ವರದಿ. ಮುಕ್ಕಣ್ಣ ಹುಲಿಗುಡ್ಡ

ಯಾದಗಿರಿ ಕೋಟೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಯಾದಗಿರಿ, ಮಾ17 ನಗರದ ಕೋಟೆಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಬುಧವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ನಂತರ ಮಾತನಾಡಿದ ಅವರು ನಿಗದಿತ ಸಮಯದಲ್ಲಿ ಕೋಟೆ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಮುಗಿಸುವಂತೆ ಹಾಗೂ ಕೋಟೆ ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಕಾರ್ಯ ಯೋಜನೆ ಹಾಕಿಕೊಳ್ಳುವಂತೆ ಸ್ಥಳದಲ್ಲಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಪುರಾತತ್ವ ಸಹಾಯೋಗದೊಂದಿಗೆ ಇನ್ನೂ ಅಗತ್ಯವಿರುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ ಅಂದಾಜು ಪತ್ರಿಕೆಯೊಂದಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಭೀಮರಾಯ ಕಲ್ಲೂರು ಕಾಮಗಾರಿಯ ಸ್ಥಳದಲ್ಲಿ ಪುರಾತತ್ವ ಸಂರಕ್ಷಣಾ ಸಹಾಯಕರಾದ ಪ್ರೇಮಲತಾ ವಿ., ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ವಿಶ್ವನಾಥ ಹಾಗೂ ಗುತ್ತಿಗೆದಾರು ಹಾಜರಿದ್ದರು.

ಲುಂಬಿನಿ ವನ (ಸಣ್ಣ ಕೆರೆ) ದಲ್ಲಿ ಲಘು ಆಹಾರ ಮಳಿಗೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ
ಯಾದಗಿರಿ ಮಾರ್ಚ್17 ನಗರದ ಲುಂಬಿನಿ ವನ (ಸಣ್ಣ ಕೆರೆ) ದಲ್ಲಿ ಲಘು ಆಹಾರ ಮಳಿಗೆ, ಕ್ಯಾಂಟೀನ್, ಐಸ್‌ಕ್ರಿಮ್ ಪಾರ್ಲರ್ ಹಾಗೂ ಉದ್ಯಾನ ವನದಲ್ಲಿ ತೆರೆಯಬಹುದಾದ ಇತರೆ ಮಳಿಗೆಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ಪ್ರಾರಂಭಿಸಲು ಆಸಕ್ತಿಯುಳ್ಳ ಅರ್ಹ ಗುತ್ತಿಗೆದಾರ ರಿಂದ ಅಥವಾ ಏಜೆನ್ಸಿಯವ ರಿಂದ ಹಾಗೂ ಹೋಟೆಲ್ ಉದ್ಯಮಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಷರತ್ತುಗಳನ್ವಯ ಮತ್ತು ಇಲಾಖೆಗೆ ಹೆಚ್ಚು ಬಾಡಿಗೆ ದರ ನೀಡಲು ಒಪ್ಪುವ, ಅಗತ್ಯ ದಾಖಲೆಗಳನ್ನು ಸಲ್ಲಿಸುವ ಅರ್ಜಿದಾರರಿಗೆ ಉದ್ಯಾನ ವನದಲ್ಲಿ ಆಹಾರ ಮಳಿಗೆ ಹಾಗೂ ಇತರ ಮಳಿಗೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.
ಆಸಕ್ತಿಯುಳ್ಳವರು ದಿನಾಂಕ:31.03.2021 ರಂದು ಸಂಜೆ 3.00 ಗಂಟೆಯೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಹಾಯಕ ನಿರ್ದೇಶಕರ ಕಾರ್ಯಾಲಯ, ಪ್ರವಾಸೋದ್ಯಮ ಇಲಾಖೆ, ಯಾದಗಿರಿ ಇಲ್ಲಿ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಪ್ರವಾಸೋದ್ಯಮ ಇಲಾಖೆ, ಯಾದಗಿರಿ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ, ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
