ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಸಾಸಲವಾಡ:ಗಬ್ಬೆದ್ದು ನಾರುತ್ತಿರುವ ಕಾಲುವೆ, ಮನೆಯಂಗಳದಲ್ಲಿಯೇ ತಿಪ್ಪೆಗಳು-ಹಳ್ಳ ಹಿಡಿದಿರುವ ಸ್ವಚ್ಛ ಭಾರತ ಮಿಷನ್*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಹೆಗ್ಡಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾಸಲವಾಡ ಗ್ರಾಮದಲ್ಲಿ,ಪ್ರಧಾನ ಮಂತ್ರಿಗಳ ಸ್ಚಚ್ಛಭಾರತ ಮಿಷನ್ ಹಳ್ಳ ಹಿಡಿದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಗ್ರಾಮದ ಮಧ್ಯದಲ್ಲಿಯೇ ಬಹುತೇಕ ಕಡೆ ತಿಪ್ಪೆಗಳಿದ್ದು,ಅವು ಮಕ್ಕಳ ಶೌಚಾಲಯಗಳಾಗಿವೆ ಎನ್ನುತ್ತಾರೆ ಗ್ರಾಮಸ್ಥರು.ಮನೆಯಂಗಳದಲ್ಲಿನ ಕಾಲುವೆಗಳು ಕೆಲ ವರ್ಷಗಳಿಂದ ಸ್ವಚ್ಚಗೊಳಿಸಿಲ್ಲ,ಕಾಲವೆಗಳು ಕಸ ತುಂಬಿ ದುರ್ನಾಥ ಬೀರುತ್ತಿದ್ದು ಹುಳುಗಳಿಂದ ತುಂಬಿವೆ.ಗ್ರಾಮದ ಬಹುತೇಕ ಕಡೆಗಳಲ್ಲಿ ಮನೆಯಂಗಳದಲ್ಲಿಯೇ ತಿಪ್ಪೆಗಳಿವೆ ಮತ್ತು ಮಕ್ಕಳು ತಿಪ್ಪೆಗಳಲ್ಲಿಯೇ ಶೌಚ ಕೂಡುತ್ತಿದ್ದಾರೆ, ಪ್ರಧಾನಿಯವರ ಸ್ವಚ್ಛ ಭಾರತ ಮಿಷನ್ ಗೆ ಇಲ್ಲಿ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಿಂಚಿತ್ತೂ ಗೌರವಿಸುತಿಲ್ಲ,ಕೇವಲ ಲೆಕ್ಕ ಪತ್ರಗಳಿಗೆ ಸ್ವಚ್ಛತೆ ಅಭಿವೃದ್ಧಿ ತೋರಿಸುತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಗ್ರಾಪಂ ನಲ್ಲಿನ ಹಲವು ಭಾರೀ ಹಗರಣಗಳು ಜರುಗಿವೆ,ಅವುಗಳನ್ನ ಶೀಘ್ರದಲ್ಲಿಯೇ ಬಯಲಿಗೆಳೆದು ಮಾಧ್ಯಮಗಳ ಮುಂದೆ ಎಸಿಬಿಯವರಲ್ಲಿ ದೂರು ನೀಡಲಾಗುವುದೆಂದು,ಕೆಲ ಗ್ರಾಮಸ್ಥರು ಹಾಗು ಪ್ರಜ್ಞಾವಂತ ಯುವಕರು ದೂರಿದ್ದಾರೆ.ಕಾಲುವೆ ತಿಪ್ಪೆಗಳು ಕೊಳೆತು ನಾರುತಿದ್ದು, ಇದಿರಿಂದಾಗಿ ಬಹುತೇಕ ಗ್ರಾಮಸ್ಥರಿಗೆ ರೋಗ ಋಜನಗಳು ಹಬ್ಬಿವೆ ಗ್ರಾಮದ ಜನರು ನಿತ್ಯ ಅನಾರೋಗ್ಯದಿಂದ ಬಳಲುತಿದ್ದು. ಗ್ರಾಮದ ಬಹುತೇಕ ಗ್ರಾಮಸ್ಥರು ಚಿಕಿತ್ಸೆಗೆಂದು ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು, ಗ್ರಾಮದ ಹಿರಿಯ ಮರುಳಸಿದ್ದಪ್ಪ ಸೇರಿದಂತೆ ಹಲವು ಹಿರಿಯರು ದೂರಿದ್ದಾರೆ.ಕಾಲುವೆ ನೀರು ನಿಂತು ಗುಂಡಿಗಳು ನಿರ್ಮಾಣವಾಗಿವೆ ಇದರಿಂದಾಗಿ ಕೆಲ ಮನೆಗೆ ಹೊಂದಿಕೊಂಡಂತೆ ಗುಂಡಿ ನಿರ್ಮಾಣವಾಗಿದೆ,ಪರಿಣಾಮ ಕೆಲ ಮನಗಳ ಪಾಯ ಕುಸಿಯುತ್ತಿವೆ ಆಗೋ ಹೀಗೋ ಬೀಳುವಂತಾಗಿವೆ. ಕಾರಣ ಶೀಘ್ರವೇ ಹೊಸದಾಗಿ ಕಾಲುವೆಯನ್ನ ಅಭಿವೃದ್ಧಿ ಪಡಿಸಬೇಕಿದೆ,ಕಾಲುವೆ ನೀರು ಗ್ರಾಮದಿಂದ ಹೊರಗೆ ಹರಿದು ಹೋಗುವಂತೆ ಶೀಘ್ರವೇ ಕ್ರಮ ಜರುಗಿಸಬೇಕಿದೆ ಮತ್ತು ಕಾಲುವೆ ಸ್ವಚ್ಚಗೋಳಿಸಬೇಕು. ಮನೆಯಂಗಳದಲ್ಲಿರುವ ಎಲ್ಲಾ ತಿಪ್ಪೆಗಳನ್ನ ಗ್ರಾಮದಿಂದ ಶೀಘ್ರವೇ ಆಚೆಗೆ ಹಾಕುವಂತೆ ಕ್ರಮಕ್ಕಾಗಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ. ಸಂಬಂಧಿಸಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ,ತಾಪಂ ಅಧಿಕಾರಿಗಳಿಗೂ ಹೇಳಲಾಗಿದೆ ಅವರೂ ಸ್ಪಂಧಿಸುತ್ತಿಲ್ಲ ಹಾರಿಕೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಹೀಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಲ್ಲಿ ಸಾಕ್ಷಿ ಪುರಾವೆಗಳ ಸಮೇತ ದೂರು ನೀಡಲಾಗುವುದು,ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗುವುದು ಎಂದು ಗ್ರಾಮದ ಹಿರಿಯ ಮರುಳಸಿದ್ದಪ್ಪ ಸೇರಿದಂತೆ. ಗ್ರಾಮದ ಹಿರಿಯರು ಹಾಗೂ ವಿವಿದ ಸಂಘಟನೆಗಳ ಪದಾಧಿಕಾರಿಗಳು ಗ್ರಾಮಸ್ಥರು ತಿಳಿಸಿದ್ದಾರೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
