ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು / ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಸಾಕಷ್ಟು ಯೋಜನೆ ರೂಪಿಸುವುದಲ್ಲದೆ ಅವರುಗಳ ಏಳಿಗೆಗೆ ಶ್ರಮಿಸುತ್ತದೆ ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ ಯಾದವ್ ತಿಳಿಸಿದರು. ಪಟ್ಟಣದ ಬಿಜೆಪಿ ಕಾರ್ಯಲಯದಲ್ಲಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು ರೈತರಿಗಾಗಿ ಕಿಸಾನ್ ಸಮ್ಮಾನ ಯೋಜನೆ, ಕೃಷಿ ವಲಯಕ್ಕೆ ವಿಶೇಷ ಕಾನೂನುಗಳ ಮೂಲಕ ರೈತರ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ತರುವ ಯೋಜನೆ ರೂಪಿಸುವುದರೊಂದಿಗೆ
ಮ್ಯಾಲೆ ಅನ್ನದಾತರ ಕಲ್ಯಾಣಕ್ಕೆ ಬದ್ದವಾಗಿದೆ. ಆದರೆ ರೈತರ ಹೆಸರಿನಲ್ಲಿ ದೆಹಲಿಯಲ್ಲಿ ಪ್ರತಿಭಟನೆಗಿಳಿದ ಕಾಣದ ಕೈಗಳು ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಪ್ರಯತ್ನ ನಡೆಸಿದ್ದಾರೆ ಅದನ್ನು ತಡೆದು ನಮ್ಮ ಸರ್ಕಾರಗಳ ರೈತ ಪರ ಕಾಳಜಿಯನ್ನು ಜನತೆಗೆ ತಿಳಿಸುವ ಜವಬ್ದಾರಿ ನಮ್ಮ ಮೋರ್ಚಾ ಮೇಲಿದೆ ಎಂದರು. ಮಂಡಲ ಅಧ್ಯಕ್ಷರಾದ ಡಾ. ಪಿ.ಎಂ. ಮಂಜುನಾಥ ಮಾತನಾಡಿ ಆನ್ಯ ದಾತರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಆದರೆ ಸಮರ್ಪಕವಾಗಿ ಫಲಾನುಭವಿಗಳ ಗುರುತಿಸುವಿಕೆಯಲ್ಲಿ ಅಧಿಕಾರಿಗಳು ಯಡುವುತ್ತಿದ್ದಾರೆ ಪಕ್ಷದ ಸಂಘಟನೆ ಜೊತೆ ಜೊತೆಗೆ ಫಲಾನುಭವಿಗಳ ಗುರುತಿಸುವುವಿಕೆ ಕಾರ್ಯದಲ್ಲೂ ಕಾಯಕರ್ತರ ಪ್ರಯತ್ನ ಇರಬೇಕು ಅಷ್ಟೇ ಅಲ್ಲದೆ ನಮ್ಮ ಸರ್ಕಾರದ ಪೀಳಿಗೆಯ ಸಾಧನೆ ಸಹಿಸದ ಆಂದೋಲನ ಜೀವಿಗಳು ಅನಗತ್ಯ ರೈತರ ಹೆಸರಿನಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ಹೆಚ್.ಎಂ.ಮಂಜುನಾಥ ಸ್ವಾಮಿ, ಜಿಲ್ಲಾ ರೈತ ಮೊರ್ಚಾ ಪ್ರಾಧನ ಕಾರ್ಯದರ್ಶೀ ಸೂರಮ್ಮನಹಳ್ಳಿ ನಾಗರಾಜ್ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷೆ ಶಾರದಮ್ಮ, ದುಂಡಲ ಪ್ರಧಾನ ಕಾಂರ್ಗದರ್ಶಿ ಎನ್ .ಪಿ. ಪ್ರಭಾಕರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಧರಣೇಂದ್ರ, ಮಲ್ಲಹಳ್ಳಿ ಬೋರಣ್ಣ, ಗಿರೀಶ್, ತಿಪ್ಪೇಸ್ವಾಮಿ, ವಸಂತ್ ಕುಮಾರ್, ಕುಮಾರಸ್ವಾಮಿ, ಚಂದ್ರಶೇಖರ ಇನ್ನು ಮುಂತಾದವರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
