;

ಚತುರ್ದಶೀ ತಿಥಿಯ ರಹಸ್ಯ ಶಿವನನ್ನು ಪೂಜಿಸಲು ಕೃಷ್ಣಪಕ್ಷದ ಚತುರ್ದಶೀ ತಿಥಿಯು ಪ್ರಶಸ್ತವಾದದ್ದು….

ವರದಿ. ಎಚ್ಚರಿಕೆ ಪತ್ರಿಕೆ
ಚತುರ್ದಶೀ ತಿಥಿಯ ರಹಸ್ಯ
ಶಿವನನ್ನು ಪೂಜಿಸಲು ಕೃಷ್ಣಪಕ್ಷದ ಚತುರ್ದಶೀ ತಿಥಿಯು ಪ್ರಶಸ್ತವಾದದ್ದು.  ಪ್ರತೀ ಮಾಸದಲ್ಲೂ ಈ ತಿಥಿಯಂದು ಶಿವನನ್ನು ಪೂಜಿಸುವುದು ಶ್ರೇಯಸ್ಕರ.  ಆಗ ಅದು ಮಾಸ ಶಿವರಾತ್ರಿ  ಎನಿಸುತ್ತದೆ.  ಮಾಘ ಶುಕ್ಲ ಚತುರ್ದಶಿಯಂದು ಮಹಾಶಿವರಾತ್ರಿ  ಎಂದು ಪ್ರಸಿದ್ಧವಾಗಿರುತ್ತದೆ.  ಅಂತೂ ಪರಮಶಿವನ ಪೂಜೆಗೆ ಚತುರ್ದಶೀ ತಿಥಿಯು ಅತ್ಯಂತ ಶ್ರೇಷ್ಠವಾದದ್ದು ಎಂದು ಪ್ರಸಿದ್ಧಿ.  ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಚತುರ್ದಶೀ ಎಂದರೆ ಹದಿನಾಲ್ಕು ಎಂದರ್ಥ.  ಹದಿನಾಲ್ಕು ಇಂದ್ರಿಯಗಳನ್ನೂ ಜಯಿಸಿರುವ ಶಿವನನ್ನು ಚತುರ್ದಶಿಯಂದು ಪೂಜಿಸಬೇಕಲ್ಲವೇ?  ಶಿವನು ಚತುರ್ದಶೇಂದ್ರಿಯ ವಿಜಯೀ  ಹೇಗೆಂದರೆ:
1) ನೇತ್ರೇಂದಿಯ :  ಬಾಹ್ಯವಿಷಯಗಳಿಂದ ತನ್ನ ಕಣ್ಣುಗಳನ್ನು ಒಳಗಡೆಗೆ ಸರಿಸಿಕೊಂಡು ಆತ್ಮನಲ್ಲಿಯೇ ನೆಲೆಗೊಳಿಸಿದ ಧೀರದೇವತೆಯೇ ಶಿವ.
2)  ಶ್ರೋತ್ರೇಂದ್ರಿಯ:  ಪ್ರಾಕೃತ ಶಬ್ದಗಳನ್ನು ಕೇಳದೇ ಸದಾ ಓಂಕಾರನಾದವನ್ನೇ ಶ್ರವಣ ಮಾಡುತಿದ್ದ ಅಂತರ್ಮುಖಿಯೇ ಶಿವ.
3)  ಘ್ರಾಣೇಂದ್ರಿಯ:  ಅನಾತ್ಮವಸ್ತಗಳ ಗಂಧದಿಂದ ದೂರವಿದ್ದವನು ಶಿವ.
4)  ಜಿಹ್ವೇಂದ್ರಿಯ:  ರುಚಿಯನ್ನು ಗೆದ್ದ ಧೀಮಂತನೇ ಶಿವ.
5)  ಚರ್ಮೇಂದ್ರಿಯ:  ಗಜಚರ್ಮಧಾರಿಯಾಗಿ ಸ್ಪರ್ಶಸುಖದಿಂದ ದೂರವಿದ್ದ ತಪೋಮೂರ್ತಿಯೇ ಪರಮಶಿವ.
6)  ವಾಗೀಂದ್ರಿಯ:  ಮೌನಿಯಾಗಿ ನಾಲಿಗೆಯನ್ನು ಗೆದ್ದವನು ಶಿವ.
7)  ಪಾಣೀಂದ್ರಿಯ:  ಹಸ್ತಗಳ ಚಾಪಲ್ಯರಹಿತನಾಗಿ ಶಾಂತನಾಗಿದ್ದವನು ಶಿವ.
8)  ಪಾದೇಂದ್ರಿಯ:  ಎಲ್ಲೂ ಚಲಿಸದ ಕೂಟಸ್ಥನಾಗಿದ್ದ ತಪಸ್ವಿಯಿವನು ಪರಮಶಿವ.
9)  ಪಾಯುಇಂದ್ರಿಯ
10) ಉಪಸ್ಥೇಂದ್ರಿಯ:  ತಪಸ್ಸಿನಲ್ಲಿ ನಿಷ್ಠನಾದ ಪರಮೇಶ್ವರನು ವಿವೇಕವೈರಾಗ್ಯಗಳಿಂದ ಕಾಮಲೀಲೆಗಳನ್ನು ಗೆದ್ದ ಧೀರನು.
11) ಮನಸ್ಸು:  ಆತ್ಮನಿಷ್ಠನಾಗಿ ಮನಶ್ಚಾಂಚಲ್ಯವನ್ನು ಗೆದ್ದವನು.
12)  ಬುದ್ಧಿ:  ತನ್ನಲ್ಲಿಯೇ ತನ್ನ ಬುದ್ದಿಯನ್ನು ಇಟ್ಟುಕೊಂಡಿದ್ದವನು.
13)  ಚಿತ್ತ:  ಚಿತ್ತವೃತ್ತಿಗಳನ್ನೆಲ್ಲ ನಾಶಮಾಡಿಕೊಂಡಿರುವವನು.
14)  ಅಹಂಕಾರ:  ಅಹಂಕಾರಾಸುರನನ್ನು ಭಸ್ಮಮಾಡಿದ ಧೀರ ಶಿವ.
ಹೀಗೆ ಚತುರ್ದಶೇಂದ್ರಿಯಗಳನ್ನು ಜಯಿಸಿದ ತಿಥಿಯೇ ಚತುರ್ದಶೀ ತಿಥಿ.    ಹದಿನಾಲ್ಕು ಲೋಕಗಳಿಗೂ ಪ್ರಭುವಾಗಿರುವ ಪರಮೇಶ್ವರನನ್ನು ಚತುರ್ದಶೀ ದಿನದಂದು ವಿಶೇಷವಾಗಿ ಪೂಜಿಸುವುದು ಯುಕ್ತವೇ ಆಗಿದೆ.

ಶ್ರೀ ಶಿವಾರ್ಪಣಮಸ್ತು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;