ ಚೌಡಪ್ಪ, ಗೌರಮ್ಮ, ಹಾಗೂ ವಾರ್ಡನ ಅನಿಲಮ್ಮ, ರೇಣುಜಮ್ಮ, ಗಂಗಮ್ಮ, ಲಲಿತಮ್ಮ, ಹಂಪಕ್ಕ, ಗಂಗಮ್ಮ, ಮಂಜಮ್ಮ , ಗಾಯತ್ರಮ್ಮ, ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ,ಸಿಬಿ, ನಾಗೇಶ್, ಮಂಜುನಾಥ ಸ್ವಾಮಿ, ಊರಿನ ಮುಖಂಡರಾದ ರವಿಚಂದ್ರ, ರುದ್ರಪ್ಪ, ವಿರೂಪಾಕ್ಷಣ್ಣ, ವಸಂತ ಇತರರಿದ್ದರು.

ಪೋಟ-
18ಕೆಎಚ್ ಎಲ್-1ಪಿ, ಕಾನಾಹೊಸಹಳ್ಳಿ ಯ ನಾಲ್ಕನೇ ವಾರ್ಡನಲ್ಲಿ ಹಲವು ವರ್ಷಗಳ ಭೂಸೇನಾ ಇಲಾಖೆಯಿಂದ ಮಾಡಿದ ಸಾರ್ವಜನಿಕ ಶೌಚಾಲಯ ದುರಸ್ತಿಗೊಳಿಸುವಂತೆ ಗುರುವಾರ ಗ್ರಾಪಂ ದ್ಯಕ್ಷರು ಸದಸ್ಯರು ಮಹಿಳೆಯರು ಭೂಸೇನಾ ಇಲಾಖೆಯ ವರ್ಕ ಇನ್ಸ್ಪೆಕ್ಟರ್ ಸೋಮಶೇಖರ್ ಗೆ ತರಾಟೆಗೆ ತೆಗೆದುಕೊಂಡರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;