ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ನಂದೀಶ್ವರ ರಥೋತ್ಸವ ಜರುಗಿತ್ತು.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಬಯಲುತುಂಬರಗುದ್ದಿ ಶ್ರೀ ನಂದೀಶ್ವರ ಸ್ಮಾಮಿಯ ರಥೋತ್ಸವದ ಸೋಮವಾರ ಸಂಜೆ ಸಕಲ ವಾಧ್ಯಗಳ ನಡುವೆ ಸಡಗರ ಸಂಭ್ರಮಗಳ ನಡುವೆ ನೆರವೇರಿತು.
ದೇವಸ್ಥಾನದಿಂದ ಸಕಲ ವಾಧ್ಯಗಳ ನಡುವೆ ನಂದೀಶ್ವರ ಸ್ಮಾಮಿಯ ಉತ್ಸವ ಮೂರ್ತಿಯನ್ನು ರಥದ ಬಳಿ ಪಲಕ್ಕಿಯಲ್ಲಿ ಕರೆತಂದು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಡಾಪಿಸುತ್ತಿದ್ದಂತೆ ನೇರದಿದ್ದ ಭಕ್ತರ ಜಯಘೋಷ ಹಾಕಿದರು. ಸ್ವಾಮಿಯ ಪಟಾಕ್ಷಿಯನ್ನು ಕನ್ನಕಟ್ಟಿ ಶರಣಪ್ಪ 25000 ಸಾವಿರಕ್ಕೆ ಪಡೆದುಕೊಂಡರು.
ರಥ ಮುಂದೆ ಸಾಗುತ್ತಿದ್ದಂತೆ ಭಕ್ತರ ದಂಡು ಜಯಘೋಷ ಹಾಕಿ ಬಾಳೆಹಣ್ಣು ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ರಥವೂ ಪಾದಗಟ್ಟೆ ತಲುಪಿ ಮೂಲಸ್ಥಾನಕ್ಕೆ ಸಂಜೆ 7ರ ಸಮಯಕ್ಕೆ ಸೇರಿತ್ತಿದ್ದಂದೆ ಭಕ್ತರು ಕೆಕೆ ಹಾಕಿ ಸಂಭ್ರಮಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
